ಬೇರು ಮಟ್ಟದಿಂದ ಪಕ್ಷ ಸಂಘಟಿಸಬೇಕು: ಸಚಿವ ಎಂ.ಸಿ. ಮನಗೂಳಿ

0
12
loading...

ವಿಜಯಪುರ: ಜೆಡಿಎಸ್ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು, ಬೇರು ಮಟ್ಟದಿಂದ ಪಕ್ಷ ಸಂಘಟಿಸಬೇಕು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಎಂ.ಸಿ. ಮನಗೂಳಿ ಹೇಳಿದರು.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಜೆಡಿಎಸ್ ಕಾರ್ಯಾಲಯಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಲವು ವರ್ಷಗಳ ಬಳಿಕ ಜೆಡಿಎಸ್ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನರ ಸೇವೇ ಮಾಡುವುದರೋಂದಿಗೆ ಪಕ್ಷ ಸಂಘಟಿಸಬೇಕು. ಆ ಮೂಲಕ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕು. ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರ ಪಡೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಹಿಂದಿನ 20 ತಿಂಗಳ ಜೇಡಿಎಸ್ ಸರಕಾರದ ಸಾಧನೆಗಳು ಹಾಗೂ ಹಾಲಿ ಸರಕಾರ ಜಾರಿಗೋಳಿಸುತ್ತಿರುವ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.
ಪಕ್ಷಕ್ಕೆ ನಿಷ್ಠರಾಗಿ ದುಡಿದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉಜ್ವಲ ಭವಿಷ್ಯವಿದೆ. ಹಾಗಾಗಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಪ್ರತಿಫಲಾಪೇಕ್ಷಯಿಲ್ಲದೇ ಸಂಗಟನೆಗೆ ಮುಂದಾಗಬೇಕು. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರನ್ನು ನಾನ್ನು ಮರೆಯಲಾರೆ. ಅವರನ್ನು ವಿಶ್ವಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೆನೆ. ನನ್ನ ಆಡಳಿತ ವೈಖರಿಗೆ ಪ್ರತಿಯೊಬ್ಬರೂ ಸಹಕಾರವು ಅಗತ್ಯವಾಗಿದೆ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರಿಯಾಜ್ ಫಾರೂಕಿ, ಮಲ್ಲಿಕಾರ್ಜುನ ಯಂಡಿಗೇರಿ, ಚಂದ್ರಕಾಂತ ಹಿರೇಮಠ, ದಿಲಾವರ್ ಖಾಜಿ, ರಾಜು ಹಿಪ್ಪರಗಿ, ಎಸ್,ಎಸ್, ಖಾದ್ರಿ, ಇನಾಂದರ, ಬಸವರಾಜ ಹೊನವಾಡ, ಸಿದ್ದು ಕಾಮತ್, ಕೌಸರ್ ಶೇಖ, ಮಹಾದೇವಿ ತಳಕೇರಿ, ರಮೀಜಾ ನದಾಫ್, ಹಂಜಾ ಹೊನ್ನಟಗಿ ಮೊದಲಾದವರು ಉಪಸ್ಥಿತರಿದ್ದರು.7777

loading...