ಬಿ.ಸಿ.ಪಾಟೀಲಗೆ ಕೈತಪ್ಪಿದ ಸಚಿವ ಸ್ಥಾನ : ಬೆಂಬಲಿಗರಿಂದ ಪ್ರತಿಭಟನೆ

0
10
loading...

ಹಿರೇಕೆರೂರ: ಶಾಸಕ ಬಿ.ಸಿ.ಪಾಟೀಲಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಬುದವಾರ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜಿಯಾಬೇಗಂ ಅಸದಿ ಮಾತನಾಡಿ, ತಾಲೂಕಿನ ಶಾಸಕ ಬಿ.ಸಿ.ಪಾಟೀಲರು ಅನುಭವಿ ರಾಜಕಾರಣಿಯಾಗಿದ್ದು, ತಾಲೂಕಿನ ಜನತೆ ಈ ಭಾರಿ ನಮ್ಮ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ. ಇದರಿಂದ ತಾಲೂಕು ಅಭಿವೃದ್ಧಿಯಾಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಹೈಕಮಾಂಡನವರು ಕೊನೆಯವರೆಗೂ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಈಗ ಎಕಾಎಕಿ ಕೈಕೊಟ್ಟಿರುವುದು ಖಂಡನೀಯವಾಗಿದೆ. ಇದರಿಂದ ಬೇಸತ್ತ ತಾಲೂಕಿನ ಎಲ್ಲ ಕಾಂಗ್ರೆಸ್ ಪಕ್ಷದ ವಿವಿದ ಪದಾಧಿಕಾರಿಗಳು ಸಾಮೂಹಿಕವಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಚ್ಚರಿಕೆ ನೀಡಿದರು.
ಮುಖಂಡ ನಾಗರಾಜ ಹಿರೇಮಠ ಮಾತನಾಡಿ, ಜಿಲ್ಲೆಯ 6 ಸ್ಥಾನಗಳ ಪೈಕಿ ಈ ಕ್ಷೇತ್ರದಿಂದ ಎಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಬಿ.ಸಿ.ಪಾಟೀಲರು ಆಯ್ಕೆಯಾಗಿದ್ದಾರೆ. ಈ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಗುರುತೆ ಇಲ್ಲದ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹಾಗೂ 36 ವರ್ಷಗಳಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ ಇಂತಹ ಸಂದರ್ಭದಲ್ಲಿ ಶಾಸಕ ಬಿ.ಸಿ.ಪಾಟೀಲರು, ಎರಡು ಪಕ್ಷಗಳಿಂದ ಆಯ್ಕೆಯಾಗಿದ್ದಾರೆ. ಮೂರನೆ ಭಾರಿಗೆ ಶಾಸಕರಾಗಿದ್ದು, ಈ ತಾಲೂಕು 36 ವರ್ಷಗಳಿಂದ ಸಚಿವ ಸ್ಥಾನ ಕಂಡಿಲ್ಲ. ಈ ಭಾರಿಯಾದರೂ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಸ್ಪಷ್ಟ ಭರವಸೆ ಇತ್ತು ಆದರೆ, ಕೊನೆ ಗಳಿಗೆಯಲ್ಲಿ ಪಕ್ಷದ ಹಿರಿಯರು ಬಿ.ಸಿ.ಪಾಟೀಲರಿಗೆ ಕೈಕೊಟ್ಟಿರುವುದು ಕಾರ್ಯಕರ್ತರ, ಅಭಿಮಾನಿಗಳ ಹಾಗೂ ಜನತೆಗೆ ಭಾರಿ ನಿರಾಸೆಯುಂಟಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕಿನ ಜನತೆ ಹಿರೇಕೆರೂರ್ ಬಂದ್ ಕರೆ ನೀಡುವ ಮೂಲಕ ಬಿದಿಗಿಳಿದು ಪ್ರತಿಭಟಿಸಲಿದ್ದಾರೆ ಎಂದರು.

ಪ.ಪಂ ಉಪಾಧ್ಯಕ್ಷೆ ಶಿವಲೀಲಾ ರಂಗಕ್ಕನವರ, ಸದಸ್ಯರಾದ ರಮೇಶ ತೊರಣಗಟ್ಟಿ, ರತ್ನವ್ವ ತಿಪ್ಪಣ್ಣನವರ, ಮುಜೀಬ್ ರಿಕಾರ್ಟಿ, ಮಹ್ಮದ್‍ಹುಸೇನಸಾಬ್ ವಡ್ಡಿನಕಟ್ಟಿ, ಕುಸುಮಾ ಬಣಕಾರ, ಮುಖಂಡರಾದ ಕೆಜೆ ಪ್ರತಾಪ. ದುರ್ಗಪ್ಪ ನೀರಲಗಿ, ಮಂಜುಳಾ ರವಿಶಂಕರ ಬಾಳಿಕಾಯಿ, ಎಸ್.ಎ.ಮುಲ್ಲಾ, ದುರ್ಗೇಶ ತಿರಕಪ್ಪನವರ, ಆನಂದ ನಾಯ್ಕರ್, ಉಮೇಶ ಹಳಕಟ್ಟಿ, ಪ್ರಶಾಂತ ತಿರಕಪ್ಪನವರ ಹಾಗೂ ಕಾರ್ಯಕರ್ತರು ಇದ್ದರು.

loading...