ಮೃತ ರೈತ ಕುಟುಂಬಕ್ಕೆ ಚೆಕ್ ವಿತರಣೆ

0
21
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಇತ್ತೀಚಿಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ರೈತ ಭೀಮಪ್ಪ ನಾಗಪ್ಪ ಯತ್ನಟ್ಟಿ ಇವರ ಪತ್ನಿ ಮಾಳವ್ವ ಯತ್ನಟ್ಟಿಯವರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ರೂ.5 ಲಕ್ಷ ಚೆಕ್ ಪರಿಹಾರಧನವನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ತಾ.ಪಂ.ಸದಸ್ಯ ನಿಂಗಪ್ಪ ಯತ್ನಟ್ಟಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಮುಖಂಡರುಗಳಾದ ಕಿಶೋರಿ ಬೂದನೂರ, ಕೇಶವರಡ್ಡಿ, ವಿರುಪಾಕ್ಷಪ್ಪ ಮೋರನಾಳ, ಪರಶುರಾಮ ಭೈರಾಪೂರ, ಕೃಷಿ ಅಧಿಕಾರಿಗಳಾದ ರಾಮಚಂದ್ರ ಜೋಶಿ, ಎನ್.ವೈ.ಹಿರೇಹಾಳ, ವಿ.ಎನ್.ಮ್ಯಾಗೇರಿ ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

loading...