ಮತ್ತೆ ನೀಲಿ ತಿಮಿಂಗಲದ ಆಟಕ್ಕೆ ಶಾಲಾ ಬಾಲಕ ಬಲಿ

0
12
loading...

ರಿಯಾಧ್:- ಇಡೀ ವಿಶ್ವಕ್ಕೆ ತಲ್ಲಣ ಮೂಡಿಸಿದ ನೀಲಿ ತಿಮಿಂಗಿಲದ ಆಟ( ಬ್ಲೂವೇಲ್ ಗೇಮ್) ಮತ್ತೆ ಶುರುವಾಗಿದೆ. ಇದೀಗ ಬ್ಲೂವೇಲ್ ಚಾಲೆಂಜ್ ಗೇಮ್‌ಗೆ ಸೌದಿ ಅರೇಬಿಯಾದಲ್ಲಿ ಶಾಲಾ ಬಾಲಕ ಬಲಿಯಾಗಿದ್ದು, ನೀಲಿ ತಿಮಿಂಗಿಲ ಮತ್ತೆ ಸದ್ದು ಮಾಡಲು ಶುರು ಮಾಡಿದೆ.ಬಾಲಕ ಬ್ಲೂವೇಲ್ ಗೆಮ್‌ಗೆ ಮಾರುಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ಸಂಬಂಧಿ ಹಾಗೂ ಸ್ನೇಹಿತರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಾಲಕನ ಸಾವಿನ ಪ್ರಕರಣವನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.ಈ ಆಟ ಮತ್ತೆ ಜಗತ್ತನ್ನು ಆವರಿಸಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ಏಮ್ಸ್ ತಿಳಿಸಿದೆ. ಭಾರತದಲ್ಲೂ ೧೦೦ ಕ್ಕೂ ಹೆಚ್ಚು ಮಂದಿ ಈ ಆಟದಲ್ಲಿ ಭಾಗವಹಿಸಿದ್ದಾರೆಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಡೆಡ್ಲಿ ಗೇಮ್ ತನ್ನ ಆಟಗಾರರಿಗೆ ೫೦ ದಿನಗಳಲ್ಲಿ ವಿವಿಧ ಟಾಸ್ಕ್ ನೀಡಿ ಅದನ್ನು ಪೂರ್ತಿಗೊಳಿಸುವಂತೆ ಒತ್ತಾಯಿಸುತ್ತದೆ. ಈ ಆಟಕ್ಕೆ ಒಳಪಟ್ಟವರು ಗೇಮ್ ನಿರ್ವಾಹಕರ ಕಂಟ್ರೋಲ್‌ನಲ್ಲಿರುತ್ತಾರೆ. ನಂತರ ಕೊನೆಯ ಸವಾಲಾಗಿ ಆತ್ಮಹತ್ಯೆಯ ಸವಾಲನ್ನು ನೀಡುತ್ತದೆ.

loading...