ಬೆಳೆವಿಮೆ ಸಮಸ್ಯೆಯನ್ನು ತ್ವರಿತವಾಗಿ ಪರಿಹಾರಕ್ಕೆ ಸೂಚನೆ

0
11
loading...

ಕನ್ನಡಮ್ಮ ಸುದ್ದಿ- ಹಾವೇರಿ : ಫಸಲ್ ಭೀಮಾ ಯೋಜನೆ, ಕೃಷಿ ಉಪಕರಣಗಳ ಸಬ್ಸಿಡಿ, ವೃದ್ಧಾಪ್ಯ ವೇತನ ಹಾಗೂ ಉದ್ಯೊÃಗ ಖಾತ್ರಿ ಕೂಲಿ ಹಣ ಬ್ಯಾಂಕಿಗೆ ಜಮೆಯಾದರೆ ಫಲಾನುಭವಿಗಳ ಸಾಲಕ್ಕೆ ಜಮಾಮಾಡಿಕೊಳ್ಳದಂತೆ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಲು ಹಾವೇರಿ ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ(ದಿಶಾ) ತ್ರೆöÊಮಾಸಿಕ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ನಡೆಸಿದ ಅವರು ವಿವಿಧ ಯೋಜನೆಗಳಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮವಾಗುವ ಸಹಾಯಧನ, ಕೂಲಿಹಣ ಹಾಗೂ ವಿಮಾ ಪರಿಹಾರ ಹಣವನ್ನು ಫಲಾನುಭವಿಗಳ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ದೂರುಗಳು ಬರುತ್ತಿವೆ. ಸರ್ಕಾರದ ನಿಯಮಾವಳಿಯಂತೆ ಈ ಹಣವನ್ನು ಯಾವುದೇ ಕಾರಣಕ್ಕೂ ಫಲಾನುಭವಿಗಳ ಸಾಲಕ್ಕೆ ಮರುಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ. ಈ ಕುರಿತಂತೆ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೆÃಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೆÃಶನ ನೀಡಿದರು.
೨೦೧೫-೧೬ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮಾ ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಬೆಳೆವಿಮೆ ಪಾವತಿ ಕುರಿತಂತೆ ಹಾಗೂ ೨೦೧೬ನೇ ಸಾಲಿನ ಭತ್ತದ ಬೆಳೆಯ ವಿಮಾ ಪ್ರಕರಣಗಳ ಕುರಿತಂತೆ ತ್ವರಿತವಾಗಿ ಸಮಸ್ಯೆಯನ್ನು ನಿವಾರಿಸಿ ರೈತರಿಗೆ ಸ್ಪಷ್ಠಿÃಕರಣ ನೀಡಿ ಸಮಸ್ಯೆ ಬಗೆಹರಿಸಿ ಪರಿಹಾರ ಹಣ ಪಾವತಿಮಾಡಬೇಕಾದರೆ ಈ ಕುರಿತಂತೆ ಕ್ರಮವಹಿಸಿ. ಒಂದೊಮ್ಮೆ ಪುನರಾವರ್ತನೆಯಾಗಿದ್ದರೆ ದಾಖಲೆ ಸಹಿತ ರೈತರಿಗೆ ಸ್ಪಷ್ಟಿÃಕರಣ ನೀಡಿ ವಿಷಯವನ್ನು ಮುಕ್ತಾಯಗೊಳಿಸಿ ಎಂದು ಕೃಷಿ ಇಲಾಖೆ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಸದರು ಸೂಚನೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೆÃಶಕರು ೨೦೧೫-೧೬ನೇ ಸಾಲಿನ ಬೆಳೆ ವಿಮೆ ಕುರಿತಂತೆ ಮಾಹಿತಿ ನೀಡಿ, ೮೩೭೬೬ ಫಲಾನುಭವಿಗಳಿಗೆ ೧೨೩ ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಯಾಗಿದೆ. ಈ ಪೈಕಿ ಪರಿಶೀಲನೆ ನಡೆಸಿ ೮೦,೯೧೦ ಫಲಾನುಭವಿಗಳಿಗೆ ೧೧೮ ಕೋಟಿ ರೂ.ಗಳ ಪರಿಹಾರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಬಾಕಿ ೨೬೫೦ ಫಲಾನುಭವಿಗಳಿಗೆ ೬.೬೧ ಕೋಟಿ ರೂ.ಪಾವತಿಸಬೇಕಾಗಿದೆ. ಒಂದೇ ಸರ್ವೇ ನಂಬರಿನ ಬೆಳೆಗೆ ಎರೆಡೆರಡು ಬ್ಯಾಂಕುಗಳಲ್ಲಿ ವಿಮಾ ತುಂಬಿರುವುದು ಸೇರಿದಂತೆ ಇತರ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸಿ ಬಗೆಹರಿಸಲಾಗುವುದೆಂದು ತಿಳಿಸಿದರು.
