ಯೋಜನೆಗಳು ಫಲಾನುಭವಿಗಳಿಗೆ ಒದಗಿಸುವಂತೆ ಶಾಸಕರು ಸೂಚನೆ

0
16
loading...

ಹುನಗುಂದ: ಕಳೆದ ಕಾಂಗ್ರೆಸ್ ಸರಕಾರದ ಆಡಳಿತದ ಅವಧಿಯಲ್ಲಿ ಬೇಜವಾಬ್ದಾರಿ ಮತ್ತು ಕಳಪೆ ಕಾಮಗಾರಿ ಮೂಲಕ ವಿವಿದ ಇಲಾಖೆಗಳ ಅಧಿಕಾರಿಗಳು ನೌಕರಿ ಮಾಡಿದ್ದು ಸಾಕು. ಇನ್ನು ಮುಂದೆ ಎಲ್ಲ ಸರಕಾರಿ ನೌಕರರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಎಲ್ಲ ಯೋಜನೆಗಳು ಫಲಾನುಭವಿಗಳಿಗೆ ನ್ಯಾಯಯುತವಾಗಿ ಒದಗಿಸುವ ಕಾರ್ಯದಲ್ಲಿ ನಿರತವಾಗಬೇಕು ಮತ್ತು ಮಾಹಿತಿಯೊಂದಿಗೆ ಸರಿಯಾದ ಸಮಯಕ್ಕೆ ಬರಬೇಕು ಎಂದು ಬಾಗಲಕೋಟ ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಇಲ್ಲಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಮಂಗಳವಾರ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಅವರು ಮಾತನಾಡುತ್ತ ಹುನಗುಂದ ತಾಲೂಕಿನ ನನ್ನ ಮತಕ್ಷೇತ್ರಕ್ಕೆ ಒಳಪಡುವ ಪಿಡಬ್ಲೂಡಿ ಇಲಾಖೆಯಿಂದ ನಿರ್ಮಾಣಗೊಂಡ ರಸ್ತೆ ಪಕ್ಕದಲ್ಲಿ ಸರಿಯಾಗಿ ಮರ್ಮ ಮತ್ತು ಕಡೀಕರಣ ಮಾಡಿ ರಸ್ತೆಗಳ ಗುಣಮಟ್ಟ ಕಾಪಾಡಬೇಕು ಎಂದು ಎಇಇ ದೇವೇಂದ್ರಗೌಡ ಮೇಟಿಯವರಿಗೆ ಶಾಸಕ ಚರಂತಿಮಠ ತಿಳಿಸಿದರು.ಗ್ರಾಮೀಣ ಪ್ರದೇಶದ ಅವಶ್ಯವಿರುವ ಕಡೆ ಜನರಿಗೆ ಅನುಕೂಲವಾಗುವಂತೆ ಸಿಸಿ ರಸ್ತೆ ನಿರ್ಮಿಸುವಂತೆ ಅಧಿಕಾರಿಗೆ ಸಲಹೆ ನೀಡಿದರು. ಈ ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವದರಿಂದ ಕ್ಷೇತ್ರದಲ್ಲಿ ಅಳವಡಿಕೆಯಾದ 18 ಶುದ್ದ ಕುಡಿಯುವ ನೀರಿನ ಘಟಕಗಳು ಜೂ.ಅಂತ್ಯದೊಳಗೆ ಎಲ್ಲವೂ ಪ್ರಾರಂಭಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಯೋಜನೆ ಅಧಿಕಾರಿ ಪುರೋಹಿತರಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶಕ್ಕೆ ಅನುಕೂಲವಾಗುವಂತೆ ಹೊಸ ವಸತಿ ನಿಲಯಗಳ ಮಂಜೂರಾತಿಗೆ ಸಮಾಜ ಕಲ್ಯಾಣ ಇಲಾಖೆಯು ಮುಂದಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಎನ್.ಕಾಂಟ್ರಕ್ಟರ್ ವರದಿ ನೀಡುತ್ತ ಅಮೀನಗಡ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಬೀಜ ದಾಸ್ತಾನು ಹೊಂದಿದೆ ಹಾಗೂ 77 ಕೃಷಿ ಹೊಂಡಗಳ ಗುರಿ ಹೊಂದಿದ್ದು ಕಳೆದ ಸಾಲಿನಲ್ಲಿ 92 ಕೃಷಿ ಹೊಂಡವನ್ನು ನಿರ್ಮಿಸಲಾಗಿದೆ ಎಂದಾಗ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೃಷಿ ಹೊಂಡಗಳನ್ನು ನಿರ್ಮಿಸದೇ ಬೋಗಸ್ ಬಿಲ್ಲ್ ತಗೆದಿದ್ದಾರೆ ಎಂದು ಎಪಿಎಂಸಿ ನಿರ್ದೇಶಕ ಮಾನಪ್ಪ ಚಿಗರಣ್ಣನವರ ಆರೋಪಿಸಿದಾಗ ಶಾಸಕರು ಪ್ರತಿಯಾಗಿ ಕೃಷಿ ಹೊಂಡಗಳ ಕಾಮಗಾರಿಗಳ ತನಿಖೆಗೆ ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿದರು. ಹೊಸದಾಗಿ ಕಮತಗಿ ರೈತ ಸಂಪರ್ಕ ಕೇದ್ರ ಸ್ಥಾಪಿಸಲು ಮತ್ತು ಕೃಷಿ ಉಪ ಮಾರುಕಟ್ಟೆ ಮಂಜೂರಾತಿಗಾಗಿ ಕೃಷಿ ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ಜಂಟಿಯಾಗಿ ತಿಳಿಸಿದರು.ಮತ್ತು ಅಮೀನಗಡ ಕೃಷಿ ಉಪ ಮಾರುಕಟ್ಟೆ ಜೀನಿ ಬೆಳೆದು ಮೂಲ ಸೌಲಬ್ಯಗಳಿಲ್ಲವೆಂದು ಮುಖಂಡ ರಮೇಶ ಕುರಿ ಸಭೆ ಗಮನ ಸೆಳೆದಾಗ ವರ್ಷದ ಗುರಿಯಂತೆ ಬರುವ ಆದಾಯವನ್ನು ಅಭಿವೃದ್ದಿಗೆ ಒಳಪಡಿಸಿ ಮೂಲ ಸೌಕರ್ಯ ಹೆಚ್ಚಿಸಲು ಕಾರ್ಯದರ್ಶಿ ಎಸ್.ಎಸ್.ಹುಬ್ಬಳ್ಳಿ ಅವರಿಗೆ ತಿಳಿಸಿದರು. ಅಕ್ಷರ ದಾಸೋಹ ಮತ್ತು ಅಡುಗೆ ಸಿಬ್ಬಂದಿ ತಮ್ಮ ಮಕ್ಕಳಿಗೆ ಕಾಳಜಿ ವಹಿಸಿದಂತೆ ಶಾಲಾ ಮಕ್ಕಳಿಗೂ ಸಹಿತ ಶುಚಿ-ರುಚಿಯಾದ ಅಡುಗೆ ತಯಾರಿಸಿ ಮಕ್ಕಳ ಆರೋಗ್ಯ ರಕ್ಷಿಸಬೇಕು ಎಂದರು. ಸಾರ್ವಜನಿಕ ದೂರಿನಂತೆ ಈಗಾಗಲೆ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಬಗೆಯ ಪಿಂಚಣಿ ಸೌಲಭ್ಯಗಳು ಕಳೆದ ಆರೇಳು ತಿಂಗಳಿಂದ ಬಂದಾಗಿವೆ ಎಂದು ಆರೋಪವಿದೆ.  ಮತ್ತು ಅಲ್ಲಿಯ ಎಸ್‍ಡಿಎಂಸಿ ಸಭೆ ಕರೆದು ಶಾಲಾ ಬಯಲನ್ನು ಸಮತಟ್ಟವಾಗಿಡುವದು, ಕುಡಿಯುವ ನೀರು, ಶೌಚಾಲಯ ಒದಸಗಿಸಿ ಮಕ್ಕಳ ಆರೋಗ್ಯ ರಕ್ಷಿಸಬೇಕೆಂದು ಶಾಸಕ ಚರಂತಿಮಠ ಬಿಇಒ ಗುರುನಾಥ ಹೂಗಾರರಿಗೆ ತಿಳಿಸಿದರು.ಕಮತಗಿಯಲ್ಲಿ ಮಧ್ಯದ ಅಂಗಡಿಯನ್ನು ಬಂದ್ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದ ಅದನ್ನು ಕೂಡಲೆ ಬಂದ್ ಮಾಡಿ. ಅಬಕಾರಿ ಇಲಾಖೆಯಿಂದ ಎಂಎಸ್‍ಐಎಲ್ ಮಧ್ಯದ ಅಂಗಡಿ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಬಾರದು. ಒಂದು ವೇಳೆ ಸಾರ್ವಜನಿಕರು ಒತ್ತಾಯಿಸಿದರೆ ಅಬಕಾರಿ ಅಧಿಕಾರಿಗಳು ನನ್ನ ಗಮನಕ್ಕೆ ತರಬೇಕೆಂದು ಶಾಸಕರು ತಿಳಿಸಿದರು.

ಐಹೊಳೆ ಗ್ರಾಮದಲ್ಲಿ ವಿವಿಧ ವಸತಿ ಯೋಜನೆಯಲ್ಲಿ ಮನೆಗಳನ್ನು ತಮ್ಮ ಸ್ವಂತ ನಿವೇಶನಗಳಲ್ಲಿ ನಿರ್ಮಿಸದೇ ಬೇನಾಮಿ ಆಸ್ತಿಗಳಲ್ಲಿ ನಿರ್ಮಿಸಿಕೊಂಡು ಕೊಟ್ಟಿ ಬಿಲ್ ತಗೆದಿದ್ದು ಈ ಕುರಿತು ತನಿಖೆಯಾಗಬೇಕೆಂದು ರಮೇಶ ಕುರಿ ಶಾಸಕರನ್ನು ಒತ್ತಾಯಿಸಿದರು.

loading...