ರಾಜ್ಯ ಪತ್ರಕರ್ತರಿಗೆ ರಕ್ಷಣೆ ನೀಡಲಿ: ಸಂಗಮೇಶ

0
21
loading...

ಚಡಚಣ: ಮಾಧ್ಯಮ ವರದಿಗಾರರಿಗೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದನ್ನು ವಿರೋಧಿಸಿ. ಜೂ.28 ಗುರುವಾರದಂದು ಸ್ಥಳಿಯ ತಾಲ್ಲೂಕಾ ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಾರ್ಯನಿರತ ತಾಲ್ಲೂಕಾ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತ್ತು.
ಇತ್ತಿಚಿಗೆ ಸಿಂದಗಿಯಲ್ಲಿ ನೈಜ್‌ ಸುದ್ಧಿ ಪ್ರಕಟಿಸಿದ ಪತ್ರಕರ್ತರ ಮೇಲೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದನ್ನು ಚಡಚಣ ಕಾರ್ಯನಿರತ ಪತ್ರಕರ್ತರ ಸಂಘ ತಿವ್ರವಾಗಿ ಖಂಡಿಸುತ್ತದೆ.
ಜೀ ಟಿವ್ಹಿ (ಕನ್ನಡ) ವರದಿಗಾರ ಗುಂಡು ಕುಲಕರ್ಣಿ ಗಬಸಾವಳಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರೀತು ಸುದ್ದಿ ಮಾಡಿದಾಗ ಅದೇ ಗ್ರಾಮ ಪಂಚಾಯತ ಅಧ್ಯಕ್ಷೇಯ ಪತಿ ಸುದ್ದಿ ಪ್ರಕಟಿಸಿರುವ ಜೀ ಟಿವ್ಹಿ(ಕನ್ನಡ ) ವರದಿಗಾರನನ್ನು ಮನಸಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಆಡಿಯೋ ಈಗಾಗಲೆ ವೈರಲ್‌ ಆಗಿದೆ.
ಇದೇ ರೀತಿ ಪದೇ ಪದೇ ಕಾರ್ಯನಿರತ ಪತ್ರಕರ್ತರಿಗೆ ರಾಜಕಾರಣಿಗಳಿಂದ ನಿಂದನೆ, ಜೀವ ಬೆದರಿಕೆ ಮೇಲಿಂದ ಮೇಲೆ ಬರುತ್ತಿದ್ದು, ಇವುಗಳನ್ನು ಶಾಶ್ವತವಾಗಿ ಬಗೆಹಿಸುವಂತೆ ರಾಜ್ಯ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಲೇಬೇಕು ಎಂದು ಪತ್ರಕರ್ತ ಸಂಘದ ಖಜಾಂಚಿಯಾದ ಸಂಗಮೇಶ ಹೂಗಾರ ಹೇಳಿದರು.
ಪತ್ರಕರ್ತರಿಗೆ ಈ ಥರ ಜೀವ ಬೆದರಿಕೆ ಬಂದ್ರೆ,ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು? ಸದಾ ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಹಾಗೂ ಸರ್ಕಾರದ ಗಮನಕ್ಕೆ ತರುವ ಪತ್ರಕರ್ತರಿಗೆ ರಕ್ಷಣೆ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸುಬ್ರಮಣ್ಯ ಸಂಗಮ್‌, ರಮೇಶ ಬಿರಾದಾರ, ಸಿದ್ರಾಮ ಮಾಳಿ, ಅರವಿಂದ ಖಡೆಖಡೆ, ರಮೇಶ ಹರಿಜನ, ಲಕ್ಷ್ಮಣ ಸಿಂಧೆ, ರೇವಣಸಿದ್ಧ ಬಗಲಿ, ಸಂತೋಷ ಬಗಲಿ, ಶಿವಾನಂದ ಶಿವಶರಣ,ಪ್ರಭಾಕರ ಶಿವಶರಣ ಮತ್ತಿತರರು ಇದ್ದರು.

loading...