ಬಿ.ಎ ವಿಭಾಗದ ಎಲ್ಲ ಸೆಮಿಸ್ಟರಗಳಿಗೆ ಮಾಡಿ ಗಣಕ ವಿಜ್ಞಾನ ಕಡ್ಡಾಯ : ರಾಜ್ಯ ಶಾಸ್ತ್ರ ಅಧ್ಯಾಪಕರ ಸಂಘದ ಆಗ್ರಹ

0
30
loading...

ಗುರುವಾರದಂದು ನಗರದ ಬಿ.ಕೆ.ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಎಸ್.ಗಾವಟಿ. ಇತ್ತೀಚಿನ ವರ್ಷಗಳಲ್ಲಿ ಬಿ.ಎ ಪದವಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಇಳಿಮುಖವಾಗುತ್ತಿದೆ.ಬಿ ಎ ಪದವಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಬಿ.ಕಾಂ ಪದವಿ ವಿದ್ಯಾರ್ಥಿಗಳಂತೆ ಬಿ.ಎ ವಿದ್ಯಾರ್ಥಿಗಳಿಗು ಕಂಪ್ಯೂಟರ್ ಶಿಕ್ಷಣ ಕಡ್ಡಾಯಗೊಳಿಸಬೇಕು ಅದಲ್ಲದೆ ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ತಂದು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ,ಟೂರಿಸಮ್ ನಂತಹ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು . ಇದರಿಂದಾಗಿ ಬಿ.ಎ ಪದವಿಗೆ ಇನ್ನಷ್ಟು ಮಹತ್ವ ಬರಲಿದೆ ಎಂದರು

ಈ ವೇಳೆ ಬಿ.ಕೆ.ಕಾಲೇಜಿನ ಪ್ರಾಚಾರ್ಯ ಡಿ.ಎನ್.ಮಿಸಾಳೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು

loading...