ವಿದ್ಯಾರ್ಥಿಗಳಲ್ಲಿ ಜಾತಿ ಗೊಂದಲ ತೊಲಗಬೇಕು:ಹಿರೇಮಠ

0
13
loading...

ಗಂಗಾವತಿ: ವಿದ್ಯಾರ್ಥಿಗಳಲ್ಲಿ ಜಾತಿ ಗೊಂದಲವನ್ನು ಸೃಷ್ಟಿಸಿ ಸರಕಾರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಖಂಡ ಪ್ರಮೋದ ಹಿರೇಮಠ ತಿಳಿಸಿದರು.
ಎಬಿವಿಪಿ ಆಶ್ರಯದಲ್ಲಿ ಸೋಮವಾರ ಶ್ರೀಕೃಷ್ಣದೇವರಾಯಲು ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡದೆ. ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಕಾರಣ ವಿದ್ಯಾರ್ಥಿಗಳಲ್ಲಿ ದ್ವೇಷಭಾವನೆ ಕೆರಳಿ ಶೈಕ್ಷಣಿಕ ವಾಗಿ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಸರಕಾರವೆ ನಿಂತು ಜಾತಿ ಜಾತಿಗಳನ್ನು ಜಗಳ ಹಚ್ಚಲು ಕಾರಣವಾಗಿದೆ. ಎಲ್ಲ ಜಾತಿ ಮತ್ತು ಧರ್ಮಗ¼ಲ್ಲಿ ಬಡ ವಿದ್ಯಾರ್ಥಿಗಳಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಭರವಸೆಯನ್ನು ನೀಡಿದ್ದರು. ಆದರೆ ಅದು ಈಡೇರಲಿಲ್ಲ.
ರಾಜ್ಯ ಸರಕಾರದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಚುನಾವಣಾ ಸಂದರ್ಭದಲ್ಲಿ ಉಚಿತ ಪಾಸ್ ಕೊಡುವ ಭರವಸೆಯನ್ನು ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿದ್ದರು. ಈಗ ಅವರು ಅಧಿಕಾರದಲ್ಲಿದ್ದಾರೆ. ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ನಂತರ ಅವರು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ಕೃಷ್ಣ ಅಗಲೂರು, ಶಾಮಮ್ಮ, ನೇತ್ರಾವತಿ, ಅನ್ನಪೂರ್ಣ, ಶಿವಲೀಲಾ ಮತ್ತು ಗೀತಾ ಪಾಲ್ಗೊಂಡಿದ್ದರು.

loading...