ವಸತಿ ಗೃಹ ನಿರ್ಮಾಣವಾದರೂ ವಸತಿಗೆ ಮುಕ್ತವಾಗಿಲ್ಲ

0
5
loading...

ಹಾನಗಲ್ಲ: ಪಟ್ಟಣದಲ್ಲಿನ ಡಿಪ್ಲೊಮಾ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ಕಾಲೇಜು ಆವರಣದಲ್ಲೆ ವಸತಿ ನಿಲಯವನ್ನು ಸ್ಥಾಪಿಸಲಾಗಿದೆ. ಆದರೆ, ವಸತಿ ನಿಲಯ ಮಾತ್ರ ವಿದ್ಯಾರ್ಥಿನಿಯರ ವಸತಿಗೆ ಇನ್ನೂ ಮುಕ್ತವಾಗಿಲ್ಲ. ಹೌದು ಪಟ್ಟಣದ ಹೊರವಲಯದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸುಸಜ್ಜಿತ ಡಿಪ್ಲೊಮಾ ಕಾಲೇಜು ಸ್ಥಾಪಿಸಲಾಗಿದೆ. ಇಲ್ಲಿಗೆ ಆಗಮಿಸುವ ವಿದ್ಯಾರ್ಥಿನಿಯರ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಸದುದ್ದೆಶದಿಂದ ೨೦೧೩-೧೪ನೇ ಹಣಕಾಸು ವರ್ಷದಲ್ಲಿ ಲೋಕೋಪಯೋಗಿ ಇಲಾಖೆಯಿಂದ ೮೪.೫೪ ಲಕ್ಷ ರೂ ವೆಚ್ಚದ ವಸತಿ ನಿಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರದಿಂದ ೩೦ ಲಕ್ಷ ರೂ. ಅನುದಾನವೂ ಮಂಜೂರಾಗಿ ಕಟ್ಟಡದ ಬಹುತೇಕ ಕಾಮಗಾರಿಯೂ ಅಂತಿಮಗೊಂಡು ಸುಣ್ಣ ಬಣ್ಣ ಬಳಿಯಲಾಗಿದೆ. ಆದರೂ ವಿದ್ಯಾರ್ಥಿನಿಯರ ವಸತಿಗೆ ಈ ಕಟ್ಟಡ ಮುಕ್ತವಾಗಿಲ್ಲ.
ಇನ್ನೂ ಬೇಕು ಹಣ:

ಕಟ್ಟಡದ ಕಾಮಗಾರಿಯೇನೋ ಮುಗಿದಿದೆ. ಆದರೆ, ನೀರು ಪೂರೈಕೆ, ವಿದ್ಯುತ್ ಸಂಪರ್ಕ ಅಳವಡಿಕೆ ಇತ್ಯಾದಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇದಕ್ಕೆ ಕಾರಣ ಹಣದ ಕೊರತೆ. ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಇನ್ನೂ ೪೫ ಲಕ್ಷ ರೂ ಹಣದ ಅವಶ್ಯಕತೆಯಿದೆಯಂತೆ. ಇದರಿಂದಾಗಿ ಲೋಕೋಪಯೋಗಿ ಇಲಾಖೆಗೆ ರಸ್ತೆ ನಿರ್ಮಾಣ ಒಳಗೊಂಡು ೬೫ ಲಕ್ಷ ಅನುದಾನ ಕೋರಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
ಪಾಳು ಕೊಂಪೆ: ಲಕ್ಷಾಂತರ ಹಣ ಖರ್ಚು ಮಾಡಿ ವಸತಿ ನಿಲಯ ಸ್ಥಾಪಿಸಲಾಗಿದೆ. ಆದರೆ, ಬಳಕೆಗೆ ಮುಕ್ತವಾಗದ್ದರಿಂದ ಕಟ್ಟಡದ ಸುತ್ತಲೂ ಗಿಡ ಕಂಟಿ ಬೆಳೆದು ಪಾಳು ಕೊಂಪೆಯಂತಾಗಿದೆ. ಕಟ್ಟಡ ಒಳಭಾಗದಲ್ಲಿ ಗಿಡಗಳು ಬೆಳೆದಿದ್ದು, ಇದರಿಂದ ಕಟ್ಟಡ ಅಡಿಪಾಯಕ್ಕೆ ಧಕ್ಕೆಯುಂಟಾಗುವಂತಿದೆ. ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಅಗತ್ಯ ಅನುದಾನವನ್ನು ಮಂಜೂರಾತಿ ಮಾಡಿಸಿಕೊಡುವ ಕೊಡುವ ಮೂಲಕ ವಸತಿ ನಿಲಯದ ಕಾಮಗಾರಿಗೆ ಕಾಯಕಲ್ಪ ನೀಡಬೇಕೆಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ನಾನು ತಾಲೂಕಿನ ಗಡಿ ಭಾಗದ ಹಳ್ಳಿಯಿಂದ ಕಾಲೇಜಿಗೆ ರ‍್ತಿನಿ. ಸಂಜೆ ಮನೆಗೆ ಹೋಗಲು ಹೆಚ್ಚುವರಿ ತರಗತಿಗಳಿದ್ದಾಗ ಕೊನೆಯ ಬಸ್ ಮಿಸ್ ಆಗಿ ತೊಂದರೆಯಾಗುತ್ತಿದೆ. ನಿರ್ಮಾಣಗೊಂಡಿರುವ ವಸತಿ ನಿಲಯವನ್ನು ಶೀಘ್ರವೇ ಬಳಕೆಗೆ ಮುಕ್ತ ಮಾಡಿದರೆ ಅನುಕೂಲ.

ರೇಷ್ಮಾ, ದ್ವಿತೀಯ ವರ್ಷದ ವಿದ್ಯಾರ್ಥಿನಿ.

ನಾನು ಲೋ……….೨ಕಪಯೋಗಿ ಸಚಿವನಾಗಿದ್ದಾಗ ವಸತಿ ನಿಲಯ ಸ್ಥಾಪನೆಗೆ ಹಣ ಬಿಡುಗಡೆ ಮಾಡಿದ್ದೆÃ. ಕಟ್ಟಡ ಕಾಮಗಾರಿಗೆ ಅನುದಾನ ಕೊರತೆಯಿರುವುದು ಈ ಹಿಂದಿನ ಶಾಸಕರಿಗೆ ಗೊತ್ತಿದ್ದರೂ ತಮ್ಮ ಅವಧಿಯಲ್ಲಿ ಮಂಜೂರಾತಿ ಕೊಡಿಸಿಲ್ಲ. ಇದೀಗ ನನ್ನ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಇಲಾಖಾ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೆÃನೆ. ಅನುದಾನ ಬಿಡುಗೆಯ ಭರವಸೆ ನೀಡಿದ್ದಾರೆ.

ಸಿ.ಎಂ. ಉದಾಸಿ, ಶಾಸಕರು.

ವಸತಿ ನಿಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ನೀರು ಪೂರೈಕೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿಯಿದೆ. ಅನುದಾನ ಕೊರತೆಯಿರುವುದರ ಕುರಿತು ಶಾಸಕರಿಗೆ ಮತ್ತು ಉನ್ನತ ಮಟ್ಟದ ಅಧಿಕಾರಿಗಳಿ ಮಾಹಿತಿ ನೀಡಲಾಗಿದೆ.

– ಗೋವಿಂದ ಚಪ್ಪರ, ಎಇಇ ಲೋಕೋಪಯೋಗಿ ಹಾನಗಲ್ಲ.

loading...