ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ ಪ್ರಮಾಣ

0
28
loading...

ರಬಕವಿ-ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಜಲಾಶಯ ಹಾಗೂ ರಾಜಾಪೂರ ಡ್ಯಾಂಗಳಿಂದ ನೀರು ಸರಾಗವಾಗಿ ಹರಿದು ಬರುತ್ತಿದ್ದು, ಹಿಪ್ಪರಗಿ ಆಣೆಕಟ್ಟಿನ ಹಿನ್ನಿರಿನಿಂದಾಗಿ ರಬಕವಿ-ಬನಹಟ್ಟಿ ಸಮೀಪದ ಮಹಿಷವಾಡಗಿ ಬ್ಯಾರೇಜ ತುಂಬಿ ಹರಿಯುತ್ತಿದೆ.
ಬೇಸಿಗೆ ಭವಣೆಯಿಂದ ಬೇಸತ್ತಿದ್ದ ಜನತೆಗೆ ಮಳೆ ಹಾಗೂ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಅಕ್ಕ ಪಕ್ಕದ ಗ್ರಾಮಗಳ ಜನರು ಹಾಗೂ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಇಂದು ಹಿಪ್ಪರಗಿ ಜಲಾಶಯಕ್ಕೆ ಒಟ್ಟು 28100 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದೆ. ಅದೇ ರೀತಿಯಾಗಿ ಜಲಾಶಯದಿಂದ ಅದೇ ಪ್ರಮಾಣದ ನೀರನ್ನು ಮುಂದೆ ಹರಿ ಬೀಡಲಾಗುತ್ತದೆ. ಜಲಾಶಯದ ನೀರಿನ ಮಟ್ಟ 518.10 ಮೀನಷ್ಟು ದಾಖಲಾಗಿದೆ ಎಂದು ತಹಸೀಲ್ದಾರ ಪ್ರಶಾಂತ ಚನಗೋಂಡ ತಿಳಿಸಿದರು.

loading...