ಬ್ಯಾಟಿಂಗ್ ಹಿಂದಿರುವ ಸತ್ಯ ಬಿಚ್ಚಿಟ್ಟ ಜಾಸ್ ಬಟ್ಲರ್,

0
13
loading...

ಮ್ಯಾಂಚೆಸ್ಟರ್​: ಆಸ್ಟೆçÃಲಿಯಾ ವಿರುದ್ಧ ಕೊನೆ ಏಕದಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದ ಜಾಸ್ ಬಟ್ಲರ್ ತಮ್ಮ ಆಟದ ವೈಖರಿ ಹಾಗೂ ಬ್ಯಾಟಿಂಗ್ ಹಿಂದೆ ಇರುವ ಸ್ಫೂರ್ತಿ ಯಾರು ಎನ್ನುವದರ ಬಗ್ಗೆ ಹೇಳಿದ್ದಾರೆ.
ನನ್ನ ಬ್ಯಾಟಿಂಗ್ ಶೈಲಿಯಲ್ಲಿ ಬದಲಾಗಿದೆ ಎಂದರೆ ಅದು ಟೀಂ ಇಂಡಿಯಾ ಕೀಪರ್ ಎಂ.ಎಸ್ ಧೋನಿ ಅಲ್ಲದೆ ಬೇರೆ ಯಾರು ಅಲ್ಲ ಎಂದು ಹೇಳಿದ್ದಾರೆ.
ತಂಡದ ೨೪ ಕ್ಕೆ ೪ ವಿಕೆಟ್​ ಕಳೆದುಕೊಂಡಿದ್ದಾಗ ಕ್ರೀಸ್​ಗೆ ಆಗಮಿಸಿದ ಬಟ್ಲರ್​ ವಿಕೆಟ್​ ಉರುಳುತ್ತಿದ್ದರು, ಏಕಾಂಗಿಯಾಗಿ ಹೋರಾಡಿ ಒಂಭತ್ತನೇ ವಿಕೆಟ್​ ಜೊತೆಯಾಟದಲ್ಲಿ ಅದಿಲ್​ ರಶೀದ್ ​​ಜೊತೆಗೂಡಿ ಉತ್ತಮ ಜೊತೆಯಾಟ ನೀಡಿದ್ದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿ ಕ್ರಿಕೆಟ್​ ಜಗತ್ತಿನ ಗಮನ ಸೆಳೆದಿದ್ದರು.
೧೨೨ ಎಸೆತ ಎದುರಿಸಿದ ಬಟ್ಲರ್ ೧೨ ಬೌಂಡರಿ , ೧ ಸಿಕ್ಸರ್​ ಸಹಿತ ೧೧೦ ರನ್​ ಗಳಿಸಿದ್ದರು. ತಂಡದ ಗೆಲುವಿನ ನಂತರ ಪ್ರತಿಕ್ರಿಯಿಸಿದ ಬಟ್ಲರ್​ ಇಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಆಡಲು ನನಗೆ ಧೋನಿ ಸ್ಫೂರ್ತಿ ತಂದಿದ್ದಾರೆ. ಇಂತಹ ಸಂರ್ಭದಲ್ಲಿ ಧೋನಿ ತಾಳ್ಮೆಯಿಂದ ಆಡುತ್ತಾರೆ. ಅಲ್ಲದೆ ಹಲವಾರು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ತಂಡಕ್ಕೆ ಅಂತಹ ಪರಿಸ್ಥಿತಿ ಎದುರಾಗಿದ್ದು ನಾನು ಧೋನಿ ಆಟವನ್ನು ಕಲ್ಪನೆ ಮಾಡಿಕೊಂಡೆ. ಅವರ ರೀತಿಯಲ್ಲಿ ತಂತ್ರಗಾರಿಕೆಯನ್ನು ಅನುಸರಿಸಿದೆ ಎಂದಿದ್ದಾರೆ.
ಕ್ರಿಕೆಟ್​ ಜಗತ್ತಿನಲ್ಲಿ ಬೆಸ್ಟ್​ ಫಿನಿಸಿಂಗ್​ ಆಟಗಾರ ಧೋನಿ ಅಥವಾ ಬಟ್ಲರ್​ ಎಂದು ಚರ್ಚೆಯಾಗುಗುತ್ತಿದೆ. ಆದರೆ ಸ್ವತಃ ಬಟ್ಲರ್​ ನನಗೆ ಧೋನಿ ಆಟವೇ ಸ್ಫೂರ್ತಿ ಎಂದಿರುವುದು ಚರ್ಚೆಗೆ ಒಂದು ರೀತಿ ವಿರಾಮ ನೀಡಿದಂತಾಗಿದೆ.

loading...