ರಂಗ ಸಂಸ್ಕೃತಿಯ ಕುರಿತು ತರಬೇತಿ ಕಾರ್ಯಕ್ರಮ

0
16
loading...

ಕುಮಟಾ: ಕೊಂಕಣಿ ಇದೊಂದು ಮಾತೃಭಾಷೆಯಾಗಿದ್ದು, ಈ ಭಾಷೆಯನ್ನು ಹೆಚ್ಚು ಮಾತನಾಡುವ ಜನರು ತಾಲೂಕಿನಲ್ಲಿ ಇದ್ದಾರೆ. ಕೊಂಕಣಿ ಭಾಷಿಕರಾದ ವಿವಿಧ ಪಂಗಡದ ಜನರನ್ನು ಒಂದೇ ಕಡೆ ಸೇರಿಸಿ, ರಂಗ ಸಂಸ್ಕೃತಿಯ ಕುರಿತು ತರಬೇತಿ ನೀಡುವ ಕಾರ್ಯ ಇದಾಗಿದೆ. ಎಲ್ಲರೂ ಒಟ್ಟಿಗೆ ಸೇರಿ ಕೊಂಕಣಿ ಭಾಷೆಯನ್ನು ಗಟ್ಟಿಗೊಳಿಸುವ ದಿಶೆಯಲ್ಲಿ ಪ್ರಯತ್ನಿಸೋಣ ಎಂದು ಚಲನಚಿತ್ರ ಹಾಗೂ ರಂಗಕರ್ತೃ ನಿರ್ದೇಶಕ ಕಾಸರಕೋಡು ಚಿನ್ನಾ ಅಭಿಪ್ರಾಯ ಪಟ್ಟರು.
ಅವರು ಶನಿವಾರ ಪಟ್ಟಣದ ಕೊಂಕಣ ಎಜ್ಯುಕೇಶನದ ಟ್ರಸ್‌ ಸಭಾಭವನದಲ್ಲಿ ರಂಗ ಚಿನ್ನಾರಿ ಕಾಸರಕೋಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕೊಂಕಣ ಎಜ್ಯಕೇಶನ್‌ ಟ್ರಸ್ಟ್‌ ಕುಮಟಾ ಇವರ ವತಿಯಿಂದ ಎರಡು ದಿನಗಳ ಕಾಲ ಕೊಂಕಣಿ ಭಾಷಿಕ ಮಹಿಳೆಯರಿಗಾಗಿ ಆಯೋಜಿಸಲಾದ ರಂಗ ಸಂಸ್ಕೃತಿ ಶಿಬಿರದಲ್ಲಿ ಮಾತನಾಡಿದರು.
ಶಾಸಕ ದಿನಕರ ಶೆಟ್ಟಿ ಅವರು ಶಿಬಿರನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಅನೇಕ ಭಾಷಿಕರಿದ್ದರೂ ವಿವಿಧತೆಯಲ್ಲಿಯೂ ಏಕತೆಯನ್ನು ಹೊಂದಿರುವ ವೈಶಿಷ್ಠಪೂರ್ಣ ನಾಡು ಇದಾಗಿದೆ. ಎಲ್ಲರೂ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಜೊತೆಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಜನರು ಹೃದಯ ಶ್ರೀಮಂತರಾಗಿರುವುದರಿಂದ ಶಾಂತಿ ಪ್ರೀಯ ಜಿಲ್ಲೆ ನಮ್ಮದಾಗಿದೆ. ತಾಲೂಕಿನಲ್ಲಿ ಈ ಶಿಬರವನ್ನು ಹಮ್ಮಿಕೊಂಡಿರುವದಕ್ಕಾಗಿ ಅಭಿನಂದಿಸುತ್ತೇನೆ. ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚೆಚ್ಚು ನಡೆಯುಂತಾಗಲಿ ಎಂದು ಶುಭಕೋರಿದರು.
ಕೊಂಕಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮುರಲೀಧರ ಪ್ರಭು ಅವರು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವದು ಮಾತೆಯರಿಂದ ಸಾಧ್ಯ. ಅಂತಹ ಮಾತೆಯರಿಗಾಗಿ ಈ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಖಾದಿ ಗ್ರಾಮೋಧ್ಯೋಗ ಜಿಲ್ಲಾಧಿಕಾರಿ ಜ್ಯೋತಿ ನಾಯಕ, ಕೊಂಕಣಿ ಪರಿಷತ್‌ನ ಅರುಣ ಉಭಯಕರ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗಾಯತ್ರಿ ಪ್ರಾರ್ಥಿಸಿದರು. ಸುಧಾ ಗೌಡ ಸ್ವಾಗತಿಸಿದರು. ಚಿದಾನಂದ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಂಗ ಚಿನ್ನಾರಿ ಸಂಸ್ಥೆಯು ಕಾಸರಕೋಡ ಚಿನ್ನಾ ಅವರ ನೇತೃತ್ವದಲ್ಲಿ 13 ವರ್ಷಗಳ ಹಿಂದೆ ಜನ್ಮತಾಳಿದ್ದು, ಮಕ್ಕಳಿಗೆ ಸಂಸ್ಕೃತಿ ನೀಡುತ್ತ ಸಮರ್ಥವಾಗಿ ಮುನ್ನಡೆಸಲಾಗುತ್ತಿದೆ ಎಂದರು. ನಿರ್ಮಲಾ ಪ್ರಭು ನಿರೂಪಿಸಿದರು.

loading...