ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಜಾಥಾ

0
33
loading...

ವಿಜಯಪುರ : ವಿಜಯಪುರ-ಬಾಗಲಕೋಟ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಪ್ರತಿದಿನ 1.90 ಲಕ್ಷ ಲೀ. ಹಾಲು ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ಡಾ.ಸಂಜೀವ ದೀಕ್ಷಿತ ತಿಳಿಸಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಆಯೋಜಿಸಿದ ಗ್ರಾಹಕರ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಒಕ್ಕೂಟದ ಕಾರ್ಯವ್ಯಾಪ್ತಿಯ ಕುರಿತು ಮಾಹಿತಿ ನೀಡಿದ ಅವರು, ಹಾಲು ಒಕ್ಕೂಟ ಪ್ರತಿ ದಿನ 1.90 ಲಕ್ಷ ಲೀಟರ್ ಶುದ್ಧ ಹಾಲು ಸಂಗ್ರಹಿಸಿ, ಅತ್ಯಾಧುನಿಕ ಯಂತ್ರೋಪಕರಣಗಳ ನೆರವಿನಿಂದ ಸುಸಜ್ಜಿತವಾದ ಡೈರಿಯಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ಪ್ರತಿನಿತ್ಯ 70 ಸಾವಿರ ಲೀಟರನ್ನು ಅವಳಿ ಜಿಲ್ಲೆಯ ಪ್ರಮುಖ ನಗರ ಹಾಗೂ ಪಟ್ಟಣಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.
ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಮಾತನಾಡಿ, ಹಾಲು ಆರೋಗ್ಯ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಲು ಪರಿಪೂರ್ಣವಾದ ಆಹಾರ. ಹಾಲು ಸೇವನೆಯಿಂದ ಆರೋಗ್ಯ ವೃದ್ಧಿಸುವ ಜೊತೆಗೆ, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಶಕ್ತಿಯೂ ವೃದ್ಧಿಸುತ್ತದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಶ್ರೇಷ್ಠ ಗುಣಮಟ್ಟಕ್ಕೆ ಇನ್ನೊಂದು ಹೆಸರಾಗಿವೆ ಎಂದರು.
ಒಕ್ಕೂಟದ ಅಧ್ಯಕ್ಷ ಸಂಗಣ್ಣ ಹಂಡಿ ಮಾತನಾಡಿ, ಹಾಲು ಸಂಪೂರ್ಣ ಆಹಾರವಾಗಿದ್ದು, ಎಲ್ಲ ಪೆÇೀಷಕಾಂಶಗಳ ಆಗರವಾಗಿದೆ. ಕಲಬೆರಿಕೆ ರಹಿತವಾದ ನಂದಿನಿ ಹಾಲು ಉಪಯೋಗಿಸಲು ಗ್ರಾಹಕರಿಗೆ ಕರೆ ನೀಡಿದರು. ನಂದಿನಿ ಹಾಲು ಅತ್ಯಂತ ಗುಣಮಟ್ಟತೆಯಿಂದ ಹಾಗೂ ಪೋಷಕಾಂಶಗಳಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಜನರು ಆರೋಗ್ಯ ವೃದ್ಧಿಗೆ ಗುಣಮಟ್ಟಕ್ಕೆ ಹೆಸರಾದ ನಂದಿನಿ ಹಾಲು ಬಳಸಬೇಕು ಎಂದು ಕರೆ ನೀಡಿದರು.
ಒಕ್ಕೂಟದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ನಿಡೋಣಿ, ಒಕ್ಕೂಟದ ವ್ಯವಸ್ಥಾಪಕ ಡಾ.ಸದಾಶಿವ ಹಾದಿಮನಿ, ಉಪ ವ್ಯವಸ್ಥಾಪಕ ಎಸ್.ಎಸ್.ಕುಂಬಾರ, ಡಾ.ಪಿ.ವಿ.ಪಾಟೀಲ್, ಡಾ.ಬಿ.ಕೆ.ಮಠ, ಬಿ.ಎಸ್. ತೆಗ್ಗಿ, ಕೆ.ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.

loading...