ಮೇರಿಲ್ಯಾಂಡ್: ಪತ್ರಿಕಾ ಕಚೇರಿ ಮೇಲೆ ಗುಂಡಿನ ದಾಳಿ, ಐವರ ಸಾವು,

0
10
loading...

ಮೇರಿಲ್ಯಾಂಡ್: ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಅಮೆರಿಕ ಶಸ್ತçಧಾರಿಯ ದಿಢೀರ್ ದಾಳಿಯಿಂದಾಗಿ ಬೆಚ್ಚಿಬಿದ್ದಿದ್ದು, ಪತ್ರಿಕಾ ಸಂಸ್ಥೆಯ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಪತ್ರಿಕಾ ಸಂಸ್ಥೆಯ ಐವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಮೇರಿಲ್ಯಾಂಡ್ ರಾಜಧಾನಿ ಅನ್ನಾಪೋಲಿಸ್ ನ ಗೆಜೆಟ್ ಪತ್ರಿಕಾ ಕಚೇರಿ ಮೇಲೆ ಶಸ್ತçಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಕಚೇರಿಯಲ್ಲಿದ್ದ ಐವರು ಸಿಬ್ಬಂದಿಗಳು ಗುಂಡೇಟಿನಿಂದ ಸಾವಿಗೀಡಾಗಿದ್ದಾರೆ.
ವಿಚಾರ ತಿಳಿದ ಕೂಡಲೇ ಅನ್ನಾಪೋಲಿಸ್ ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು ೨ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ದಾಳಿಕೋರನನ್ನು ಬಂಧಿಸಿದ್ದಾರೆ. ಪ್ರಸ್ತುಚ ಕಚೇರಿಯನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಕಟ್ಟಡವನ್ನು ತೀವ್ರ ಶೋಧಕ್ಕೆ ಒಳಪಡಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

loading...