ಬೂದಿಹಾಳದಲ್ಲಿ ವಿಶೇಷದಾಖಲಾತಿ ಆಂದೋಲನ

0
12
loading...

ಬೀಳಗಿ: ತಾಲೂಕಿನ ಬೂದಿಹಾಳ (ಎಸ್ ಜಿ) ಗ್ರಾಮದಲ್ಲಿ ಯಡಹಳ್ಳಿ ಸಂಪನ್ಮೂಲ ಕೇಂದ್ರದ ವಿಶೇಷ ದಾಖಲಾತಿ ಆಂದೋಲವು ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರತಿ ಬೀದಿಯಲ್ಲಿ ಸಂಚರಿಸಿ ಪ್ರಭಾತಪೇರಿ ನಡೆಸುವ ಮೂಲಕ ಘೋಷಣೆಹಾಕಿ ಗಮನ ಸೆಳೆಯಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ದೈಹಿಕ ವಿಷಯ ಪರಿವೀಕ್ಷಕರಾದ ಜಿ.ಎಂ ಮಾಟಲದಿನ್ನಿಯವರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಈ ದಾಖಲಾತಿ ಕಾರ್ಯಕ್ರಮ ತುಂಬಾ ಸಹಕಾರಿಯಾಗಿದ್ದು ಅರ್ಹ ವಯಸ್ಸಿನ ಮಗು ಶಿಕ್ಷಣ ಪಡೆಯುವುದು ಸಂವಿಧಾನದ ಹಕ್ಕಾಗಿದೆ ಎಂದು ಹೇಳಿದರು. ಪ್ರಸ್ತಾವಿಕವಾಗಿ ಮಾತನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶರವರು ಖಾಸಗಿ ಶಾಲೆಗಳ ಜೊತೆ ಸರಕಾರಿ ಶಾಲೆಗಳು ಸಾಕಷ್ಟು ಪೈಪೋಟಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸರಕಾರದಿಂದ ಸಾಕಷ್ಟು ಸೌಲಭ್ಯಗಳು ವಿಧ್ಯಾರ್ಥಿಗಳಿಗೆ ಲಭ್ಯವಿದ್ದು ಈ ಬಗ್ಗೆ ತಿಳಿಸುವದರೊಂದಿಗೆ ಪಾಲಕರಲ್ಲಿ ಸಕಾರಾತ್ಮಕ ಮನೋಭಾವನೆ ಮೂಡಿಸಿ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಯತ್ನಿಸಬೇಕಾಗಿದೆ ಎಂದರು ಕಾರ್ಯಕ್ರದಲ್ಲಿ ಅತಿಥಿಗಾಳಾಗಿ ಪಾಲ್ಗೊಂಡ ಕ್ಷೇತ್ರ ಸಂಪನ್ಮೂಲವ್ಯಕ್ತಿ ಜಿ ಜಿ ಹಿರೇಮಠ ಮಾತನಾಡಿ ಅರ್ಹವಯಸ್ಸಿನ ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ ಒದಗಿಸುವುದು, ಎಲ್ಲಾಮಕ್ಕಳೂ ಶಾಲೆಯಿಂದ ಹೊರಗುಳಿಯದೇ ದಾಖಲಾಗುವುದು ಮತ್ತು ದಾಖಲಾದ ಎಲ್ಲಾ ಮಕ್ಕಳೂ ಶಾಲೆಯಲ್ಲಿ ಉಳಿಯಬೇಕು ಎನ್ನುವುದು ಶಿಕ್ಷಣ ಹಕ್ಕು ಕಾಯಿದೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಎ.ಎಸ್ ಪಾಟೀಲ, ವಿ.ಜಿ ಢವಳೇಶ್ವರ, ಗ್ರಾಮ ಪಂಚಾಯತ ಸದಸ್ಯರು, ಎಸ್‍ಡಿಎಮ್‍ಸಿ ಪದಾಧಿüಕಾರಿಗಳು, ಗ್ರಾಮದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಶಾಲೆಯ ಶಿಕ್ಷಕರು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಮ್ ಎಲ್ ಜೈನಾಪೂರ ಸ್ವಾಗತಿಸಿದರು. ಸಂತೋಷ ಗೋಗಿ ನಿರೂಪಿಸಿದರು. ಟಿ ವಾಯ್ ಕೂಗಟಿ ವಂದಿಸಿದರು.

loading...