ಮಂತ್ರಿ ಸ್ಥಾನ ತಪ್ಪಲು ರಮೇಶ ಕಾರಣ : ಸತೀಶ ಜಾರಕಿಹೊಳಿ

0
88
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಯಾರಿಗೆ ಮಂತ್ರಿ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭ ಎನ್ನುವುದನ್ನು ಪಕ್ಷದ ನಾಯಕರು ತಿರ್ಮಾನಿಸಬೇಕು. ನನಗೆ ಸಚಿವ ಸ್ಥಾನ ಕೈತಪ್ಪಲಿಕ್ಕೆ ಸಹೋದರ ರಮೇಶ ಕಾರಣ ಇರಬಹುದು ಎಂದು ಸತೀಶ ಜಾರಕಿಹೊಳಿ ಹೇಳಿದರು.

ಅವರು ಶನಿವಾರ ನಗರದ ಹನುಮಾನ ನಗರದ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಎರಡೇ ಲಿಸ್ಟನಲ್ಲಿ ಮಂತ್ರಿ ಸ್ಥಾನ‌ ನೀಡಿದರೂ ನನಗೆ ಕೊಟ್ಟರು ಬೇಡವೆಂದರು. ರಮೇಶ ಜಾರಕಿಹೊಳಿ ಹತ್ತಿರ‌೨೭ ಶಾಸಕರು ಇದ್ದಾರೆ. ತಮಗೆ ಸಚಿವ ಸ್ಥಾನಕ್ಕೆ ಎಲ್ಲ ಪ್ರಯತ್ನ ಗಳನ್ನು ಸಹ ಮಾಡಿದ್ದಾರೆ.ಹೈಕಮಾಂಡಗೆ ಒತ್ತಡ ಹೆರಿದ್ದಾರೆ ಎಂದರು.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರಸ್ ಪಕ್ಷವನ್ನು ಕಟ್ಟಬೇಕಾಗಿದೆ. ಪಕ್ಷದ‌ ಯಾವ ನಾಯಕರಿಗೆ ಯಾರಿಗೆ ಮಂತ್ರಿ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭವಾಗುತ್ತದೆ ಎಂಬುವುದನ್ನು ಅವರು ಚರ್ಚೆ ಮಾಡಬೇಕು. ನಾನು ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಆದರೆ ಎಂ.ಬಿ ಪಾಟೀಲ ಬಂದ ನಂತರ ರಾಜೀನಾಮೆ‌ ನೀಡಲು ತಿರ್ಮಾನಿಸಲಾಗುತ್ತದೆ ಎಂದು ಹೇಳಿದರು.
ನನ್ನ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂದು ನಿಖರವಾಗಿ ಹೇಳಲು ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿದರು.

loading...