ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು : ರಮೇಶ

0
18
loading...

ಗಂಗಾವತಿ: ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಕೃಷಿಕ ಸಮಾಜದ ಮುಖಂಡ, ಸಹಕಾರಿ ಧುರೀಣ ರಮೇಶ ಕುಲಕರ್ಣಿ ತಿಳಿಸಿದರು.
ತಾಲೂಕಿನ ಮರಳಿ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಕೃಷಿ ಅಭಿಯಾನದ ನಡಿಗೆಗೆ ಹಸಿರು ನಿಶಾನೆ ತೋರಿಸುವದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಭೀಕರ ಬರಗಾಲ ಇದ್ದ ಕಾರಣ ರೈತ ಕುಟುಂಬಗಳು ಬೀದಿಪಾಲಾಗಿವೆ. ಈ ಭಾಗದ ರೈತರು ಬೆಳೆ ನಾಟಿ ಮಾಡದೆ ಸಾಲಗಾರರಾಗಿದ್ದಾರೆ. ಕಾರಣ ಇವರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

loading...