ಮನುಷ್ಯ ಪರಿಪೂರ್ಣವಾಗಿ ವ್ಯಕ್ತಿತ್ವ ಹೊಂದಬೇಕು: ಸಿದ್ದೇಶ್ವರ ಶ್ರೀಗಳು

0
12
loading...

ವಿಜಯಪುರ: ಯಾರು ಪ್ರತಿಭೆಯ ಮೂಲಕ, ಪರಿಶ್ರಮದ ಮೂಲಕ ಸಾಧನೆ ಮಾಡುವರೋ ಅವರನ್ನು ಗೌರವಿಸುವುದು ಸಂಸ್ಕøತಿಯ ಲಕ್ಷಣ, ಮನುಷ್ಯ ಪರಿಪೂರ್ಣವಾಗಿ ವ್ಯಕ್ತಿತ್ವವನ್ನು ಹೊಂದಬೇಕು ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದ ಎಕ್ಸಲೆಂಟ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧಕ ವಿದ್ಯಾರ್ಥಿ ಶ್ರೀಧರ ದೊಡಮನಿ ಹಾಗೂ ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.

ಮನುಷ್ಯ ಪರಿಪೂರ್ಣವಾಗಿ ವ್ಯಕ್ತಿತ್ವವನ್ನು ಹೊಂದಬೇಕಾದರೆ ಅವನು ದೈಹಿಕವಾಗಿ ಮೊದಲು ಸಮರ್ಥನಾಗಬೇಕು ಅವನ ಹೃದಯ ವಿಕಾಸವಾಗಬೇಕು. ಅಂದರೆ ಭಾವನೆಗಳು ಅವನಲ್ಲಿ ಅರಳಬೇಕು ಮಾತಿನ ಚಾಕಚಕ್ಯತೆ ಅರಿತು ಮೃದುವಚನ ಆಡುವವನಾಗಬೇಕು ಮತ್ತು ಬೌದ್ಧಿಕ ಸಾಮಥ್ರ್ಯ ಅವನಲ್ಲಿ ಬಲಗೊಳ್ಳಬೇಕು. ತೇನಸಿಂಗ್, ಥಾಮಸ್ ಅಲ್ವಾ ಎಡಿಸನ್, ಸ್ಟಿಪನ್ ಹಾಕಿಂಗ್, ಜೆ.ಜೆ. ಥಾಮ್ಸ್‍ನ್, ಮೇಡಂ ಕ್ಯೂರಿ ವಿದ್ಯಾರ್ಥಿಗಳಿಗೆ ಮಾದರಿಯಾಬೇಕು ಎಂದರು. ಮನುಷ್ಯ ನಿರಂತರ ಶೋಧನೆಯಲ್ಲಿ ತೊಡಬೇಕು, ಇಡೀ ಜಗತ್ತನ್ನು ಪ್ರೀತಿಸುವ ಹೃದಯ ವೈಶಾಲ್ಯತೆ ಬರಬೇಕು, ಬುದ್ಧಿಯಲ್ಲಿ ಸತ್ಯ ತುಂಬಿರಬೇಕು, ಬಲ್ಲವರಿಂದ ಒಂದಿಷ್ಟು ಪ್ರೇರಣೆಯನ್ನು ಪಡೆಯಬೇಕು ಆ ಮೂಲಕ ಸಾಧಕರು ನೀವಾಗಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಇಂದು ಮಕ್ಕಳ ಮನಸ್ಸನ್ನು ಏಕಾಗ್ರಗೊಳಿಸಿ ಅಧ್ಯಯನದಲ್ಲಿ ತೊಡಗಿಸುವುದು ಕಷ್ಟಸಾಧ್ಯ ಕೆಲಸವಾಗಿದೆ. ದೂರದರ್ಶನ, ಧಾರಾವಾಹಿ ಅಂತರ್ಜಾಲ ಇತ್ಯಾದಿ ಸನ್ನಿವೇಶಗಳಿಂದ ಮಕ್ಕಳ ಮನಸ್ಸು ಆಕರ್ಷಿತಗೊಳ್ಳದಂತೆ ಮಾಡಿ ಅದರಲ್ಲಿ ವಿಷಯದ ಬಗ್ಗೆ ಆಸಕ್ತಿ ಹುಟ್ಟಿಸಿ – ಅಧ್ಯಯನದಲ್ಲಿ ತೊಡಗಿಸಿ ಅದ್ಭುತ ಸಾಧನೆಗಳನ್ನು ಮಾಡಿಸಿದ ಎಕ್ಸಲಂಟ್ ಶಿಕ್ಷಣ ಸಂಸ್ಥೆ ನಿಜಕ್ಕೂ ಅಭಿನಂದನಾರ್ಹ ಎಂದು ಶ್ಲಾಘಿಸಿದರು.
ಶ್ರೀಧರ ದೊಡಮನಿ ಈತನಿಗೆ ವಿಶೇಷ ಸನ್ಮಾನವನ್ನು ಸಂಸ್ಥೆಯ ವತಿಯಿಂದ ನೆರೆವೇರಿಸಿ ಅವನ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಹಾಯಾರ್ಥವಾಗಿ 2 ಲಕ್ಷ ರೂ. ಬಹುಮಾನ ರೂಪದಲ್ಲಿ ನೀಡಲಾಯಿತು. ಸಾಧಕ ವಿದ್ಯಾರ್ಥಿಯ ಪಾಲಕರಾದ ಸಂಗನಬಸಪ್ಪ ದೊಡಮನಿ ಹಾಗೂ ಪ್ರಭಾವತಿ ಎಸ್ ದೊಡಮನಿ ಅವರಿಗೂ ಕೂಡಾ ಸಂಸ್ಥೆಯ ವತಿಯಿಂದ ಸನ್ಮಾಸಿ ತಲಾ 5 ಗ್ರಾಂ ಚಿನ್ನದ ಉಂಗುರುಗಳನ್ನು ನೆನಪಿನ ಕಾಣಿಕೆ ರೂಪದಲ್ಲಿ ನೀಡಲಾಯಿತು.

ನೀಟ್ ಪರೀಕ್ಷೆಯಲ್ಲಿ ಸಾಧನೆ ತೋರಿದ ಕ್ಷಮಾ ಕೆಲೂರ, ಅಪೂರ್ವಾ ಭೈರಶೆಟ್ಟಿ, ಶೃತಿ ಉಮ್ಮಾಗೋಳ, ಸೌಮ್ಯ ಬಿರಾದಾರ, ಸೋಮನಾಥ ಬಿಜ್ಜರಗಿ, ಲಕ್ಷಣ ದಿಕ್ಷೀತ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ರಾಜಶೇಖರ ಕೌಲಗಿ, ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಬಿ. ಆರ್. ನಿಡೋಣಿ, ಪ್ರಕಾಶ ಗೋಂಗಡಿ, ಜಿ.ವೈ. ಕೌಲಗಿ ಉಪಸ್ಥಿತರಿದ್ದರು.

ಚೈತ್ರಾ ಬಿಜಾಪುರ ಪ್ರಾರ್ಥಿಸಿದರು. ಡಿ.ಎಲ್. ಬನಸೋಡೆ ವಂದಿಸಿದರು. ಚಂದ್ರಕಾಂತ ಉಂಡೋಡಿ ಹಾಗೂ ಶ್ರದ್ಧಾ ಜಾಧವ ನಿರೂಪಿಸಿದರು.

loading...