ಯುವ ನಾಯಕತ್ವಕ್ಕೆ ಮಾದರಿ ರಾಜು ನಾಯ್ಕರ್

0
6
loading...

ಶಂಕರಲಿಂಗ ದೇಸಾಯಿ
ಬಾಗಲಕೊಟ: ಭಗವಂತ ಸೃಷ್ಟಿಸಿದ ಈ ಭೂಮಿಯ ಮೇಲೆ 48 ಲಕ್ಷ ಜೀವ ರಾಶಿಗಳಿಗೆ ನೆಲೆ ನೀಡಿದ್ದು ಎಲ್ಲ ಜೀವಿಗಳಿಗೆ ಕೇವಲ ರಕ್ಷಕಣಾಗಿದ್ದು ಆದರೆ ತಮ್ಮ ತಮ್ಮ ಆಹಾರ ಹುಡುಕಲು ಭೂಮಿಯ ಮೇಲೆ ಎಲ್ಲ ಅವಶ್ಯಕತೆಗಳನ್ನು ಇಟ್ಟಿದ್ದು, ಯಾವ ಪ್ರಾಣಿ ಪಕ್ಷಿಗಳಿಗು ಅವುಗಳ ಗುಡಿನಲ್ಲಿ ಆಹಾರ ಇಟ್ಟಿಲ್ಲ.ಹುಡುಕಿ ತಿನ್ನುವ ಕಾರ್ಯ ಆ ಪ್ರಾಣಿ ಪಕ್ಷಿಗಳದ್ದಾಗಿದೆ.ಇದಕ್ಕೆ ಬುದ್ದಿವಂತನೆನಸಿಕೊಂಡ ಮನುಷ್ಯನು ಹೊರತಾಗಿಲ್ಲ. ಹುಟ್ಟಿನಿಂದ ಸಾಯಿವ ವರೆಗು ಪ್ರತಿಯೊಂದು ಜೀವಿಯೂ ಹೋರಾಟದ ಜೀವನವನ್ನೆ ಸಾಗಿಸಿದ್ದು ಅದರಲ್ಲಿ ಮನುಷ್ಯ ಬಡವನಾಗಿ ಹುಟ್ಟಿದರು ಶ್ರೀಮಂತನಾಗಿ ಸಾಯಬೇಕೆಂಬ ನುಡಿಯಂತೆ ಇಂತಹ ತತ್ವವನ್ನಾದರಿಸಿಕೊಂಡು ಈ ನಾಡಿನಲ್ಲಿ ಅನೇಕ ಕಷ್ಟಕರ ಜೀವನವನ್ನು ಸಾಗಿಸಿ ತಾವು ಬದುಕು ಇತರರ ಬಾಳಿಗೆ ಬೇಳಕಾಗಿ ಅನೇಕ ಜನ ಆಗಿಹೋಗಿದ್ದು ಅಂತವರ ಸಾಲಿನಲ್ಲಿ ಪ್ರಚಲಿತವೆಂಬಂತೆ ರಾಜು ನಾಯ್ಕರ ಒಬ್ಬರು.

ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಹಕಾರ,ಪತ್ರಿಕೋದ್ಯಮ, ಸಂಗೀತ, ಚಲನಚಿತ್ರ ನಿರ್ಮಾಣ,ಸಂಘಟನೆ ಹೀಗೆ ಎಲ್ಲ ರಂಗದಲ್ಲೂ ಮುಂಚುನಿಯಲ್ಲಿರುವ ರಾಜು ನಾಯ್ಕರ ರವರ ಜೀವನ ಅಷ್ಟು ಸುಖಕರವಲ್ಲದ್ದು, ಅವರು ಅನುಭವಿಸಿದ ಬಾಲ್ಯ ಜೀವನ ಯಾವ ವೈರಿಗೂ ಅಂತಹ ಪರಿಸ್ಥಿತಿ ಬರಬಾರದೆಂಬಂತಿತ್ತು, ಅಂತಹ ಕಷ್ಟಕರ ಕೆಸರಿನಲ್ಲಿ ಕಮಲದಂತೆ ಅರಲಿದವರು ರಾಜು.
ರಾಜು ಜನಿಸಿದ್ದು 8-06-1975 ಹಿಂದುಳಿದ ವಾಲ್ಮಿಕಿ ಸಮಾಜದ ವಿಠ್ಠಲ ನಾಯ್ಕರ, ಶ್ರೀಮತಿ ದಂಪತಿಗಳ ಎರಡನೇಯ ಮಗನಾಗಿ ಜನಿಸಿದ ರಾಜು ಬಾಲ್ಯದಿಂದಲೂ ಸೂಚನೀಯ ಬದುಕು ಬದಕಿದವರು ಬೆಂದೊಡಲ ಹೊರೆಯಲು ಪ್ರತಿನಿತ್ಯ ಬೇರೆಯವರ ಹೊಲಕ್ಕೆ ಹೋಗಿ ಗರಿಕೆ(ಹುಲ್ಲು) ಹೊತ್ತು ತಂದು ಮಾರಿ ಬಂದ ಪುಡಿಗಾಸಿನಲ್ಲಿಯೇ ಮನೆ ನೆಡೆಸುವುದರ ಜೊತೆಗೆ ಪಿ.ಯು.ಸಿ ವರೆಗೆ ಶಿಕ್ಷಣ ಪೂರೈಸುತ್ತಿರುವಂತೆ ಬಡತನವೆಂಬ ಬುತ ಬೆಂಬಡದೇ ಇವರನ್ನು ಕಾಡುತ್ತಾ ಶೈಕ್ಷಣಿಕವಾಗಿ ಇವರನ್ನು ಬೆಳೆಯಲು ಬಿಡಲಿಲ್ಲ. ಶಾಲೆಗೆ ಸಲಾಂ ಹೇಳಿ ಬಾಗಲಕೋಟೆ ಲಾಲಸಾಬ ಬಿಜಾಪುರ ಯೆಂಬುವರ ಬಳಿ ಸೆಂಟ್ರಿಂಗ್ ಕೆಲಸದಲ್ಲಿ ತೊಡಗಿ ಕುಟುಂಬ ಸಲಹುವ ಹೊರೆ ಹೊತ್ತರು ತೆವಲುತ್ತ ಕುಂಟುತ್ತ ಹೀಗೆ ಜೀವನ ಸಾಗುತ್ತಿರುವಾಗ ಅದೃಷ್ಟದ ಬಾಗಿಲು ತೆರೆದಂತೆ ಒಂದು ಘಟನೆ ಸಂಭವಿಸಿತು.

