ಮಹಿಳೆಯರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಿ : ಗುಡಸಲಮನಿ

0
13
loading...

ಗದಗ: ತರಬೇತಿಗಳು ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾಗಿದ್ದು ಇಂತಹ ಉಚಿತ ತರಬೇತಿಗಳನ್ನು ಪಡೆಯುವ ಮೂಲಕ ಮಹಿಳೆಯರು ಬದುಕಿನಲ್ಲಿ ಸ್ವಾವಲಂಭಿಗಳಾಗಬೇಕೆಂದು ಗದಗ ಇಕ್ರಾ ಎಜ್ಯುಕೇಶನ್ ಆ್ಯಂಡ್ ವೇಲ್ಪೇರ್ ಟ್ರಸ್ಟನ ಅಧ್ಯಕ್ಷ ಎಂ.ಐ.ಗುಡಸಲಮನಿ ಹೇಳಿದರು.

ಅವರು ರವಿವಾರ ಗದಗ ರಾಜೀವ ಗಾಂಧಿ ನಗರದ ಉರ್ದು ಶಾಲಾ ಆವರಣದಲ್ಲಿ ಇಕ್ರಾ ಎಜ್ಯುಕೇಶನ್ ಆ್ಯಂಡ್ ವೇಲ್ಪೇರ್ ಟ್ರಸ್ಟ ಮಹಿಳೆಯರಿಗಾಗಿ 50 ದಿನಗಳವರೆಗೆ ಎರ್ಪಡಿಸಿದ್ದ ಉಚಿತ ಕಂಪ್ಯೂಟರ್ ಹಾಗೂ ಟೇಲರಿಂಗ್ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವಿಂದು ಸರಕಾರಿ ಉದ್ಯೋಗಕ್ಕಾಗಿ ಕಾಯದೆ ಸ್ವಂತ ಉದ್ಯೋಗಗಳನ್ನು ಸೃಷ್ಠಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢತೆಯನ್ನು ಸಾಧಿಸಲು ಮುಂದಾಗಬೇಕು. ತರಬೇತಿ ಪಡೆದವರು ತರಬೇತಿಯ ಪ್ರಯೋಜನವನ್ನು ಸ್ವ ಉದ್ಯೋಗ ಕೈಗೊಳ್ಳುವದರೊಂದಿಗೆ ಶಿಬಿರದ ಸಾರ್ಥಕತೆಯನ್ನು ಪಡೆದುಕೊಳ್ಳಬೇಕೆಂದರಲ್ಲದೆ ಇಂತಹ ತರಬೇತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಬರಲಿರುವ ದಿನಗಳಲ್ಲಿ ಈ ರೀತಿಯ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉರ್ದು ಶಾಲೆಯ ಮುಖ್ಯೋಪಾಧ್ಯಾಯನಿ ಖೈರುನ್ನೀಸಾ ದಾವಲಖಾನ ಅವರು ಮಾತನಾಡಿ ಮನೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದ್ದು ಆರ್ಥಿಕವಾಗಿ ಪ್ರಗತಿ ಹೊಂದಲು ಮಹಿಳೆಯರು ಇಂತಹ ತರಬೇತಿಗಳನ್ನು ಪಡೆಯಬೇಕೆಂದರು.
ಟ್ರಸ್ಟ್‍ನ ಉಪಾಧ್ಯಕ್ಷ ಗಣೀಸಾಬ ರೋಣ, ಕಾರ್ಯದರ್ಶಿ ರಿಯಾಜ್‍ಅಹ್ಮದ್ ಡಂಬಳ, ಖಜಾಂಚಿ ಹುಸೇನಸಾಬ ಉಮಚಗಿ ಅವರು ಮಾತನಾಡಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಇಂತಹ ತರಬೇತಿಗಳನ್ನು ಪಡೆದುಕೊಂಡು ಸರಕಾರದಿಂದ ಸಿಗುವ ಸ್ವಯಂ ಉದ್ಯೋಗ ಲಾಭವನ್ನು ಪಡೆದುಕೊಳ್ಳಬೇಕೆಂದರು.

ಕಂಪ್ಯೂಟರ್ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ನಾಝೀಯಾ ಬಳ್ಳಾರಿ ಹಾಗೂ ಆಸ್ಮಾ ಎಂ.ಹಣಗಿ, ಟೇಲರಿಂಗ್ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ಶಾಂತಲಾ ಕೆಳಗಿನಮನಿ ಹಾಗೂ ಶ್ರೀಮತಿ ಮುಲ್ಲಾ, ಶಿಬಿರಾರ್ಥಿಗಳಾದ ದಿಲ್‍ಶಾದ್ ಎಚ್.ದಂಡಿನ ಹಾಗೂ ನಾಝೀಯಾ ಗುಡಸಲಮನಿ, ಆಫ್ರೀನ್ ಡಂಬಳ, ನಜತ್ ನಡವಲಮನಿ, ಮುಜೀಬಾ ದಾವಲಖಾನ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಎ.ಎಸ್.ಖವಾಸ, ಸದಸ್ಯರಾದ ಇಬ್ರಾಹೀಂ ಹುಸೇನ ಶೇಖ, ಶೌಕತ್‍ಅಲಿ ಕಳಸಾಪೂರ, ಹಾಸೀಮ್‍ಅಲಿ ಮುಲ್ಲಾ, ಅಜಮತ್‍ಅಲಿ ಆಲದಕಟ್ಟಿ ಹಾಗೂ ಗಣ್ಯರಾದ ಕಾಶೀಮಸಾಬ ಹುಡೇದಮನಿ, ರಫೀಕ್ ಮುಲ್ಲಾ, ಮೊಹ್ಮದ್‍ಅಲಿ ದಂಡಿನ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ರೇಶ್ಮಾ ಮುಲ್ಲಾ ಕುರಾಣ ಪಠಿಸಿದರು, ತಸ್ಮೀಯಾ ಆಲದಕಟ್ಟಿ, ಮೆಹಬೂಭೀ ಮುಲ್ಲಾ, ಆಫ್ರೀನ್ ಡಂಬಳ, ನಾಝೀಯಾ ಗುಡಸಲಮನಿ ನಾಥ್ ಹೇಳಿದರು. ಜಬ್ಬಾರಸಾಬ ಖವಾಸ ಸ್ವಾಗತಿಸಿದರು ಹುಸೇನಸಾಬ ಉಮಚಗಿ ನಿರೂಪಿಸಿದರು ಕೊನೆಗೆ ಶೌಕತ್‍ಅಲಿ ಕಳಸಾಪೂರ ವಂದಿಸಿದರು.

loading...