ಮಕ್ಕಳ ಪ್ರತಿಭೆಗೆ ಶಿಕ್ಷಕರು ಪ್ರೋತ್ಸಾಹ ನೀಡಿ: ಉದಾಸಿ

0
22
loading...

ಹಾನಗಲ್ಲ: ಬೋಧನೆಯಲ್ಲಿ ತೊಡಗುವ ಶಿಕ್ಷಕರು ವಿದ್ಯಾರ್ಥಿಗಳ ಪ್ರಶ್ನೆಗಳನ್ನು ನಿಭಾಯಿಸುವ ಪೂರ್ವ ಸಿದ್ಧತೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯವಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಅಭಿಪ್ರಾಯಿಸಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಶೈಕ್ಷಣಿಕ ಬಲವರ್ಧನೆಗಾಗಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬುದ್ಧಿಮಟ್ಟದ ವಿಚಾರದಲ್ಲಿ ಭಾರತ ಮತ್ತಯ ಚೀನಾ ಜಗತ್ತಿನ ಗಮನ ಸೆಳೆಯುತ್ತಿವೆ. ಪ್ರತಿಭೆಗೆ ತಕ್ಕ ಪ್ರೋತ್ಸಾಹಕ್ಕೆ ಶಿಕ್ಷಕರು ಸಜ್ಜುಗೊಳ್ಳಬೇಕು. ಪ್ರಾಥಮಿಕ ಶಿಕ್ಷಣವು ಉಜ್ವಲ ಭವಿಷ್ಯದ ಭ್ರದ ಬುನಾದಿಯಾಗಿರುವುದರಿಂದ ಪ್ರತಿಯೊಬ್ಬರೂ ಸಮಯದ ಸೇವಕನಾಗುವುದು ಅವಶ್ಯವಿದ್ದು, ಅಂದಾಗ ಮಾತ್ರ ಕಾರ್ಯದಲ್ಲಿ ಜಯ ಸಾಧಿಸಲು ಸಾಧ್ಯ ಎಂದು ಹೇಳಿದರು.

ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾತನಾಡಿ, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟದ ಕಲಿಕೆಯ ಸವಾಲು ಶಿಕ್ಷಕರ ಮೇಲಿದೆ. 8ನೇ ತರಗತಿಯ ಮಕ್ಕಳಿಗೆ ಸರಿಯಾಗಿ ಓದು, ಬರಹ ಬರುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿ. ಯೋಗ ದಿನಾಚರಣೆ ಅಂಗವಾಗಿ ಜೂ.11ರಿಂದ 21ರವರೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪ್ರತಿದಿನ ಯೋಗ ತರಗತಿ ನಡೆಯಲಿವೆ. ಅಗತ್ಯ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಎಚ್., ಸೇವಾದಳ ತಾಲೂಕಾ ಘಟಕದ ಅಧ್ಯಕ್ಷ ಬಿ.ವಿ. ಬಿರಾದಾರ, ಶಿಕ್ಷಕ ಸಂಘದ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ, ಶಿವಲಿಂಗಪ್ಪ ತಲ್ಲೂರ, ಸಿ.ಜಿ. ಪಾಟೀಲ, ಎಂ.ಎ. ಜಾಗೀರದಾರ್, ಎಸ್.ಎಂ. ದೊಡ್ಮನಿ, ಬಿ.ಎಸ್. ಚಲ್ಲಾಳ್, ಎಂ.ಎಸ್. ಬಡಿಗೇರ, ಎಂ.ಬಿ. ವಡೆಯರ, ಜಿ.ಎಂ. ಪಂಚಾಳ, ಪ್ರಕಾಶ ಕೋಣಿ, ಎಫ್.ಯು. ಹಾದಿಮನಿ ಇದ್ದರು.

loading...