ರಾಜ್ಯದಲ್ಲಿ ಹಸಿದ, ಹಳಿಸಿದ ಸರಕಾರವಿದೆ : ಚರಂತಿಮಠ

0
10
loading...

ಕಮತಗಿ : ರಾಜ್ಯದಲ್ಲಿ ಕಳೇದ ಹತ್ತು ವರ್ಷಗಳಿಂದ ಅಧಿಕಾರವಿಲ್ಲದೆ ಹಸಿದು ಕುಳಿತಿದ್ದ ಜಾತ್ಯಾತೀತ ಜನತಾದಳ ಪಕ್ಷ ಹಾಗೂ ಹಳಿಸಿದ ಕಾಂಗ್ರೆಸ್‌ ಪಕ್ಷವು ಮತ್ತೆ ಎಲ್ಲಿ ಅಧಿಕಾರ ಕೈತಪ್ಪಿ ಹೋಗುತ್ತದೆಯೋ ಎಂಬ ಆತಂಕದಿಂದ ಮತ್ತೆ ಎರಡು ಪಕ್ಷಗಳು ಕೂಡಿ ಸರಕಾರ ರಚಿಸಿರುವುದರಿಂದ ರಾಜ್ಯದಲ್ಲಿ ಹಸಿದ ಮತ್ತು ಹಳಿಸಿದ ಸರಕಾರವಿದೆ ಎಂದು ಶಾಸಕ ಡಾ. ವೀರಣ್ಣ ಚರಂತಿಮಠ ಟೀಕಿಸಿದರು.
ಪಟ್ಟಣದ ಪಾರ್ವತಿ ಪರಮೇಶ್ವರ ಸಾಂಸ್ಕೃತಿಕ ಮಂಗಲಭವನದಲ್ಲಿ ಕಮತಗಿ ಬಿಜೆಪಿ ನಗರ ಘಟಕದವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರವು ಕೆಲವೇ ತಿಂಗಳುಗಳಲ್ಲಿ ಪತನಗೊಂಡು ಮತ್ತೆ ಸನ್ಮಾನ್ಯ ಬಿ.ಎಸ್‌.ಯಡಿಯುರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬರುತ್ತದೆ.ಕೇಂದ್ರ ಸರಕಾರವು ಜಾರಿಗೆ ತಂದಿರುವ ಜನಪರಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು.
ಇದೇ ಸಂದರ್ಭದಲ್ಲಿ ನೂತನ ಶಾಸಕರಿಗೆ ಪಟ್ಟಣಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಅದರಲ್ಲಿ ಪ್ರಮುಖವಾಗಿ ಆಲಮಟ್ಟಿ ಬಲದಂಡೆ ಕಾಲುವೆಯಿಂದ ಕಮತಗಿಯ ಎಲ್ಲಾ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ,ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜಗೆರಿಸುವುದು ಮತ್ತು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ,ಪೋಲಿಸ್‌ ಠಾಣೆ ಮಂಜೂರು,ಕಮತಗಿ ಪಟ್ಟಣವನ್ನು ಕಂದಾಯ ವಲಯವನ್ನಾಗಿ ಮಾಡುವುದು, ಸರಕಾರಿ ಪ್ರೌಢಶಾಲೆ,ಸರಕಾರಿ ಪದವಿ ಪೂರ್ವ ಕಾಲೇಜು ಮಂಜುರು ಮಾಡಿಸುವುದು, ಸರಕಾರಿ ವಸತಿ ಶಾಲೆ,ಕಮತಗಿ ಪಟ್ಟಣದಲ್ಲಿರುವ 33 ಕೇ.ವಿ. ಯನ್ನು 110ಕೇ.ವಿ ಆಗಿ ಮೇಲ್ದರ್ಜಗೆ,ಗಿರಿಮಠದ ರಸ್ತೆ ಸುದಾರಣೆ, ರೈತ ಸಂಪರ್ಕ ಕೇಂದ್ರ, ಪಪಂ ಕಾರ್ಯಾಲಯ ಬೇರೆಡೆ ಸ್ಥಳಾಂತರಿಸಿ ಸುಜ್ಜಿತ ಕಟ್ಟಡ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ, ಬಸ್ಸ್‌ ನಿಲ್ದಾಣದಿಂದ ಸೇವಾಲಾಲ ಶಾಲೆವರೆಗೆ ದ್ವಿಪಥ ರಸ್ತೆ ನಿರ್ಮಾಣ,ವಸತಿರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದರು.ಮನವಿ ಸ್ವಿಕರಿಸಿದ ನೂತನ ಶಾಸಕರು ಈ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆನು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜಶೇಖರ ಮುದೇನೂರ, ಸಂಗಣ್ಣ ಕಲಾದಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಹುಚ್ಚಪ್ಪ ವಡವಡಗಿ, ಹುಚ್ಚಯ್ಯ ನಿಂಬಲಗುಂದಿ, ಪಪಂ ಉಪಾಧ್ಯಕ್ಷೆ ನಾಗರತ್ನಾ ಪೂಜಾರಿ, ಎಮ್‌.ಎಚ್‌.ಮಳ್ಳಿ, ಈರಣ್ಣ ನಾಗಠಾಣ, ಗುರುನಾಥ ಅಳ್ಳಿಚಂಡಿ, ಸಂಗಣ್ಣ ಗಾಣಗೇರ, ಗೌಡಪ್ಪ ಕ್ಯಾದಿಗ್ಗೇರಿ, ಮಲ್ಲೇಶ ವಿಜಾಪೂರ, ರವಿ ಕುಮಚಗಿ, ಗ್ಯಾಣಪ್ಪ ಮೂಲಿಮನಿ, ಭಾಗೀರಥಿ ಬಾಪ್ರಿ, ವಿಜಯ ಲಕ್ಷ್ಮೀ ಕುಮಚಗಿ, ರೇಣವ್ವ ಬಿಸನಾಳ, ಸಂತೋಷ ಜಾಲಿಹಾಳ, ಅಶೋಕ ಕಡ್ಲಿಮಟ್ಟಿ, ಪ್ರಭು ಶಿನ್ನೂರ, ನಾಗಪ್ಪ ಬಾಗೇವಾಡಿ, ಮಂಜುನಾಥ ಸಿಂಗದ, ರಾಜು ಗುಬ್ಯಾಡಿ, ಲಕ್ಷ್ಮಣ ಮಾದರ, ಹನಮಂತ ಪೂಜಾರಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.

loading...