ಅದರಲ್ಲಿ ಬಾಗಲಕೋಟ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಅಧ್ಯಕ್ಷರಾಗಿ ಬಾಗಲಕೋಟೆಯ ಗೃಹ ನಿರ್ಮಾಣ ಮತ್ತು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಬಾಗಲಕೋಟೆಯ ಓಶೋ ಕ್ರೀಡಾ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾಗಿ ಬಿಜೆಪಿ ನಗರ ಮಂಡಳದ ಅಧ್ಯಕ್ಷರಾಗಿ ಬಾಗಲಕೋಟ ಕೋ-ಆಫ್ ನಿರ್ದೇಶಕರಾಗಿ ಲಕ್ಷ್ಮೀ ದೇವಿ ಯುವಕ ಸಂಘದ ಅಧ್ಯಕ್ಷರಾಗಿ ವಿದ್ಯಾಗಿರಿಯ ವಿವೇಕಾನಂದ ಸೇವಾ ಸಮಿತಿಯ ಅಧ್ಯಕ್ಷರಾಗಿ ಬಾಗಲಕೋಟೆಯ ಬಸವನಾಡು ಗೋ ಶಾಲಾ ಸಮೀತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಆದರ್ಶ ತತ್ವ ಆದರ್ಶಗಳನ್ನು ಪರಿಪಾಲನೆ ಮಾಡುತ್ತ ಬಲಗೈ ಯಿಂದ ಕೊಟ್ಟಿದ್ದು, ಏಡಗೈ ಗೊತ್ತಾಗಬಾರದೆಂಬ ಸಮಾಜ ಸೇವಕ ನೇರ ನಿಷ್ಟುರತೆಗೆ ನಂಬಿದ ಜನರ ರಕ್ಷಣೆಗಾಗಿ ದಿಟ್ಟ ಹೋರಾಟಗಾರರಾಗಿ ಅನೇಕ ಹೋರಾಟಗಳಲ್ಲಿ ಜಯಬೇರಿ ಸಾಧಿಸಿ ನಿರ್ಗತಿಕರ ನಿಜಾಮಯೆನಿಸಿಕೊಂಡಿದ್ದಾರೆ.
ಇವರ ಕಾರ್ಯಕ್ಷಮತೆ ಕಂಡ ಬ.ವ್ಹಿ.ವ್ಹಿ. ಸಂಘದ ಕಾರ್ಯಧ್ಯಕ್ಷ ಶಾಸಕ: ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ನಾರಾಯಣಸಾ ಭಾಂಡಗೆ, ಮುಂತಾದ ರಾಜಕೀಯ ನಾಯಕರು ಮೇಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಅಪರೂಪದ ವ್ಯಕ್ತಿ ತಮ್ಮ ಅಮೂಲ್ಯ 43 ವಸಂತ ಪೂರೈಸಿ 44 ನೇ ವರ್ಷಕ್ಕೆ ಕಾಲಿಡುತ್ತಿದ್ದು, ಇವರು ಕಾಣುವ ಮುಂಬುರುವ ಕನಸುಗಳಾದ ಅನಾಥ ಮಕ್ಕಳ ವಸತಿ ಶಾಲೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ,ನಿರ್ಗತಿಕ ಮಕ್ಕಳ ಶಿಕ್ಷಣ,ನಿರ್ಗತಿಕ ವಯೋವೃದ್ಧಿಗಾಗಿ ವೃದ್ಧಾಶ್ರಮ ಸರ್ವ ಧರ್ಮ ಬೃಹತ ಉಚಿತ ಸಮೂಹಿಕ ವಿವಾಹ ಬಾಗಲಕೋಟೆಯ ಮುಳುಗಡೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಹ ಕಾರ್ಯಗಳನ್ನು ಹಾಕಿಕೊಳ್ಳಲಾಗಿದ್ದು, ಇದುವರೆಗೂ ಜೀವನದಲ್ಲಿ ಹಿಂದೆ ಇವರು ನಡೆದ ಕಲ್ಲು ಮುಳ್ಳುನ ದಾರಿ ಇಂದು ರಹದಾರಿಯಾಗಿ ಮುಂದಿನದು ಹೂವಿನ ಹಾದಿಯಾಗಿ ಸಾಗಲಿ ಎಂಬ ಹಾರೈಕೆ ಅಭಿಮಾನಿಗಳದ್ದಾಗಿದೆ.

loading...