ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗ ಮಾತ್ರ ನಾಡಿನ ಜನತೆಗೆ ಒಳಿತು: ಕಾರಜೋಳ

0
14
loading...

ಮುಧೋಳ: ಅಧಿಕಾರಕ್ಕಾಗಿ ಕಚ್ಚಾಟದಲ್ಲಿಯೇ ಕಾಲಹರಣ ಮಾಡುತ್ತಿರುವ ಕಾಂಗ್ರೇಸ್ ಜೆಡಿಎಸ್. ಅಪವಿತ್ರ ಮೈತ್ರಿ ಸರಕಾರದ ಆಯುಷ್ಯ ಕಡಿಮೆಯಿದ್ದು, ಶೀಘ್ರವೇ ಪತನವಾಗಲಿದೆಂದು ಶಾಸಕ ಹಾಗೂ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಗೋವಿಂದ ಎಮ್. ಕಾರಜೋಳ ಭವಿಷ್ಯ ನುಡಿದರು. ರಾಜ್ಯದಲ್ಲಿ ಹಾಗೂ ಮುಧೋಳ ನಗರಸಭೆಯಲ್ಲಿ ಬಿ.ಜೆ.ಪಿ. ಅಧಿಕಾರ ಚುಕ್ಕಾಣಿ ಹಿಡಿದಾಗ ಮಾತ್ರ ನಾಡಿನ ಹಾಗೂ ನಗರದ ಅಭಿವೃದ್ಧಿ ಸಾದ್ಯವೆಂದು ಕಾರಜೋಳ ಹೇಳಿದರು
ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ತಾಲೂಕ ಬ್ರಾಹ್ಮಣ ಸಂಘದ ಸನ್ಮಾನ sಸ್ವಿಕರಿಸಿ ಮಾತನಾಡಿ ಬ್ರಾಹ್ಮಣ ಸಮಾಜದವರ ಋಣಭಾರ ನನ್ನ ಮೇಲಿದ್ದು ಆ ಸಂಸ್ಕಾರದಲ್ಲಿ ಬೆಳೆದ ನಾನು, ಉತ್ತಮ ಶಿಕ್ಷಣ ಹಾಗೂ ಸುಸಂಸ್ಕøತನಾಗಲು ನೆರವಾಯಿತೆಂದು ಹೇಳಿದರು, ಮುಧೋಳ ನಗರದ ಒಳಚರಂಡಿ ಯೊಜನೆ ಶೇಕಡಾ 90 ರಷ್ಟು ಪೂರ್ಣವಾಗಿದೆ ಎಂದು ತಿಳಿಸಿ ಅದಕ್ಕೆ ಶುಲ್ಕ ಭರಣಾ ಮಾಡಿ ಜೊಡಣೆ ಪಡೆದುಕ್ಕೊಳ್ಳುವುದು ಮಾತ್ರ ಬಾಕಿಯಿದೆಂದು ಸ್ಪಷ್ಠ ಪಡಿಸಿದ ಕಾರಜೋಳ, ಬಾಗಲಕೋಟ-ಕುಡಚಿ ರೇಲ್ವೆ ಮಾರ್ಗ ವಿಳಂಬಕ್ಕೆ ಹಾಗೂ ನಗರದ ಬೈಪಾಸ್ ಮಾರ್ಗ ಆಮೆ ಗತಿಯಲ್ಲಿ ಸಾಗಲು ಕಂದಾಯ ಇಲಾಖೆಯ ಅಧಿಕಾರಿಗಳ ನಿರಾಸಕ್ತಯೇ ಕಾರಣವೆಂದು ಕಾರಜೋಳ ಆರೋಪಿಸಿ ಸ್ಥಳಿಯ ನಗರಸಭೆಯ ಆಡಳಿತ ಮಂಡಳಿಯ ದೂರಾಢಳಿತದಿಂದ ಜನತೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆಂದು ಅಂಕಿ ಅಂಶಗಳಸಮೇತ ವಿವರಿಸಿ ನಗರಸಭೆಯ ಆಡಳಿತ ಮಂಡಳಿಯ ವಿರುದ್ದ ಹರಿಹಾಯ್ದರು.

ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾರಜೋಳರು ಪುರಸ್ಕಾರ ನೀಡಿ, ಗೌರವಿಸಿದರು. ಅ.ಕ. ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಗುರುರಾಜ ಕಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನೊತ್ತರವಾಗಿ ಮಾತನಾಡಿದ ಕಟ್ಟಿ ಅವರು ಕಾರಜೋಳರು ಕಳೆದ 25 ವರ್ಷದಿಂದ ಬ್ರಾಹ್ಮಣ ಸಮಾಜಕ್ಕೆ ಮಾಡಿರುವ ಉಪಕಾರವನ್ನು ಸ್ಮರಿಸಿದರು, ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೋನಾಪ್ಪಿ ಕುಲಕರ್ಣಿ ವಹಿಸಿ ಮಾತನಾಡಿ ಸಂಘ ಕಳೆದ ಹಲವಾರು ವರ್ಷಗಳಿಂದ ಮಾಡಿರುವ ಸಮಾಜ ಸೇವೆಯನ್ನು ವಿವರಿಸಿ, ಕಾರಜೋಳರ ಸೇವೆಯನ್ನು ಸ್ಮರಿಸಿದರು ಸಾನಿದ್ಯವನ್ನು ಪಾಂಡುರಂಗಾಚಾರ್ಯ ಜೋಶಿ, ಹಾಗೂ ವಿಠ್ಠಲ ಬಡಜಿ ಕವಠೇಕರ ವಹಿಸಿದ್ದರು, ವೇದಿಕೆಯ ಮೇಲೆ ಪ್ರಮುಖರಾದ ಅಶೋಕ ಕುಲಕರ್ಣಿ ರಾಜು ಬಬಲಾದಿ, ಬುಜಂಗರಾವ ಚಿನಗುಂಡಿ, ರಾಘವೇಂದ್ರ ಉಮರ್ಜಿ, ಮೋಹನರಾವ ಕುಲಕರ್ಣಿ, ಉಪಸ್ಥಿತರಿದ್ದರು.
ಗಿರೀಶ ಆನಿಖಿಂಡಿ ಸ್ವಾಗತಿಸಿದರು, ಅಶೋಕ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ಬಣ್ಣಾಚಾರ್ಯ ಮನಗೂಳಿ, ನಿರುಪಿಸಿದರು. ವಿನೋದ ಕುಲಕರ್ಣಿ ವಂದಿಸಿದರು. ಹಿರಿಯರಾದ ಜಿ.ಆರ್.ಜೋಶಿ, ಪಿ.ಎನ್.ಮೋಕಾಶಿ, ರಾಮಕೃಷ್ಣ ಕುಲಕರ್ಣಿ ಹೇಮಾ ಬಾಬಾನಗರ ಜೆರೆ, ಆನಂದ ಕುಲಕರ್ಣಿ ಜೆರೆ, ರಾಘು ಕುಲಕರ್ಣಿ, ನಾರಾಯಣ ದೇಶಪಾಂಡೆ, ಸುನೀಲ ನಾಯಿಕ, ರಮೇಶ ದೇಶಪಾಂಡೆ ಅವರು ಕಾರಜೋಳರನ್ನು ಸನ್ಮಾನಿಸಿದರು.

loading...