ವಿಶ್ವ ಯೋಗ, ಸಂಗೀತ ದಿನಾಚರಣೆ

0
19
loading...

ಬೀಳಗಿ: ಸಮೀಪದ ಬಾಡಗಂಡಿ ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಅಂತರರಾಷ್ಟ್ರೀಯ ಶಾಲೆ ಹಾಗೂ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ಹಾಗೂ ಸಂಗೀತ ದಿನಾಚರಣೆ ಆಯೋಜಿಸಲಾಗಿತ್ತು.
ಸಂಸ್ಥೆಯ ಆಡಳಿತಾಧಿಕಾರಿ ಎಚ್‌.ಬಿ.ಧರ್ಮಣ್ಣವರ ಮಾತನಾಡಿ, ಯೋಗ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರ ಮುಖಾಂತರ ಸದೃಢ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮನಸ್ಸು ಮಾಡಬೇಕು. ಯೋಗದಿಂದ ಏಕಾಗ್ರತೆ ಹೆಚ್ಚುತ್ತದೆ ಎಂದ ಅವರು ಯೋಗಾಸನ ಹಾಗೂ ಪ್ರಾಣಾಯಾಮದ ವಿವಿಧ ಪ್ರಕಾರಗಳ ಪ್ರಾತ್ಯಕ್ಷಿಕೆ ನೀಡಿದರು. ಕಾಲೇಜು ಪ್ರಾಚಾರ್ಯ ಡಾ.ವೆಂಕಟೇಶ ಜಿ., ಪ್ರಾಚಾರ್ಯ ಎಚ್‌.ಎಸ್‌.ದುಡ್ಯಾಳ, ವೈದ್ಯಾಧಿಕಾರಿ ಡಾ.ನಾಗನೂರ, ಯೋಗ ಮತ್ತು ಕರಾಟೆ ಶಿಕ್ಷಕ ವೆಂಕಟೇಶ ಛಬ್ಬಿ ವೇದಿಕೆಯಲ್ಲಿದ್ದರು.
ಸಂಗೀತ ಶಿಕ್ಷಕ ಪ್ರಮೋದ ಹರಿಮಂದಿರ ಸ್ವರಗಳ ಉಗಮ ಹಾಗೂ ಸಂಗೀತದ ಮಹತ್ವ ಕುರಿತು ವಿವರಿಸಿದರು. ಶಿಕ್ಷಕಿ ಗೀತಾ ಕಟಗಿಹಳ್ಳಿಮಠ ನಾಡಿನ ಸಂಗೀತ ಮಹಾನ್‌ ಸಾಧಕರಾದ ಪಂ.ಪುಟ್ಟರಾಜ ಗವಾಯಿಗಳು ಹಾಗೂ ಡಾ.ಭೀಮಸೇನ ಜೋಷಿ ಅವರ ಜೀವನ ಸಾಧನೆ ಕುರಿತು ಮಾತನಾಡಿದರು. ಕು.ವೈಭವಿ ದೀಕ್ಷಿತ ಕೊಳಲು ನುಡಿಸಿ ಕೇಳುಗರ ಗಮನ ಸೆಳೆದರು. ದೈಹಿಕ ಶಿಕ್ಷಕರಾದ ಬಸವರಾಜ ಕಾದ್ರೊಳ್ಳಿ, ಸೋಮಪ್ಪ ಶಿರಬೂರ, ಮಂಜುನಾಥ ಹುಗ್ಗಿ, ಪಡಿಯಮ್ಮ, ಶಿಕ್ಷಕ-ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

loading...