ರಂಜಾನ್‌ ಆಚರಣೆ ವೇಳೆ ಸೌಹಾರ್ದತೆ ಕಾಪಾಡಿ: ಕೂಲಿಗೂಡ

0
15
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಮಸಲ್ಮಾನರ ಪವಿತ್ರ ಹಬ್ಬ ರಂಜಾನ್‌ ಆಚರಣೆ ವೇಳೆ, ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಸಮಾಜದ ಜನರು ಸಹಕಾರ ನೀಡುವಂತೆ ನರೇಗಲ್ಲ ಠಾಣೆಯ ಪಿಎಸ್‌ಐ ಎಸ್‌.ಆರ್‌. ಕೂಲಿಗೂಡ ಹೇಳಿದರು.
ಅವರು ಬುಧವಾರ ಸಂಜೆ ಇಲ್ಲಿನ ಠಾಣೆಯಲ್ಲಿ ಹಮ್ಮಿಕೊಂಡಿದ್ದ ರಂಜಾನ್‌ ಹಬ್ಬದ ಪ್ರಯುಕ್ತ ಶಾಂತಿ ಸಭೆಯಲ್ಲಿ ಮಾತನಾಡಿದರು. ನಾಗರಿಕರ ಹಿತ ಕಾಪಾಡುವುದು ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆ ಹೊಣೆ ನಮ್ಮ ಮೇಲಿದೆ. ಈ ಹಿಂದಿನಿಂದ ನಡೆದು ಬಂದಂತೆ ಸೌಹಾರ್ದಯುತವಾಗಿ ರಂಜಾನ್‌ ಆಚರಿಸುವಂತೆ ಮನವಿ ಮಾಡಿದರು. ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ ಮಾತನಾಡಿ, ನರೇಗಲ್ಲ ಪಟ್ಟಣವು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.
ಪಟ್ಟಣದ ಇತಿಹಾಸದಲ್ಲಿ ಕೋಮು ಗಲಭೆಗಳಾದ ಉದಾಹರಣೆಯಿಲ್ಲ. ಎಲ್ಲ ಸಮಾಜದ ಹಬ್ಬ ಹರಿದಿನಗಳನ್ನು ಅನ್ಯೂನ್ಯವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಯಾವುದೇ ಭೇದ ಭಾವನೆಯಿಲ್ಲದೆ ಎಲ್ಲಾ ಒಂದಾಗಿ ನಮ್ಮ ನಮ್ಮ ಹಬ್ಬಗಳನ್ನು ಮಾದರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಸೌಹಾರ್ದತೆಯಿಂದ ಬದುಕುತ್ತಿದ್ದೇವೆ ಎಂದರು.
ಅಶೋಕ ಬೇವಿನಕಟ್ಟಿ, ಗಿರಿಶಗೌಡ ಮುಲ್ಕಿಪಾಟೀಲ, ವೀರಣ್ಣ ಹಳ್ಳಿ, ನಿಂಗಪ್ಪ ಕಣವಿ, ಎ.ಎಫ್‌. ಕೊಪ್ಪದ, ಅಲ್ಲಾಭಕ್ಷಿ ನದಾಫ್‌, ರಾಜು ಮುಲ್ಕಿಪಾಟೀಲ, ಫಕೀರಪ್ಪ ಮಳ್ಳಿ, ವೈ.ವೈ. ವಡ್ಡರ, ಮಲ್ಲೇಶ ಬೇಡಗಲ, ಬಿ.ಎಸ್‌. ವಣಗೇರಿ, ಜಿ.ಐ. ಮಕಾನದಾರ, ಚಿನ್ನಪ್ಪ ಕುಷ್ಟಗಿ, ಮಲ್ಲಯ್ಯ ಗುಂಡಗೋಪುರಮಠ, ನಿಂಗಪ್ಪ ಮಡಿವಾಳರ, ಮೈಲಾರಿ ಚಳ್ಳಮರದ, ಸಣ್ಣವೀರಪ್ಪ ಮಣ್ಣವಡ್ಡರ, ಎಚ್‌.ಎಚ್‌. ಅಬ್ಬಿಗೇರಿ ಸೇರಿದಂತೆ ಇತರರಿದ್ದರು. ಪೇದೆ ಎಂ.ಜಿ. ಮುಳಗುಂದ, ಎನ್‌.ಎಸ್‌. ಮಂಗಳೂರ ನಿರ್ವಹಿಸಿದರು.

loading...