ಮೆಸ್ಸಿ ಬಳಗಕ್ಕೆ ರೋಚಕ ಜಯ, ಚಾಂಪಿಯನ್ ಕನಸು ಇನ್ನೂ ಜೀವಂತ

0
24
loading...

ಮಾಸ್ಕೋ: ಫಿಫಾ ವಿಶ್ವಕಪ್​ನ ಆರಂಭದಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ನಿರ್ಗಮನದ ಆತಂಕದಲ್ಲಿದ್ದ 2ಸಲ ವಿಶ್ವಕಪ್​ ಚಾಂಪಿಯನ್​ ಆಗಿರುವ ಅರ್ಜೆಂಟಿನಾ ತಂಡ ಮಂಗಳವಾರ ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ 2-1 ಗೋಲುಗಳಿಂದ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದೆ.

ವಿಶ್ವಕಪ್​ನ ನಿರ್ಣಾಯಕ ‘ಡಿ’ ಗುಂಪಿನ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ 2-1 ಅಂತರದ ಗೆಲುವು ದಾಖಲಿಸಿ 16ರ ಘಟಕ್ಕೆ ಲಗ್ಗೆಯಿಟ್ಟಿದೆ.
ಮೊದಲ ಪಂದ್ಯದಲ್ಲಿ ಐಸ್​​ಲ್ಯಾಂಡ್​ ವಿರುದ್ಧ 1-1 ಅಂತರದ ಡ್ರಾ ಸಾಧಿಸಿ ನಿರಾಸೆ ಕಂಡಿದ್ದ ಮೆಸ್ಸಿ ಬಳಗ ತದನಂತರ ಕ್ರೋವೇಷ್ಯಾ ವಿರುದ್ಧ 0-3 ಅಂತರದಲ್ಲಿ ಸೋಲು ಕಂಡಿತ್ತು. ಹೀಗಾಗಿ ಮೆಸ್ಸಿ ಬಳಗ ಬಹುತೇಕ ವಿಶ್ವಕಪ್​​ನಿಂದ ಹೊರಬಿದ್ದಿದೆ ಎಂದು ಎಲ್ಲರು ಅಂದುಕೊಂಡಿದ್ದರು.
ಮೆಸ್ಸಿ ಬಳಗದ ಸೋಲಿನಿಂದ ಅಭಿಮಾನಿಗಳು ಕೂಡಾ ತೀರಾ ನಿರಾಸೆ ಭಾವನೆ ವ್ಯಕ್ತಪಡಿಸಿದರು. ಇವಾಗ ಒಂದು ಜಯದಿಂದ ಮೆಸ್ಸಿ ತಂಡದ ಚಾಂಪಿಯನ್ ಆಗುವ ಕನಸು ಜೀವಂತವಾಗಿದೆ. ಮುಂದಿನ ಪಂದ್ಯ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಅರ್ಜಿಂಟಿನಾ ವ್ಯಕ್ತಪಡಿಸಿದೆ.

loading...