ಬಾಲ್ಯದಲ್ಲಿಯೆ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಿ: ಕೆ.ಆಯ್. ಅಥಣಿ

0
22
loading...

ಬಾಗಲಕೋಟ : ಬೆಳೆಯುವ ಸಿರಿ ಮೊಳೆಕೆಯಂತೆ ಬಾಲ್ಯದಲ್ಲಿಯೆ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಂದಿನ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕಾದ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಾಗಲಕೋಟ ನವನಗರ ವಿದ್ಯಾಸಾಗರ ಕೋಚಿಂಗ್ ಕ್ಲಾಸೆಸ್‍ನ ಅಧ್ಯಕ್ಷರಾದ ಕೆ. ಆಯ್. ಅಥಣಿ ಹೇಳಿದರು.
ಅವರು ಬಾಗಲಕೋಟ ನವನಗರದ ವಿದ್ಯಾಸಾಗರ ಕೋಚಿಂಗ್ ಸೆಂಟರ್ ಆಶ್ರಯದ ಕಾಳಿದಾಸ ಕಾಲೇಜಿನಲ್ಲಿ 2018-19 ಸಾಲಿನ 45 ದಿವಸಗಳ ಬೇಸಿಗೆ ಬಿಡುವಿನ ವಿಶೇಷ ತರಬೇತಿ ಶಿಬಿರದ ಬೀಳ್ಕೊಡುವ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬದುಕು ರೂಪಿಸಿಕೊಳ್ಳುವ ಬದ್ರ ಭುನಾದಿಯಾಗಿದೆ. ಶಿಕ್ಷಣ ಇಲ್ಲದೇ ಬದುಕು ಶೂನ್ಯ. ಶಿಕ್ಷಣ ಒಂದು ಕಲಿತರೇ ಇಡಿ ಕುಟುಂಬವೇ ನೆಮ್ಮದಿಯಿಂದಿರಲು ಸಾಧ್ಯ. ಮುಂದುವರೆದು ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನ, ಸಾಮಾಜಿಕ ಜ್ಞಾನ, ಕೌಶಲ್ಯಜ್ಞಾನ ಹೀಗೆ ಜ್ಞಾನದ ಸ್ವರೂಪವನ್ನೇ ಬಿತ್ತಿ ಅವರನ್ನ ರಾಷ್ಟ್ರದ ಮುಂದಿನ ಪ್ರಜ್ಞಾವಂತ ನಿರೂಪಕರನ್ನಾಗಿ ತಯಾರಿಸಬೇಕಾದ ಹೊಣೆ ಶಿಕ್ಷಕರ ಮೇಲಿದೆ ಎಂದರಲ್ಲದೇ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಅರಳಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಮಕ್ಕಳ ಕಲ್ಪನೆ ವಿಕಾಸಗೊಳ್ಳಲು ಸೃಜನಶೀಲತೆ ಚಿಗುರಲು ಈ ಶಿಬಿರಗಳು ನೆರವು ನೀಡುತ್ತವೆ ಎಂದರು.ತರಬೇತಿ ಪಡೆದ ವಿದ್ಯಾರ್ಥಿಗಳಾದ ಮಹೇಶ, ಸುಭಾಸ ತಿಮ್ಮನಗೌಡರ ಮಾತನಾಡಿ ಶಿಕ್ಷಣ ಎಂಬುದು ನಮ್ಮ ಜನ್ಮಸಿದ್ದ ಹಕ್ಕು. ಶಿಕ್ಷಣ ಪಡೆಯುವುದರಿಂದ ಸಾವಲಂಬಿ ಜೀವನಕ್ಕೆ ಶಿಕ್ಷಣ ಪೂರಕವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಪರೀಕ್ಷೆ ಹೀಗೆ ಎದುರಿಸಬೇಕೆಂದು ಇಲ್ಲಿನ ಶಿಕ್ಷಕರು ನಮಗೆ ತಿಳಿಸಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿನಿಯರಾದ ಸುಪ್ರೀತಾ ಹಾಗೂ ಅಕ್ಷಿತ ಕೋಲಾರ, ಅಶ್ವಿನಿ ಪೂಜಾರಿ ಮಾತನಾಡಿ ತಮಗೆ ಸಂಸ್ಥೆ ಮರೆಯಲಾರದ ಜ್ಞಾನ ಹಾಗೂ ವಿಶೇಷ ಅನುಭವಗಳನ್ನು ನೀಡಿದ್ದಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಪರ ಮಾತನಾಡಿದ ಸವಿತಾ ಲಕರಡ್ಡಿ ವಿದ್ಯೆ ಎಂಬುದು ಯಾರ ಸ್ವಂತ ಅಲ್ಲ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಶಿಕ್ಷಕರು ಹೇಳುವ ಭೋದನೆಗಳನ್ನು ಮನನ ಮಾಡಿಕೊಂಡು ಅಂದಿನ ವಿಷಯನ್ನ ಅಂದೇ ಮುಗಿಸಿ ಅಂದೇ ಬರೆಯುವುದರ ಮೂಲಕ ಪೂನರ್ ಮನನಮಾಡಿಕೊಂಡು ಶಿಕ್ಷಕರು ಬೊದಿಸುವ ಎಲ್ಲಾ ವಿಷಯಗಳನ್ನು ತಿಳಿಸಿಕೊಂಡು ನಮ್ಮ ಶಿಕ್ಷಣವನ್ನು ಕಲಿಸುವ ಸಲುವಾಗಿ ತಂದೆ-ತಾಯಿಗಳು ಬಂಧುಗಳ ಸಹಕಾರದಿಂದ ಹಾಗೂ ಗುರುಗಳ ನೀತಿ ಬೋಧನೆಗಳು, ಸಂಸ್ಕøತಿ, ಅಧ್ಯಾತ್ಮಿಕತೆಗಳ, ತಿಳಿದುಕೊಳ್ಳಬೇಕಾಗಿದೆ. ತಮ್ಮ ವಿದ್ಯೆಯನ್ನು ನಮಗೆ ಧಾರೆಯರೆದು ಅವರ ಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡು ನಾವು ಉನ್ನತ ಮಟ್ಟಕ್ಕೆ ಏರಿದಾಗ ಮಾತ್ರ ಗುರುಗಳು-ಪಾಲಕರ ಶ್ರಮ ಸಾರ್ಥಕಗೊಳ್ಳುತ್ತದೆ ಎಂದು ಕುಮಾರಿ ಲಕರಡ್ಡಿ ಹೇಳಿದಳು.
ವೇದಿಕೆಯಲ್ಲಿ ಶಿಕ್ಷಕಿ ಹಿಪ್ಪರಗಿ, ವಿದ್ಯಾರ್ಥಿಪಾಲಕರಾದ ಎಂ.ಎಂ. ನದಾಫ್, ಎ.ಜಿ. ನಾಶಿ, ಉಪಸ್ಥಿತರಿದ್ದರು. ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯನ್ನು ಕುಮಾರಿ ಭಾಗ್ಯಶ್ರೀ ಭಾವಿಕಟ್ಟಿ ಮಾಡಿದರು. ಸಂತೋಷ ಪೋತದಾರ್ ಸ್ವಾಗತಿಸಿದರು, ಶಿಕ್ಷಕ ಜೆ.ಜೆ. ಖಾನ್ ನಿರೂಪಿಸಿ ವಂದಿಸಿದರು.

loading...