ಬಿ.ಸಿ.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

0
9
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಶಾಸಕ ಬಿ.ಸಿ.ಪಾಟೀಲಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಬಸ್ ನಿಲ್ದಾಣ ಮತ್ತು ಸರ್ವಜ್ಞ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎನ್.ಗಂಗೋಳ ಮಾತನಾಡಿ, ರಾಜ್ಯ ಕಾಂಗ್ರೆಸ್ ಪಕ್ಷದವರು, ಶಾಸಕ ಬಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ನೀಡದೆ ಇರುವದರಿಂದ, ವೀರಶೈವ ಲಿಂಗಾಯತರು ಸೇರಿದಂತೆ ಉತ್ತರ ಕರ್ನಾಟಕದವರನ್ನು ಕಡೆಗಾಣಿಸುತ್ತಿರುವುದು ಅಕ್ಷರಸಹ ಈ ಸಂಗತಿ ನಿಜವಾಗಿದೆ. ಈ ಭಾಗವನ್ನು ಮೊದಲಿನಿಂದಲೂ ಕಡೆಗಾಣಿಸುತ್ತಾ ಬರಲಾಗಿದೆ. ಈ ಭಾರಿಯದರೂ ಅದು ಸುಳ್ಳು ಎಂಬ ನೀರಿಕ್ಷೆಯಲ್ಲಿದ್ದ ನಾವು, ಸಚಿವ ಸ್ಥಾನ ಕೈತಪ್ಪಿದ್ದರಿಂದ ಭರಿ ನಿರಾಸೆಯನ್ನು ಉಂಟುಮಾಡಿದೆ. ಜಿಲ್ಲೆಯ 6 ಸ್ಥಾನಗಳ ಪೈಕಿ ಈ ಕ್ಷೇತ್ರದಿಂದ ಎಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಬಿ.ಸಿ.ಪಾಟೀಲರು ಆಯ್ಕೆಯಾಗಿದ್ದಾರೆ. ಈ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಗುರುತೆ ಇಲ್ಲದ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹಾಗೂ 36 ವರ್ಷಗಳಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ ಇಂತಹ ಸಂದರ್ಭದಲ್ಲಿ ಶಾಸಕ ಬಿ.ಸಿ.ಪಾಟೀಲರು, ಎರಡು ಪಕ್ಷಗಳಿಂದ ಆಯ್ಕೆಯಾಗಿದ್ದಾರೆ. ಮೂರನೆ ಭಾರಿಗೆ ಶಾಸಕರಾಗಿದ್ದು, ಈ ತಾಲೂಕು 36 ವರ್ಷಗಳಿಂದ ಸಚಿವ ಸ್ಥಾನ ಕಂಡಿಲ್ಲ. ಈ ಭಾರಿಯಾದರೂ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಸ್ಪಷ್ಟ ಭರವಸೆ ಇತ್ತು ಆದರೆ, ಕೊನೆ ಗಳಿಗೆಯಲ್ಲಿ ಪಕ್ಷದ ಹಿರಿಯರು ಬಿ.ಸಿ.ಪಾಟೀಲರಿಗೆ ಕೈಕೊಟ್ಟಿರುವುದು ಕಾರ್ಯಕರ್ತರ, ಅಭಿಮಾನಿಗಳ ಹಾಗೂ ಜನತೆಗೆ ತೀವ್ರ ನೋವನ್ನು ಉಂಟುಮಾಡಿದೆ. ಇದರಿಂದ ಮುಂಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದ್ದು, ತಾಲೂಕಿನ ಜನರಲ್ಲಿ ಚರ್ಚಿಸಿ ಮುಂದೆ ಸೂಕ್ತ ನಿರ್ಧಾರ ತಗೆದುಕೊಳ್ಳುವುದಾಗಿ ತಿಳಿಸಿದರು.
ಜಿ.ಪಂ ಸದಸ್ಯರಾದ ಎಸ್.ಕೆ.ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, ಪ.ಪಂ ಅಧ್ಯಕ್ಷೆ ರಜಿಯಾ ಅಸಾದಿ, ಉಪಾಧ್ಯಕ್ಷೆ ಶಿವಲೀಲಾ ರಂಗಕ್ಕನರ, ಕುಸುಮಾ ಬಣಕಾರ, ಕವಿತಾ ಭರಮಗೌಡರ, ದುರ್ಗಪ್ಪ ನೀರಲಗಿ, ವಿ.ವಿ.ಹಿತ್ತಲಮನಿ, ಅಶೋಕ ಜಾಡಬಂದಿ, ಕುಮಾರ ಹಾಲೋನವರ, ಮಹಮ್ಮದ ವಡ್ಡಿನಕಟ್ಟಿ, ರಮೇಶ ತೊರಣಗಟ್ಟಿ, ಗುರಶಾಂತ ಯತ್ತಿನಹಳ್ಳಿ, ವಿನಯ್ ಪಾಟೀಲ, ಪ್ರದೀಪ ರಾಯ್ಕರ್, ಪ್ರಶಾಂತ ತಿರಕ್ಕಪ್ಪನವರ, ಸತೀಶ ತಂಬಾಕದ, ಜಿಲಾನಿ ಬಳಿಗಾರ, ಮಂಜುನಾಥ ತಂಬಾಕದ, ಆನಂದ ನಾಯ್ಕರ್, ಪರುಶುರಾಮ ಚನ್ನಳ್ಳಿ, ಉಮೇಶ ಹಳಕಟ್ಟಿ ಹಾಗೂ ಮತ್ತಿತರರು ಇದ್ದರು.


ಇದೆ ವೇಳೆ ತಾಲೂಕಿನ ಅರಳಿಕಟ್ಟಿ ಗ್ರಾಪಂ ಮಾಜಿ ಸದಸ್ಯ ಪುಟ್ಟೇಶ ಗೊರವರ ಶಾಸಕ ಬಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ನೀಡದೆ ಇರುವದರಿಂದ ಮನನೊಂದು ಪ್ರತಿಭಟನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿತು. ಅಷ್ಟರಲ್ಲಿ ಕಾರ್ಯಕರ್ತರು, ಮುಖಂಡರು ಕೂಡಲೆ ವಿಷದ ಬಾಟಲಿಯನ್ನು ಕಸಿದುಕೊಂಡಿದ್ದರಿಂದ ಆತ್ಮಹತ್ಯೆ ಯತ್ನ ವಿಫಲವಾದ ಘಟನೆ ಜರುಗಿತು.

loading...