ಮಹಿಳೆಯರು ತರಬೇತಿ ಪಡೆದುಕೊಂಡರೆ ನಿಶ್ಚಿತವಾಗಿ ಭಾಷೆ ಬೆಳೆಯುತ್ತದೆ: ವಾಳ್ಕೆ

0
20
loading...

ಕುಮಟಾ: ಹೆಣ್ಣೊಂದು ಕಲಿತರೆ ಒಂದು ಶಾಲೆ ತೆರೆದಂತೆ ಎನ್ನುತ್ತಾರೆ. ಹಾಗೆಯೇ ಇಂತಹ ಶಿಬಿರದಲ್ಲಿ ಮಹಿಳೆಯರು ತರಬೇತಿ ಪಡೆದುಕೊಂಡರೆ ನಿಶ್ಚಿತವಾಗಿ ಭಾಷೆ ಬೆಳೆಯುತ್ತದೆ ಎಂದು ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸುಬ್ರಾಯ ಅಭಿಪ್ರಾಯ ಪಟ್ಟರು.

ಅವರು ರವಿವಾರ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಭಾಭವನದಲ್ಲಿರಂಗಚಿನ್ನಾರಿ ಕಾಸರಕೋಡ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಂಗ ಸಂಸ್ಕøತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೊಂಕಣಿ ಭಾಷಿಕ ಮಹಿಳೆಯರಲ್ಲಿ ಸಾಮಾಜಿಕ ಹಾಗೂ ಮಾನಸಿಕ ಸದೃಢತೆಯನ್ನು ಹೆಚ್ಚಿಸಲು ಇದು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಭಾಷೆ ಬೆಳವಣಿಗೆಗೆ ಅಂತಕರ್ಣದ ಸ್ಪೂರ್ತಿ ಬೇಕು. ಮರಾಠಿಯಂತಹ ಭಾಷೆ ಮಾತನಾಡುವವರಲ್ಲಿ ಎಲ್ಲಿಲ್ಲದ ಭಾಷಾಭಿಮಾನ ನೋಡುತ್ತೇವೆ. ಮುಂದೆ ನಡೆಯುವ ಕೊಂಕಣಿ ಭಾಷಾ ಶಿಬಿರಗಳಲ್ಲಿ ಶಿಬಿರಾರ್ಥಿಯಾಗಿ ಪಾಲ್ಗೊಳ್ಳುವ ಜೊತೆಗೆ ಭಾಷೆ ಸಂಸ್ಕøತಿ ಬೆಳೆಸುವ ಕಾಯಕದಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಇಂತಹ ಕಾರ್ಐಕ್ರಮಗಳಿಂದ ಬಾಷೆ ಹಾಗೂ ಸಂಸ್ಕøತಿ ಪರಸ್ಪರ ಚೆನ್ನಾಗಿ ವಿನಿಯೋಗವಾಗಲು ಸಾಧ್ಯ ಎಂದರು.
ಕೊಂಕಣಿ ಎಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ರಂಗಚಿನ್ನಾರಿ ಕಾಸರಕೋಡ ಇದರ ಅಧ್ಯಕ್ಷ ಕಾಸರಗೋಡ ಚಿನ್ನಾ ಅವರು ಮಾತನಾಡಿ, ಭಾಷೆ ಸಂಸ್ಕøತಿ ಹಸ್ತಾಂತರಿಸುವ ಅಪಾರ ಶಕ್ತಿ ಮಾತೆಯರಲ್ಲಿದೆ. ಚಾಲ್ತಿಯಲ್ಲಿರುವ ಎಲ್ಲಾ ಭಾಷೆಗಳಿಗೆ ಮಾತೃಭಾಷೆ ಎನ್ನುತ್ತಾರೆ. ಭಾಷೆ ಬೆಳೆಸುವ ವೇದಿಕೆಗಳು ಒಂದು ಪಂಗಡ ಇನ್ನೊಂದು ಪಂಗಡವನ್ನು ಪ್ರೀತಿಸಲು ಸಾಧ್ಯ. ಭಾಷೆಗಳ ಬೆಳವಣಿಗೆಗೆ ಭಾಷಾ ಸಂಸ್ಕøತಿ ವಿನಿಮಯಗೊಳ್ಳಬೇಕು. ಒಳ್ಳೆಯ ಭಾಷೆ ಇನ್ನೊಂದು ಭಾಷೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಲ್ಲದೇ ಮಾತೃಭಾಷೆ ಗಟ್ಟಿಯಾಗುತ್ತದೆ. ನಮ್ಮ ಭಾಷೆ, ನಮ್ಮ ಸಂಸ್ಕøತಿ ಹಾಗೂ ಆಚರಣೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ನನ್ನ ಊರಾದ ಕಾಸರಗೋಡಿನಲ್ಲಿ ಎಲ್ಲಾ ಭಾಷೆಗಳನ್ನು ಮಾತನಾಡುವ ಜನರೂ ಇದ್ದಾರೆ. ಆದರೆ ನಾವು ನಮ್ಮ ಮಾತೃ ಭಾಷೆಯನ್ನು ಮರೆಯುವಂತಾಗಬಾರದು. ಎರಡು ದಿನ ನಡೆದ ಶಿಬಿರದಲ್ಲಿ 71 ಮಹಿಳೆಯರು ಭಾಗಿಯಾಗಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕುಮಟಾದಲ್ಲಿ ಘರ್‍ಘರ್ ಕೊಂಕಣಿ ಕಾರ್ಯಕ್ರಮದ ಮೂಲಕ ಕೊಂಕಣಿ ಬೆಳೆಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಇಲ್ಲಿಯ ಮಹಿಳೆಯರು ಕೊಂಕಣಿ ಭಾಷೆ ಬೆಳೆಸಲು ಕಂಕಣಬದ್ಧರಾದರೆ ಡಿಸೆಂಬರ್ ತಿಂಗಳಲ್ಲಿ ಸುಮಾರು 2000 ಮಹಿಳೆಯರನ್ನು ಸೇರಿಸಿ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಕಾಸರಗೋಡು ಚಿನ್ನಾ ಅವರನ್ನು ಕೊಂಕಣಿ ಪರಿಷತ್ ಶಿಬಿರಾರ್ಥಿಗಳು ಸನ್ಮಾನಿಸಿದರು.
ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಶಿಬಿರದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಅಲ್ಲದೇ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಕೊಂಕಣಿ ಪರಿಷತ್ ಅಧ್ಯಕ್ಷ ಅರುಣ ಮಣಕಿಕರ್, ಪ್ರಮುಖರಾದ ಪ್ರಕಾಶ ನಾಯಕ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಚಿದಾನಂದ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು. ಸುಧಾ ಗೌಡ ವಂದಿಸಿದರು.

loading...