ರೈತರ ಆತ್ಮಹತ್ಯೆ ನಿಲ್ಲಿಸಿ ಎಂದು ಆಗ್ರಹಿಸಿ ಮನವಿ

0
23
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ತಾಲೂಕ ಸಮಿತಿ ಹೊನ್ನಾವರ ಇವರ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ರೈತರು ಕ್ರಷಿ ಉದ್ದೇಶದ ತರಕಾರಿ, ಆಹಾರದ ಬೆಳೆಗಳು,ಹೂವಿನ ಬೆಳೆ, ವಾಣಿಜ್ಯ ಬೆಳೆ, ತೊಟಗಾರಿಕೆ ಬೆಳೆಗಳು,ಪಶು ಸಾಕಣಿಕೆ ಸೇರಿದಂತೆ ಇತರ ಉದ್ದೇಶಗಳಿಗೆ ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಇತರೇ ಬಡ್ಡಿ ವ್ಯಾಪಾರ ಸಂಸ್ಥೆಗಳಲ್ಲಿ ಸಾಲ ಮಾಡಿದ್ದು ಇರುತ್ತದೆ. ಪೃಕೃತಿ ವಿಕೋಪದಲ್ಲಿ ಬೆಳೆ ಹಾನಿ, ಬಾವಿಗಳ ಅಂತರ್ಜಲ ಕುಸಿತ, ವಿದ್ಯುತ್ ಸಮಸ್ಯೆ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಿರುವುದು, ಕೃಷಿ ಉತ್ಪಾದನೆ ಹೆಚ್ಚಾಗಿರುವುದು, ಕಾಡು ಪ್ರಾಣಿಗಳಿಂದ ಬೆಳೆ ನಾಶ ಇಂತಹ ಸಮಸ್ಯೆಗಳಿಂದ ಪ್ರತಿ ವರ್ಷವು ಸಾಲ ಹೆಚ್ಚಾಗುತ್ತಿದ್ದು ಹಣಕಾಸು ಸಂಸ್ಥೆ ಹಾಗೂ ಬ್ಯಾಂಕುಗಳ ಸಾಲ ಬಾಕಿಗೆ ಬಡ್ಡಿ ಸೇರಿಸಿ ಹೊಸ ಸಾಲವಾಗಿ ಪರಿವರ್ತಿಸುವುದು ರೈತರ ಆರ್ಥಿಕ ಹಾನಿಗೆ ಕಾರಣವಾಗಿದೆ. ಹಣಕಾಸು ಸಂಸ್ಥೆಗಳ ಸಾಲ ವಸೂಲಿಯಲ್ಲಿ ರೈತರ ಬಂಧನದ ಭೀತಿ, ದ್ವನಿ ವರ್ದಕದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ರೈತರ ಮಾನಹಾನಿ ಮಾಡುವುದು.ಕೃಷಿ ಜಮೀನು ಹರಾಜು ಮತ್ತಿತರ ಕಾರಣಗಳಿಂದ ಸಾಲ ತಿರಿಸಲಾಗದ ಹಾಗೂ ಬದುಕಲಾರದ ಪರಿಸ್ಥಿತಿ ನಿರ್ಮಾಣವಾಗಿ ಸಮಾಜದ ಎಲ್ಲ ಕ್ಷೇತ್ರಗಳ ಉದ್ಯೋಗದ ಜನರಲ್ಲಿ ರೈತರು ಆತ್ಮಹತ್ಯೆ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಚುನಾವಣಾ ಪೂರ್ವ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದು ಇರುತ್ತದೆ. ಈಗ ರೈತರ ಅಪೇಕ್ಷೇಯಂತೆ ತಾವೇ ಮುಖ್ಯಮಂತ್ರಿಗಳಾಗಿದ್ದಿರಿ. ತಮ್ಮ ಸರ್ಕಾರ ಈ ಹಿಂದೆ ಯಾವತ್ತು ಬಹುಮತ ಸರಕಾರ ನಡೆಸಿದ್ದು ಇರುವುದು ಇಲ್ಲ..ತಾವು ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡು ರೈತರ ಆರ್ಥಿಕ ಸಂಸ್ಥೆಗಳ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂಧರ್ಬದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಎಮ್ ಆರ್ ಹೆಗಡೆ,ಖಜಾಂಚಿ ಶಂಕರ ಹೆಗಡೆ, ತಾಲೂಕಾ ಅಧ್ಯಕ್ಷ ಪರಮೇಶ್ವರ ಭಟ್ಟ ಅಗ್ನಿ, ಉಪಾಧ್ಯಕ್ಷ ಡಿ ಎಮ್ ನಾಯ್ಕ, ಕಾರ್ಯದರ್ಶಿಎಮ್ ಪಿ ಭಟ್ಟ ಅಗ್ನಿ, ಸದಸ್ಯ ಆಯ್ ಆರ್ ಭಟ್ಟ, ಕೆವಿ ಹೆಗಡೆ,ನಾರಾಯಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

loading...