ರೈತರಲ್ಲಿ ಕಾರಹುಣ್ಣಿಮೆ ಸಂಭ್ರಮ

0
3
loading...

ಕನ್ನಡಮ್ಮ ಸುದ್ಧಿ.:ರೋಣ: ಕಾರಹುಣ್ಣಿಮೆಯು ರೈತನಲ್ಲಿ ಎಲ್ಲಿಲ್ಲದ ಹಿಗ್ಗು,ಸಂತೋಷ ಹಾಗೂ ಸಡಗರದ ವಾತಾವರಣವನ್ನು ಹೊರಸುವಂತಹ ಹಬ್ಬಗಳಲ್ಲಿ ಒಂದಾಗಿದೆ.ನಿತ್ಯದ ಬದುಕಿನಲ್ಲಿ ತನ್ನದೇ ಆದ ಕಷ್ಟನಷ್ಟಗಳನ್ನು ಅನುಭವಿಸಿದರು ಕಾರಹುಣ್ಣಿಮೆಯಲ್ಲಿ ರೈತನ ಮೊಗದಲ್ಲಿ ಸಂತಸದ ಛಾಯೆಯು ಎಲ್ಲಡೆ ಕಾಣಬರುತ್ತದೆ.

ಅದಕ್ಕೆ ಕಾರಣ ಕಾರಹುಣ್ಣಿಮೆಯ ದಿನದಂದು ರೈತನ ಗೆಳೆಯನನ್ನು ಮೈಗೆ ಜಳಕವನ್ನು ಮಾಡಿಸಿ,ವಿವಿಧ ಖಾಧ್ಯಗಳನ್ನು ಮಾಡಿಸಿ ಉಣಬಡಿಸಿ ನಂತರದಲ್ಲಿ ಸಿಂಗರಿಸಿ ಸಂಬ್ರಮವನ್ನು ಪಡುವ ಹಬ್ಬಗಳಲ್ಲಿ ಒಂದಾಗಿದ್ದರಿಂದ ಸಂತಸಕ್ಕೆ ಪಾರವೇಯಿಲ್ಲದಂತಾಗುತ್ತದೆ
ವಿಶೇಷ:ಈ ಕಾರಹುಣ್ಣಿಯ ದಿನದಂದು ಸಿಂಗರಿಸಿದ ಎತ್ತುಗಳನ್ನು ಮುಖ್ಯದ್ವಾರಗಳಲ್ಲಿ ಏರ್ಪಡಿಸಲಾಗಿರುವ ಪ್ರಥಮ ಸ್ಥಾನವನ್ನು ಪಡೆಯುವ ಎತ್ತುಗಳಿಗೆ ವಿವಿಧ ರೀತಿಯ ಬಹುಮಾನಗಳನ್ನು ಈ ಹಬ್ಬದಂದು ಗ್ರಾಮಸ್ಥರು ಹಮ್ಮಿಕೊಂಡು ಬಿರುಸಿನ ಓಡಾಟದ ಮೂಲಕ ಒಡಾಡಿದ ಪ್ರಮುಖ ಎತ್ತುಗಳಿಗೆ ಹಾಗೂ ಮಾಲಿಕನಿಗೆ ಬಹುಮಾನವನ್ನು ನೀಡುವದು ವಾಡಿಕೆಯಾಗಿದೆ.

ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ರೈತರು ತಮ್ಮ ಎತ್ತುಗಳನ್ನು ನಿರ್ಮಿಸಲಾಗಿದ್ದ ಕರಿಹರಿಯುವ ಕಾರ್ಯಕ್ರಮದಲ್ಲಿ ಸಿಂಗರಿಸಿದ ಎತ್ತುಗಳನ್ನು ಮುಖ್ಯದ್ವಾರಗಳಲ್ಲಿ ಓಡಾಡಿಸಿ ಸಂಬ್ರಮದ ಜೊತೆಗೆ ಬಹುಮಾನವನ್ನು ಪಡೆದುಕೊಂಡರು.

loading...