ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನ ನೀಡಲು ಆಗ್ರಹ

0
7
loading...

ಜಮಖಂಡಿ: ನಗರದ ಜೆಡಿಎಸ್ ಪಕ್ಷದ ವತಿಯಿಂದ ಬಸವರಾಜ ಹೊರಟ್ಟಿಯವರಿಗೆ ಸಚಿವ ಸ್ಥಾನ ನೀಡಬೆಕೆಂದು ಉಗ್ರ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಯಾಕೂಬ ನದಾಪ ಹಿರಿಯ ಮುಖಂಡರಾದ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕದಿಂದ ಸತತ 7ಬಾರಿ ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದು ಹಾಗೂ ಕರ್ನಾಟಕ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಜೊತೆಯಾಗಿ ಸಂಘಟನೆಯಲ್ಲಿ ಎಲ್ಲ ಕಡೆಯಲ್ಲಿ ಭಾಗಿಯಾಗಿದ್ದು ಹಾಗೂ ಮುಂಬೈ ಕರ್ನಾಟಕದ ಎಲ್ಲ ಜನರಲ್ಲಿ ಒಳ್ಳೆಯ ನಾಯಕರಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಯಾಕೂಬ ನದಾಫ ಒತ್ತಾಯಿಸಿದ್ದಾರೆ.
ಸಿದ್ದನಗೌಡ ಪಾಟೀಲ ಮಾತನಾಡಿ ನಮ್ಮ ಸಮಾಜದ ಹಿರಿಯ ಮುಖಂಡರು ರಾಷ್ಟ್ರೀಯ ಲಿಂಗಾಯತ ಮಹಾ ಸಭಾ ಅಧ್ಯಕ್ಷರಾಗಿದ್ದು ಅವರಿಗೆ ನಮ್ಮ ಸಮಾಜದ ವತಿಯಿಂದ ಹಾಗೂ ನಮ್ಮ ಪಕ್ಷದ ವತಿಯಿಂದ ಅವರಿಗೆ ಸಚಿವ ಸ್ಥಾನ ತಪ್ಪಿದ್ದು ನಮ್ಮಗೆ ತುಂಬಾ ನೋವು ಉಂಟಾಗಿದ್ದು ಕಾರಣ ರಾಷ್ಟ್ರೀಯ ಅಧಕ್ಷ ಮಾಜಿ ಪ್ರಧಾನಿ ದೇವೆಗೌಡ ಅವರು ದಯವಿಟ್ಟು ಉತ್ತರ ಕರ್ನಾಟಕಕ್ಕೆ ಬೇಕಾದ ಪ್ರಬಲ ನಾಯಕರಾದ ಬಸವರಾಜ ಹೊರಟ್ಟಿ ಅವರಿಗೆ ತಾವು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಅಸ್ಲಾಂ ಜಮಾದಾರ, ಶಫೀ ಸಾರವಾನ, ಮುಸಾರ ಜೈನಾಪುರ, ರವಿ ದೊಡಮನಿ, ಗಜು ಆಲಬಾಳ, ಸುರೇಶ, ರತ್ನಾಕರ ಮುತ್ತೂರ, ಅಕ್ಷಯ ಆಲಬಾಳ, ಮುಂತಾದ ಜೆಡಿಎಸ್ ಕಾರ್ಯಕತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

loading...