ಇದೆ ವಿಷಯಕ್ಕೆ ಸಂಬಂಧಿಸಿದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವಿವರಣೆ ನೀಡಿ ಬೆಳೆ ವಿಮೆ ನೋಂದಾಯಿತರ ಪೈಕಿ ೨೨೦೩ ರೈತರಿಗೆ ೬.೪೧ ಕೋಟಿ ರೂ. ಮಾತ್ರ ವಿಮೆ ಪಾವತಿಸಲು ಬಾಕಿ ಉಳಿದಿದೆ. ಆದರೆ ಪುನರಾವರ್ತನೆ ಕಾರಣ ಹಾಗೂ ಈ ರೈತರು ವಿಮೆ ಪಡೆಯಲು ಅನರ್ಹ ಎಂಬ ಕಾರಣಕ್ಕೆ ತಡೆಹಿಡಿಯಲಾಗಿದೆ. ಇಂತಹ ಪ್ರಕರಣಗಳು ಕೆ.ವಿ.ಜಿ. ಬ್ಯಾಂಕಿನಲ್ಲಿ ಹೆಚ್ಚು ಪ್ರಕರಣಗಳಿರುವುದರಿಂದ ಸದರಿ ಬ್ಯಾಂಕಿಗೆ ವಿವರ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಕುರಿತಂತೆ ಸಂಸದರಾದ ಶಿವಕುಮಾರ ಉದಾಸಿ ಹಾಗೂ ಶಾಸಕರಾದ ಸಿ.ಎಂ.ಉದಾಸಿ, ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ಒಂದೇ ಸರ್ವೇನಂಬರಿನಲ್ಲಿ ಬೇರೆ ಬೇರೆ ಬ್ಯಾಂಕಿನಲ್ಲಿ ಹೆಸರು ನೋಂದಣಿ ಮಾಡಿದ್ದರೆ ದಾಖಲೆ ಸಹಿತ ರೈತರಿಗೆ ಮಾಹಿತಿ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿ ಹಾಗೂ ಒಂದೇ ಸರ್ವೇ ನಂಬರಿಗೆ ಎರೆಡೆರಡು ಬಾರಿ ವಿಮಾ ಪರಿಹಾರ ಪಡೆದಿದ್ದರೆ ಅಂತವರ ಮೇಲೆ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ. ಬೆಳೆ ವಿಮೆ ಬಾಕಿ ಕುರಿತ ಪ್ರಕರಣವನ್ನು ಸಕಾರಣ ಸಹಿತ ರೈತರಿಗೆ ವಿವರಣೆ ನೀಡಿ ಸಮಸ್ಯೆಯನ್ನು ಶಾಶ್ವತ ಪರಿಹರಿಸಿ ಎಂದು ಸೂಚನೆ ನೀಡಿದರು.
