ರೈತರಿಗೆ ನೇರವಾಗಿ ಸಾಲ ಮನ್ನಾದ ಹಣ ದೊರೆಯುವಂತೆ ಆಗ್ರಹ

0
57
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಂಕಷ್ಟದಲ್ಲಿರುವ ರೈತರಿಗೆ ಸಾಲಮನ್ನಾದ ಹಣವು ನೇರವಾಗಿ ರೈತರಿಗೆ ದೊರುಯುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರಕಾರದ ಸಾಲ ಮನ್ನಾ ಲಾಭಗಳು ಸಂಕಷ್ಟದಲ್ಲಿರುವ ಸಾಮನ್ಯ ರೈತರಿಗೆ ಮುಟ್ಟುವಂತೆ ತಜ್ಞರ ಸಮಿತಿ ರಚನೆ ಮಾಡಿ ಈ ನೀಟ್ಟಿನಲ್ಲಿ ಹೊಸ ಯೋಜನೆಯನ್ನು ರೂಪಿಸಿ ಸಾಮಾನ್ಯ ರೈತರಿಗೂ ಹಣ ದೊರೆಯುವಂತೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆದ ಅಧ್ಯಕ್ಷ ಅಪ್ಪಾಸಾಬ ದೇಸಾಯಿ, ಸುಭಾಷ ದಾಯಗೊಂಡೆ, ಯಲ್ಲಪ್ಪಾ ದುಡುಂ, ಟೋಪಣ್ಣಾ ಬಸರಿಕಟ್ಟಿ, ರಾಮನಗೌಡ ಪಾಟೀಲ, ರಾಜು ಕಾಗಣೆಕರ ಇತರರು ಇದ್ದರು.

loading...