ರಸ್ತೆ ಕಾಮಗಾರಿ ಅಪೂರ್ಣ : ಮೌನ ವಹಿಸಿದ ದಿವ್ಯ

0
18
loading...

ಯಲ್ಲಾಪುರ: ಮಳೆಗಾಲ ಪ್ರಾರಂಭವಾಗಿದ್ದರೂ ಪಟ್ಟಣ ಪಂಚಾಯ್ತಿ ತನ್ನ ಕಾಮಗಾರಿ ಮುಗಿಸುವ ಲಕ್ಷಣ ಕಾಣಿಸುತ್ತಿಲ್ಲ. ಹಲವಾರು ಕಾಮಗಾರಿಗಳು ಅಪೂರ್ಣಗೊಂಡಿದ್ದರೂ, ಗುತ್ತಿಗೆದಾರರನ್ನು ಹಿಡಿದು ಕಾಮಗಾರಿ ಮುಗಿಸುವತ್ತ ಪಟ್ಟಣ ಪಂಚಾಯ್ತಿ ದಿವ್ಯ ಮೌನ ವಹಿಸಿರುವುದು ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡುತ್ತಿದೆ.
ಪಟ್ಟಣದೆಲ್ಲೆಡೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದರೂ, ರಸ್ತೆ ಪಕ್ಕದಲ್ಲಿ ಹಿಡಿ ಮಣ್ಣನ್ನೂ ಹಾಕದೇ ಇರುವುದು ರಸ್ತೆಯಲ್ಲಿ ನಡೆದಾಡುವ ಜನರಿಗೆ ಸಂಚರಿಸುವ ವಾಹನಗಳಿಗೆ ಅಪಾಯವನ್ನು ತರುತ್ತಿವೆ. 24*7 ನೀರು ಪೂರೈಕೆ ಕಾಮಗಾರಿಯ ಹೆಸರಿನಲ್ಲಿ ನೀರು ಬರದೇ ಹೋದರೂ ರಸ್ತೆ ತುಂಬೆಲ್ಲ ಅಗೆದು ಅವಾಂತರ ಸೃಸ್ಟಿಸಿದ್ದಾರೆ. ಪ್ರತಿ ಮನೆಗಳಿಗೆ ನೀರು ಪೂರೈಕೆ ಪೈಪ್ ಲೈನ್ ಅಳವಡಿಸಲು ರಸ್ತೆ ಅಡ್ಡಲಾಗಿ ತೆಗೆದ ಕಾಲುವೆಂiÀiನ್ನು ಮುಚ್ಚದೇ ಇರುವ ಕಾರಣಕ್ಕೆ ಹೊಂಡಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದೆ. ಇನ್ನು ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದ್ದರೂ, ಕೆಲವೊಂದು ಅಪೂರ್ಣಗೊಂಡಿದ್ದರೆ. ಇನ್ನು ಕೆಲವು ರಸ್ತೆ ಕಡಿ ಹಾಕಿ ಹಾಗೆಯೇ ಬಿಡಲಾಗಿದೆ.

ಕೋರ್ಟ್ ನ ಹಿಂದೆ ಮಲ್ಲಿಕಾರ್ಜುನ ಅವರ ಮನೆಯಿಂದ ವೆಂಕಟ್ರಮಣ ಅಂಬಿಗ ಹಾಗೂ ಇಸಾಕ್ ಅವರ ಮನೆಯವರೆಗೆ ಕಾಂಕ್ರೀಟ್ ರಸ್ತೆ ನಗರೋತ್ಥಾನ 3 ನೇ ಹಂತದ ಯೋಜನೆಯಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಜೂರಿಯಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ರಸ್ತೆಗೆ ಜೆಲ್ಲಿಯನ್ನು ಹಾಕಿ ಹಾಗೆಯೇ ಬಿಡಲಾಗಿದೆ. ಸಾರ್ವಜನಿಕರಿಗೆ ನಡೆದಾಡಲು ಆಗದ ಸ್ಥಿತಿ ನಿರ್ಮಾಣ ವಾಗಿದ್ದರೂ, ಗುತ್ತಿಗೆ ದಾರನಿಗೆ ನೊಟೀಸ್ ನೀಡಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕಾದ ಪಟ್ಟಣ ಪಂಚಾಯ್ತಿ ಕಣ್ಮುಚ್ಚಿ ಕುಳಿತಿದೆ ಎಂದು ಈ ಭಾಗದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಶ್ರೀ ರಾಮಶ್ರೀ ಗ್ಲೋಬಲ್ ಕನ್ ಸ್ಟ್ರಕ್ಷನ್ ಪೈ. ಲಿ ಕಂಪನಿಯ ಜಯರಾಜ್ ಪಿಳ್ಳೆ ಎವರು ಈ ಕಾಮಗಾರಿ ಗುತ್ತಿಗೆ ಪಡೆದಿದ್ದು, ಮಳೆಗಾಲದ ಪೂರ್ವಲದಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ , ಮಳೆಗಾಲದ ಸಮೀಪ ಕಾಮಗಾರಿ ಪ್ರಾರಂಭಿಸಿ, ರಸ್ತೆ ಜೆಲ್ಲಿ ಹಾಕಿ ಹಾಗೆಯೇ ಬಿಟ್ಟಿದ್ದು ಸಾರ್ವಜನಿಕರನ್ನು ಕೆರಳಿಸಿದೆ. ‘ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳಿಸಬೇಕಿತ್ತು, ಅಥವಾ ಮಳೆಗಾಲದ ನಂತರವಾದರೂ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಹೀಗೆ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದ ರೀತಿಯಲ್ಲಿ ಜೆಲ್ಲಿಯನ್ನು ಹಾಗೇ ಬಿಟ್ಟಿದ್ದರೂ ಪಟ್ಟಣ ಪಂಚಾಯ್ತಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅದಕ್ಕೆ ಜನರ ಕಾಳಜಿ ಎಸ್ಟಿದೆ ಎಂಬುದು ಅರ್ಥವಾಗುತ್ತದೆ’ ಎಂದು ಈ ಭಾಗದ ನಿವಾಸಿ ಗಣಪತಿ ಶೇಟ್ ತಮ್ಮ ಅಸಮಾದಾನ ತೋಡಿಕೊಂಡರು.

loading...