೨೦೧೬ನೇ ಸಾಲಿನ ಭತ್ತದ ಬೆಳೆವಿಮೆ ಕುರಿತಂತೆ ೧೦.೫೪ಕೋಟಿ ರೂ. ಬಾಕಿ ಇದೆ. ಈ ಕುರಿತಂತೆ ರಾಜ್ಯ ಮಟ್ಟದ ಸಭೆಯಲ್ಲಿ ಸಮಸ್ಯೆ ಬಗೆಹರಿಸಲಾಗಿದೆ. ತ್ವರಿತ ಕ್ರಮವಹಿಸುವಂತೆ ಸೂಚನೆ ನೀಡಿದರು.

ಉದ್ಯೊÃಗ ಖಾತ್ರಿ ಯೋಜನೆಯಡಿ ಶೇ.೯೨ರಷ್ಟು ಆಧಾರ್ ಸೀಡಿಂಗ್ ಶೇ.೫೨ ರಷ್ಟು ಆಧಾರ್ ಲಿಂಕೇಜ್ ಮಾಡಿರುವ ಕುರಿತಂತೆ ಮಾಹಿತಿ ನೀಡಲಾಗಿದೆ. ಆರ್.ಟಿ.ಜಿ.ಎಸ್. ಮೂಲಕವೇ ಕೂಲಿ ಹಣ ಪಾವತಿ ಮಾಡುವುದರಿಂದ ಶೇ.೧೦೦ರಷ್ಟು ಕೂಲಿಕಾರರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕೇಜ್ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ. ಇಲ್ಲವಾದರೆ ಹಣದ ದುರುಪಯೋಗ ಹಾಗೂ ಆಡಿಟ್ ಆಕ್ಷೆÃಪಣೆ ಸಹ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಉದ್ಯೊÃಗ ಖಾತ್ರಿ ಯೋಜನೆಯಡಿ ಜೂನ್-ಜುಲೈಯೊಳಗೆ ಪೂರ್ಣ ಪ್ರಮಾಣದಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಶೇ.೬೦ರಷ್ಟು ಸಂಪನ್ಮೂಲ ಸೃಜಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಅರಣ್ಯಿÃಕರಣ, ಕೃಷಿಹೊಂಡ, ಜಲಾನಯನ ಅಭಿವೃದ್ಧಿ, ರೇಷ್ಮೆ, ಅರಣ್ಯ, ತೋಟಗಾರಿಕೆ ಸೇರಿದಂತೆ ಕೃಷಿ ಅರಣ್ಯಿÃಕರಣ ಕಾಮಗಾರಿಗಳಿಗೆ ಆದ್ಯತೆ ನೀಡಿ ಕ್ರಮವಹಿಸುವಂತೆ ಸೂಚಿಸಿದರು.

ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಜನಸಾಂದ್ರತೆ ಮತ್ತು ವಾಹನ ಸಾಂದ್ರತೆಯ ಮೇಲೆ ಆಯ್ಕೆಮಾಡಿ ಅಂಕಗಳ ಆಧಾರದ ಮೇಲೆ ಕಾಮಗಾರಿಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡುತ್ತಿದೆ. ಈ ಅಂಶಗಳು, ಮಾನದಂಡ ಆಧರಿಸಿ ಕಾಮಗಾರಿಗಳನ್ನು ಆಯ್ಕೆಮಾಡಿ ಪೂರ್ವ ಸಿದ್ಧತೆ ಕ್ರಮವಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ವಯೋವೃದ್ಧರಿಗೆ ಪ್ರತಿ ವರ್ಷ ಬಯೋಮೆಟ್ರಿಕ್ ನೀಡಲು ಬ್ಯಾಂಕ್‌ಗಳಿಂದ ಸೂಚನೆ ನೀಡಲಾಗಿದೆ. ಆದರೆ ಸ್ಥಳೀಯವಾಗಿ ಈ ವ್ಯವಸ್ಥೆ ಕಲ್ಪಿಸದೆ ಹುಬ್ಬಳ್ಳಿಗೆ ತೆರಳಿ ಬಯೋಮೆಟ್ರಿಕ್ ನೀಡಲು ಸೂಚನೆ ನೀಡಲಾಗುತ್ತಿದೆ. ಇದರಿಂದ ಅಶಕ್ತರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಈ ವಿಷಯ ಕುರಿತಂತೆ ಗಂಭೀರವಾಗಿ ಪರಿಗಣಿಸಿ ಕನಿಷ್ಠ ತಾಲೂಕಾ ಮಟ್ಟದಲ್ಲಿ ಬಯೋಮೆಟ್ರಿಕ್ ನೀಡುವ ವ್ಯವಸ್ಥೆ ಮಾಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ವ್ಯಕ್ತಿ ಮರಣಹೊಂದಿದ ೨೪ ತಾಸಿನಲ್ಲಿ ಶವ ಸಂಸ್ಕಾರ ಯೋಜನೆಯಡಿ ಪರಿಹಾರ ಹಣ ಕುಟುಂಬ ವರ್ಗಕ್ಕೆ ತಲುಪಬೇಕು. ಆದರೆ ಕಾರಣಾಂತರಗಳಿಂದ ಶವಸಂಸ್ಕಾರ ಪರಿಹಾರ ಹಣ ಕುಟುಂಬಕ್ಕೆ ತಲುಪಲು ವಿಳಂಬವಾಗುತ್ತಿದೆ. ಈ ಯೋಜನೆಯ ಅನುದಾನ ಫಲಾನುಭವಿಗೆ ತಲುಪಲು ಖಜಾನೆಯಲ್ಲಿ ಕೆ-೨ ವ್ಯವಸ್ಥೆಯಡಿ ತರಲಾಗಿದೆ. ಫಲಾನುಭವಿಗಳ ಹೆಸರು ನೋಂದಣಿಯಾಗಿ ಹಣ ತಲುಪಲು ೭೨ ತಾಸು ಬೇಕಾಗುತ್ತದೆ. ಈ ಕಾರಣದಿಂದ ಯೋಜನೆಯ ಮೂಲ ಉದ್ದೆÃಶವೇ ಸಫಲವಾಗುವುದಿಲ್ಲ. ಕೆ-೨ ವ್ಯವಸ್ಥೆಯಿಂದ ಶವಸಂಸ್ಕಾರ ಯೋಜನೆಯ ಅನುದಾನ ವಿತರಣೆ ವ್ಯವಸ್ಥೆಯನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡು ಮೃತರಾದ ಕುಟುಂಬಕ್ಕೆ ೨೪ ತಾಸಿನಲ್ಲಿ ಹಣ ದೊರೆಯುವಂತೆ ಕ್ರಮವಹಿಸಲು ಸೂಚನೆ ನೀಡಿದರು.
ಕಪ್ಪುಪಟ್ಟಿಗೆ ಸೇರಿಸಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ನೀರಿನ ಘಟಕಗಳ ಪೈಕಿ ಬಹುಪಾಲು ನೀರಿನ ಘಟಕಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಳಿಸಲಾಗಿದೆ. ಕಳಪೆಮಟ್ಟದ ಫಿಲ್ಟರ್‌ಗಳನ್ನು ಅಳವಡಿಸಿರುವುದರಿಂದ ಪದೆ ಪದೆ ದುರಸ್ತಿಗೆ ಬರುತ್ತಿವೆ. ಸರ್ಕಾರದ ವತಿಯಿಂದ ಸ್ಥಾಪಿಸಲಾದ ಶುದ್ಧ ನೀರಿನ ಘಟಕಗಳು ಮಾತ್ರ ಈ ರೀತಿಯ ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ. ಆದರೆ ಕಡಿಮೆ ಖರ್ಚಿನಲ್ಲಿ ಧರ್ಮಸ್ಥಳದ ಸಂಸ್ಥೆಯವರು ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳು ಯಾವುದೇ ತೊಂದರೆ ಎದುರಿಸುತ್ತಿಲ್ಲ. ಈ ಕುರಿತಂತೆ ಸರ್ವೆ ನಡೆಸಿ ಕಳಪೆ ಫಿಲ್ಟರ್ ಅಳವಡಿಸಿದ ಕಂಪನಿಗಳಿಗೆ ನೋಟಿಸ್ ಜಾರಿಮಾಡಿ ಕಪ್ಪುಪಟ್ಟಿಗೆ ಸೇರಿಸಿ. ಸ್ಥಾಪಿಸಲು ಬಾಕಿ ಉಳಿದಿರುವ ಶುದ್ಧ ನೀರಿನ ಘಟಕಗಳನ್ನು ಬೇರೆ ಏಜೆನ್ಸಿಗಳಿಗೆ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಕ್ರಮವಹಿಸುವಂತೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಸಂಸದರು ಹಾಗೂ ಶಾಸಕರು ಸೂಚನೆ ನೀಡಿದರು.

