ವಿದ್ಯಾರ್ಥಿಗಳು ಉತ್ತಮ ಚಾರಿತ್ರ್ಯ ಹೊಂದಿ: ಶಾಂತಲಿಂಗ ಶ್ರೀ

0
8
loading...

ನರಗುಂದ: ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳುವ ಛಲ ಹೊಂದಿದಾಗ ಮುಂದಿನ ಅವರ ಗುರಿ ನಿಚ್ಚಳವಾಗಿ ತಲುಪಲಿದೆ. ವಿದ್ಯಾಥೀಗಳು ಉತ್ತಮ ಚಾರಿತ್ರö್ಯ ಹೊಂದಿ ತಮ್ಮ ಜೀವನ ಯಶದೆಡೆಗೆ ಓಯ್ಯಲು ಸದಾ ಚಿಂತನೆಮಾಡಿ ಉತ್ತಮ ಅಧ್ಯಯನದೊಂದಿಗೆ ಸಾಧನೆಯ ಕೀರ್ತಿ ಶಿಖರಗಳಾಗಬೇಕೆಂದು ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು ಹೇಳಿದರು.

ಪಟ್ಟಣದ ಯಡೆಯೂರ ಶಿದ್ದಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಒಕ್ಕೂಟ ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜೂ. ೨೯ ರಂದು ಹಮ್ಮಿಕೊಂಡ ಸಂದರ್ಭದಲ್ಲಿ ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರಿÃಗಳು, ಇಂದು ಜಗತ್ತಿನಲ್ಲಿ ಶಿಕ್ಷಣಕ್ಕಾಗಿ ಹೆಚ್ಚಿನ ಮಹತ್ವವಿದೆ. ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚಿನ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು ಇದರ ಪ್ರಯೋಜನ ಎಲ್ಲರೂ ಪಡೆದು ದೇಶದ ಅಭಿವೃಧಿಗಾಗಿ ಶ್ರಮಿಸಬೇಕೆಂದು ಅವರು ತಿಳಿಸಿದರು.
ಶಿಕ್ಷಣ ಸಂಸ್ಥೆ ನಿರ್ಧೆಶಕ ಮಂಡಳಿ ಸದಸ್ಯ ಅಜ್ಜು ಪಾಟೀಲ ಮಾತನಾಡಿ, ಜೀವನದಲ್ಲಿ ನಾವು ಏನು ಆಗಬೇಕೆಂಭ ಗುರಿಯೊಂದಿಗೆ ಶಿಕ್ಷಣ ಪಡೆದುಕೊಳ್ಳುವುದು ಉತ್ತಮ. ಗುರಿಯಿಲ್ಲದ ಬದುಕು ನಶ್ವರವಿದ್ದಹಾಗೆ. ಜೀವನದಲ್ಲಿ ಸಾಧನೆ ಮಾಡುವ ಛಲದೊಂದಿಗೆ ಶ್ರಮವಹಿಸಿ ವಿದ್ಯೆ ಪಡೆಯುವುದು ವಿದ್ಯಾರ್ಥಿಗಳ ಮನದಾಳದಲ್ಲಿ ಬೇರೂರಬೇಕು. ಅಂದಾಗ ಶಿಕ್ಷಣದಲ್ಲಿ ಯಶಸ್ಸು ಪಡೆಯಲು ಸಾಧ್ಯವೆಂದು ಅವರು ತಿಳಿಸಿದರು.

ಪ್ರಾಚಾರ್ಯ ಎಂ.ಜಿ. ಬೋಗಾರ ಮಾತನಾಡಿದರು. ಡಿ.ವೈ. ಕೆಂಚನಗೌಡ್ರ, ಬಿ.ಎಲ್. ಬಾರಕೇರ, ಸಂತೋಷಕುಮಾರ ಎಂ. ನಿರ್ವಹಿಸಿದರು. ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆ ಆಡಳಿತ ನಿರ್ಧೆಶಕ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

loading...