ಮಾದಕ ವಸ್ತುಗಳಿಂದ ಯುವಕರು ದೂರವಿರಿ: ಚಂದ್ರಶೇಖರ

0
17
loading...

ಕನ್ನಡಮ್ಮ ಸುದ್ದಿಬೆಳಗಾವಿ: ಸಮಾಜದಲ್ಲಿ ಯುವಕರು ಮಾದಕ ವಸ್ತುಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಯುವ ಸಮುದಾಯ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿದರೆ ಸಮಾಜ ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಪ್ರಧ್ಯಾಪಕ ಟಿ.ಆರ್ ಚಂದ್ರಶೇಖರ ಹೇಳಿದರು.

ಸೋಮವಾರ ಕೆಎಲ್‍ಇ ಅನಾಟೊಮಿ ಸಭಾಂಗಣದಲ್ಲಿ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸಮಾಜದಲ್ಲಿ ಯುವಕರು ಮಾದಕ ವಸ್ತುಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಯುವ ಸಮುದಾಯ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರುವುದೇ ಉತ್ತಮ ಎಂದು ಅವರು ಹೇಳಿದರು.

ಮೊದಲಿಗೆ ಮಾದಕ ವಸ್ತುಗಳಾದ ಸರಾಯಿ, ಗಾಂಜಾ, ಡ್ರಗ್ಸ್ ಹಲವು ಯುವಕರನ್ನು ಆಕರ್ಷಿಸುತ್ತವೆ. ಅದಕ್ಕೆ ಅಂಟಿಕೊಂಡರೆ ಹಣಕ್ಕಾಗಿ ದರೋಡೆ, ಕೊಲೆ ಮಾಡಲು ಹಿಂಜರಿಯುವುದಿಲ್ಲ. ಸಮಾಜವನ್ನು ಸದೃಢವಾಗಿಡಲು ಜೀವನಕ್ಕೆ ಮಾರಕವಾಗುವ ಇಂಥ ಮಾದಕ ವಸ್ತುಗಳಿಂದ ದೂರವಿರಬೇಕು. ಯುವಕರು ದಾರಿ ತಪ್ಪದಂತೆ ಪೋಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂದರು.

ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ಮಾದಕ ವಸ್ತು ಸಮಾಜದ ಪಿಡುಗು. ಇದನ್ನು ಹತೋಟಿಗೆ ತರಲು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ನಗರದಲ್ಲಿರುವ ಯುವಕರು ಹೆಚ್ಚು ಪ್ರಮಾಣದಲ್ಲಿ ಇಂಥ ಮಾರಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಎಲ್ಲಿಯವರೆಗೆ ಯುವಕರು ಈ ಕುರಿತು ಬೇರೆಯವರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಬೇಕು ಎಂದರು.

ವಿನಯ ಗಾಂವಕರ, ವಿಸಿ ವಿವೇಕ ಸಾವಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...