ಮಾದಿಗ ಸಮಾಜಕ್ಕೆ ಅನ್ಯಾಯ: ಮಾಳಗಿ ಆಕ್ರೋಶ

0
16
loading...

ಶಿಗ್ಗಾವಿ : ನೂತನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಮಾದಿಗ ಸಮಾಜ ಇಲ್ಲದ ಮಂತ್ರಿಮಂಡಲವಾಗಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮಾದಿಗರಿಲ್ಲದ ಮಂತ್ರಿ ಮಂಡಲ ರಚಿಸಿದ್ದು ನೋಡಿದರೆ ಕಾಂಗ್ರೆಸ್ ಪಕ್ಷವು ಈ ಸಮಾಜದ ಮೇಲೆ ರಾಜಕೀಯ ಸೇಡು ತೀರಿಸಿಕೊಂಡಂತೆ ಕಾಣುತ್ತಿದೆ ಎಂದು ಅಖಿಲ ಕರ್ನಾಟಕ ಆದಿ ಜಾಂಬವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಮಾಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ 57.2% ಬಹುಸಂಖ್ಯಾತರವನ್ನು ಹೊಂದಿದ್ದು ಸಮಾಜವು ಕಳೆದ 22 ವರ್ಷಗಳಿಂದ ಎ ಜೆ ಸದಾಶಿವ ಆಯೋಗ ಜಾರಿಗೆ ತರಲು ಹಲವಾರು ತರಹದ ಹೋರಾಟ ಮಾಡಿದರೂ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯೋಗ ಜಾರಿಗೆ ಮಾಡದೇ ಇದ್ದುದರಿಂದ ಸಮಾಜವು ಅಕ್ರೋಷಗೊಂಡು ಸನ್ 2018 ರ ಚುನಾವಣೆಯಲ್ಲಿ ನಮ್ಮ ಸಮಾಜವು ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದರ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ತಕ್ಕಪಾಠ ಕಲಿಸಿದ್ದೇವೆ ಈ ಸೇಡಿನ ಹಿನ್ನೆಲೆಯಲ್ಲಿ ಸಮಾಜಕ್ಕೆ ಕುಮಾರಸ್ವಾಮಿ ಸರಕಾರದಲ್ಲಿ ಮಾದಿಗರಿಗೆ ಗೋರ ಅನ್ಯಾಯವಾಗಿದೆ ಜೊತೆಗೆ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಾದಿಗರಿಲ್ಲದ ಮಂತ್ರಿ ಮಂಡಲ ರಚನೆಯಾಗಿದೆ.
ತಕ್ಷಣ ಮಾದಿಗರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡದೇ ಹೋದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುವುದು ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ ಪಕ್ಷಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಪ್ರತಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

loading...