ತರಾಟೆ: ಪ್ರಧಾನಮಂತ್ರಿ ನಗರ ಆವಾಸ್ ಯೋಜನೆಯಡಿ ನಿವೇಶನ ರಹಿತರಿಗೆ ಹಾಗೂ ನಿವೇಶನ ಹೊಂದಿದವರಿಗೆ ಮನೆ ನಿರ್ಮಾಣ ಕುರಿತಂತೆ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಯೋಜನೆಯ ಮಾನದಂಡ ಕುರಿತಂತೆ ವಿವರಣೆ ನೀಡಲು ನಗರಾಭಿವೃದ್ಧಿ ಕೋಶದ ಯೋಜನಾ ಅಭಿಯಂತರರು ತಡಬಡಾಯಿಸಿದ್ದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು. ಯೋಜನೆಯ ಮಾಹಿತಿ ಏನಪ್ಪಾ, ಮಾನದಂಡಾ ಏನಪ್ಪಾ, ಮೀಟಿಂಗ್‌ಗೆ ಬರಬೇಕಾದರೆ ಮಾಹಿತಿ ತರಬೇಕೆಂಬ ಜ್ಞಾನವಿಲ್ವೆÃನಪ್ಪಾ. ಕನಿಷ್ಠ ನಿನ್ನಹತ್ರ ಸ್ಮಾರ್ಟ್ ಫೋನ್ ಇಲ್ವಾ ಗೋಗಲ್ ಸರ್ಚಮಾಡಿದ್ರೆ ಸಂಪೂರ್ಣ ಮಾಹಿತಿ ಸಿಗಲ್ವಾ ಎಂದು ತರಾಟೆ ತೆಗೆದುಕೊಂಡರು. ಕೊನೆಗೂ ಮಾಹಿತಿ ನೀಡಲು ವಿಫಲವಾದಾಗ ಸಂಸದರೆ ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಸೈಟ್‌ನಲ್ಲಿ ಮಾಹಿತಿ ಹುಡುಕಿ ಅಭಿಯಂತರರಿಗೆ ತೋರಿಸಿದರು.
ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ, ಸ್ವಚ್ಛಭಾರತ ಯೋಜನೆ, ಕೇಂದ್ರ ಜಲಾನಯನ ಯೋಜನೆ, ಆರೋಗ್ಯ, ಅಕ್ಷರದಾಸೋಹ, ಸರ್ವ ಶಿಕ್ಷಣ ಅಭಿಯಾನ, ಸಾಂಸ್ಥಿಕ ಹೆರಿಗೆ ಪ್ರಮಾಣ ಒಳಗೊಂಡಂತೆ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು.

ಸಭೆಯಲ್ಲಿ ಶಾಸಕರಾದ ಸಿ.ಎಂ.ಉದಾಸಿ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕಿನ ತಹಶೀಲ್ದಾರರು, ನಗರಸಭೆ,ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಉಪಸ್ಥಿತರಿದ್ದರು.

 

loading...