ವಿದ್ಯಾರ್ಥಿ ಜೀವನ ಅತ್ಯಂತ ಆಮೂಲ್ಯ : ಬಾಗೇವಾಡಿ

0
9
loading...

ಗುಳೇದಗುಡ್ಡ: ವಿದ್ಯಾರ್ಥಿಗಳು ಕಲಿತಂತ ಶಿಕ್ಷಣವನ್ನು ಚನ್ನಾಗಿ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಕಮತಗಿಯ ಹುಚ್ಚೇಶ್ವರ ಪಪೂ,ಕಾಲೇಜಿನ ಪ್ರಾಚಾರ್ಯ ಎಸ್‌.ವಿ. ಬಾಗೇವಾಡಿ ಹೇಳಿದರು.
ಅವರು ಇಲ್ಲಿನ ಕುರುಹಿನಶೆಟ್ಟಿ ಅಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಕಷ್ಟಗಳು ಪಾಠಕಲಿಸುತ್ತವೆ. ಕಷ್ಟದಪಾಠಿದಿಂದ ನಮ್ಮ ಬದುಕು ಸುಂದರÀವಾಗುತ್ತೆದೆ ಎಂದರು. ಇಂದಿನ ದಿನಮಾನದಲ್ಲಿ ಶಿಕ್ಷಣ ಒಂದು ದೊಡ್ಡ ಸಂಪತ್ತು, ಪಾಲಕರು ತಮ್ಮ ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಅವರನ್ನ ಶಿಕ್ಷಣವಂತರನ್ನಾಗಿ ಮಾಡಿ ಎಂದರು.
ಜೀವನ ಅತ್ಯಂತ ಅಮೂಲ್ಯವಾಗಿದ್ದು , ಇದನ್ನು ವ್ಯರ್ಥ ಮಾಡಿಕೊಳ್ಳದೇ ಸತತ ಪರಿಶ್ರಮದಿಂದ ಓದಬೇಕು. ಪ್ರತಿದಿನ ಶಾಲೆಯಲ್ಲಿ ಮಾಡಿದ ಪಾಠವನ್ನು ಅಂದೇ ಅಭ್ಯಾಸ ಮಾಡುವುದರಿಂದ ಉತ್ತಮ ಅಂಕ ಪಡೆಯಲು ಸಾಧ್ಯ ಹೇಳಿದರು. ನಿವೃತ್ತ ಶಿಕ್ಷಕ ಎಚ್‌.ವಿ ಹೊಕ್ರಾಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ಗುರಿ ಇದ್ದರೆ ಏನೆಲ್ಲಾ ಸಾಧನೆ ಮಾಡಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕದ ಜ್ಞಾನವನ್ನು ಸಂಪಾದಿಸಿಕೊಂಡು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಹೆಚ್ಚು ಅಂಕಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಮೂಲಕ ಓದಿರುವ ಶಾಲೆ, ತಂದೆತಾಯಿ, ಸಮಾಜದ ಕೀರ್ತಿ ತರಬೇಕು ಎಂದರು. ಸಂಘದ ಅಧ್ಯಕ್ಷ ಸಂಗಣ್ಣ ಹುನಗುಂದ ಮಾತನಾಡಿ. ಸಮಾಜದ ಏಳಿಗೆಗಾಗಿ ಎಲ್ಲರೂ ಶ್ರಮವಹಿಸಿ ಸಮಾಜವನ್ನು ಅಭಿವೃದ್ಧಿ ಪಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಾದ ಸೌಭಾಗ್ಯಾ ಹೊದ್ಲೂರ, ಭಾಗ್ಯಾ ಅಚನೂರ, ನಿವೇದಿತಾ ಹುನಗುಂದು ್ಳ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರಾಚಪ್ಪ ಹುನಗುಂದ, ರಾಚಪ್ಪ ಯಂಡಿಗೇರಿ, ವಿಜಯಕುಮಾರ ಬೆಟಗೇರಿ, ಚನಬಸಪ್ಪ ರಂಜನಗಿ, ಗದಿಗೆಪ್ಪ ರಂಜನಗಿ, ನಾಗೇಶ ದಿಡ್ಡಿಮನಿ, ಬಸವರಾಜ ಯಂಡಿಗೇರಿ. ಶ್ರವಣಕುಮಾರ ರಂಜನಗಿ, ರೇವಣ ರಂಜನಗಿ, ಮಲ್ಲಿಕಾರ್ಜುನ ಕಲಾದಗಿ, ಬಸವರಾಜ ಹುನಗುಂದ, ಸಂಗಮೇಶ ಚಿಕ್ಕಾಡಿ, ಚಂದ್ರು ಉಣಚಗಿ, ಶಂಕ್ರಪ್ಪ ಯಂಡಿಗೇರಿ ಮತ್ತಿತರರು ಇದ್ದರು.

loading...