ಮಕ್ಕಳಲ್ಲಿ ಸೃಜನಶೀಲ ಕಲೆ ಗುರುತಿಸಿ ಪ್ರೋತ್ಸಾಹಿಸಿ: ಡಾ. ಸೊಲಗಿ

0
19
loading...

ಮುಂಡರಗಿ: ಗ್ರಾಮೀಣ ಭಾಗದ ಮಕ್ಕಳಲ್ಲಿ ಅದ್ಭುತ ಸಾಹಿತ್ಯ ಮತ್ತು ಸೃಜನಶೀಲ ಕಲೆ ಅಡಗಿದ್ದು, ಅದನ್ನು ಹೊರತರುವ ಗುರುತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ತಾಲ್ಲೂಕಿನಲ್ಲಿ ಅಸ್ಥಿತ್ವಕ್ಕೆ ಬರಲಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕವು ತಾಲ್ಲೂಕಿನಾಧ್ಯಂತ ನಿರಂತರ ಮಕ್ಕಳ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕವು ಪಟ್ಟಣದಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕವು ಉತ್ತಮ ಕಾರ್ಯಕಾರಿ ಮಂಡಳಿಯನ್ನು ಹೊಂದಿದ್ದು, ಎಲ್ಲರೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅನುಭವ ಹೊಂದಿದವರಿದ್ದಾರೆ. ಪ್ರತಿ ತಿಂಗಳು ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳಿ ಶಾಲಾ ಅಂಗಳದಲ್ಲಿ ಮಕ್ಕಳ ಸಾಹಿತ್ಯ ಸೌರಭ ಕಾರ್ಯಕ್ರಮವನ್ನು ಹಾಕಿಕೊಳ್ಳೊಣ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೃಜನಶೀಲ ಚಟುವಟಿಕೆಗಳನ್ನು ಹೊರತರಲು ವೇದಿಕೆಯು ಕಾಲ ಕಾಲಕ್ಕೆ ವಿವಿಧ ಚಟುವಟಿಕೆಗಳನ್ನು ಹಾಕಿಕೊಳ್ಳಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಇನಾಮತಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ನೂತನ ಪದಧಿಕಾರಿಗಳು: ಡಾ.ನಿಂಗು ಸೊಲಗಿ (ಗೌರವಾಧ್ಯಕ್ಷ), ಮಂಜುನಾಥ ಇಟಗಿ ಹಾಗೂ ಶಶಿಕಲಾ ಕುಕನೂರ (ಉಪಾಧ್ಯಕ್ಷರು), ವಿ.ಆರ್‌.ಕುರಡಗಿ (ಪ್ರಧಾನ ಕಾರ್ಯದರ್ಶಿ), ಬಿ.ಎಂ.ಸಜ್ಜನರ (ಸಹಕಾರ್ಯದರ್ಶಿ), ಎಂ.ಎಸ್‌.ಶೀರನಹಳ್ಳಿ (ಸಂಘಟನಾ ಕಾರ್ಯದರ್ಶಿ), ಸಿ.ಎಸ್‌.ಅರಸನಾಳ, ಎಂ.ಆರ್‌.ಕುಲಕರ್ಣಿ, ಡಾ.ಕೆ.ಕೊಟ್ಟೂರಯ್ಯ, ಎನ.ಎಸ್‌.ವೀಣಾ ಪಾಟೀಲ, ಮಂಜುನಾಥ ಮುಧೋಳ, ಗಿರಿಜಾ ಕಡ್ಡಿ, ಎ.ಆರ್‌.ಕೊಟ್ಟೂರಶೆಟ್ಟರ, ಎನ್‌.ಎಸ್‌.ಶೀರನಹಳ್ಳಿ, ಎಸ್‌.ಪಿ.ನಿಡಗುಂದಿ, ಎಚ್‌.ಕೆ.ಲೋಕೇಶ, ಮನೋಹರ, ಎ.ಸಿ.ಕೆಳಗಿಮನಿ, ರವಿ.ದೇವರಡ್ಡಿ, ಐ.ಎಸ್‌.ಮುಲ್ಲಾ, ಪವನ ಚೋಪ್ರಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

loading...