ಮಳೇಮಠರು ಸಮಾಜ ಮುಖಿಯಾಗುದ್ದಾರೆ: ಸಿಂಗನಾಳ ಪಂಪಾಪತಿ

0
17
loading...

ಗಂಗಾವತಿ: ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕ, ಶ್ರೀಕೃಷ್ಣದೇವರಾಯ ವಿವಿ ಸೆನೆಟ್ ಸದಸ್ಯ ಬವರಾಜಸ್ವಾಮಿ ಮಳೇಮಠರು ತಮ್ಮ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜ ಮುಖಿಗಳಾಗಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಬಲಗೈ ಬಂಟ, ಬಿಜೆಪಿ ಮುಖಂಡ ಸಿಂಗಬಾಳ ಪಂಪಾಪತಿ ಸಾಹುಕಾರ್ ತಿಳಿಸಿದರು.
ಮಳೇಮಠರ ಅಭಿಮಾನಿಗಳು ಸೋಮವಾರ ವೈಷ್ಣವಿ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ ಮಳೇಮಠರ ಜನ್ಮ ದಿನಾಚರಣೆಯಲ್ಲಿ ಸಾಹುಕಾರರು ಅವರನ್ನು ಸನ್ಮಾನಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು. ವೀರಶೈವ ಸಮಾಜದ ಮುಖಂಡರಾಗಿರುವ ಮಳೇಮಠರ ತಂದೆ ಷಡಾಕ್ಷರಯ್ಯಸ್ವಾಮಿ ಮಳೇಮಠರು ಸಮಾಜದ ಅಭಿವೃದ್ದಿಗಾಗಿ ಶ್ರಮಿಸಿದ್ದರು. ಮಹಾವೀರ ವೃತ್ತದಲ್ಲಿರುವ ವೀರಶೈವ ರುದ್ರಭೂಮಿ ಅವರು ಪುರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಿರ್ಮಾಣಗೊಂಡಿದೆ. ಇವರ ಕೊಡುಗೆ ವೀರಶೈವ ಸಮಾಜಕ್ಕೆ ಅಪಾರವಾಗಿದೆ ಎಂದು ತಿಳಿಸಿದರು.
ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಬಸವರಾಜಸ್ವಾಮಿಗಳು ಮುನ್ನಡೆಯುತ್ತಿದ್ದರು, ಸರ್ವ ಸಮಾಜಗಳ ಅಭಿವೃದ್ದಿಗಾಗಿ ಶ್ರಮಿಸುವ ಗುಣ ಉಳ್ಳವರಾಗಿದ್ದಾರೆ ಎಂದು ಹೇಳಿದರು. ವಾಲ್ಮೀಕಿ ಯುವ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಯಮನೂರಪ್ಪನಾಯಕ, ಸಹಕಾರಿ ಧುರೀಣ ರಮೇಶ ಕುಲಕರ್ಣಿ, ಎಸ್.ಕೆ.ಪಾಷಾ ಮತ್ತು ರುದ್ರೇಶ ಡ್ಯಾಗಿ ಪಾಲ್ಗೊಂಡಿದ್ರು.

loading...