ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಆಲದ ಮರವಿದ್ದಂತೆ: ಶಾಸಕ ವೀರಣ್ಣ

0
4
loading...

ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಒಂದು ಆಲದ ಮರವಿದ್ದಂತೆ, ಇದರ ನೆರಳಿನಲ್ಲಿಯೇ ಸಮಾಜ ಶಕ್ತಿಯುತ ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಖ್ಯ ವಾಹಿನಿಯಲ್ಲಿ ಬರಬೇಕೆಂದು ಶಾಸಕ ಡಾ. ವೀರóಣ್ಣ ಚರಂತಿಮಠ ಅವರು ಕರೆ ನೀಡಿದ್ದಾರೆ.
ಬಾಗಲಕೋಟೆ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಮಾಜ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಘಟಿತರಾಗಿ ಆಡಳಿತದ ವೈಖರಿ, ಅಭಿವೃದ್ಧಿಯ ಬಗ್ಗೆ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ, ಸೂP್ಷÀ್ಮ ವಿಚಾರಗಳ ಬಗ್ಗೆ ಚಿಂತನೆ ಮಾಡಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಲು ಮುಂದಾಗಬೇಕೆಂದು ಡಾ. ಚರಂತಿಮಠ ಅವರು ಕರೆ ನೀಡಿ ಕ್ಷೇತ್ರದ 83 ಹಳ್ಳಿಗಳಿಗೆ ಸಂಚರಿಸಿ ತಮ್ಮ ಗೆಲುವಿಗೆ ನೆರವಾದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದು ಬಾಗಲಕೋಟೆಯನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಇದಕ್ಕೆ ಕ್ಷೇತ್ರದ ಜನತೆ ಕೈಜೋಡಿಸಬೇಕೆಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ವೀರಶೈವ ಲಿಂಗಾಯತ ಸಮಾಜದ ತಾಲೂಕಾಧ್ಯP್ಷÀ ನಾಗರಾಜ ಕೊಟಗಿ, ಕಾರ್ಯದರ್ಶಿ ಬಸವರಾಜ ಬಗಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿವಾನಂದ ಅನಾಮಿ, ಕಳಕಪ್ಪ ಬಾದೋಡಗಿ, ಬಸವರಾಜ ರಾಜೂರ, ಕೆ.ಎಂ. ಕಳ್ಳಿಗುಡ್ಡ, ಅರಿಷಿಣಗೋಡಿ, ಶಿವಾನಂದ ಗಬ್ಬೂರ, ರವಿ, ಎಸ್.ಸಿ. ಬಿರಾದಾರ, ಶರಣಪ್ಪ ಯಂಡಿಗೇರಿ, ರವಿ ಪಟ್ಟಣದ, ಉಮೇಶ ದೇವನಾಳ, ಸಂಗಣ್ಣ ಶಿರೂರ, ಜುಮನಾಳ ಮತ್ತಿತರರು ಪಾಲ್ಗೊಂಡಿದ್ದರು. ರೇವಣ್ಣ ಬೆಣ್ಣೂರ ಹಾಗೂ ಸಂಗಡಿಗರ ರೈತಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿರುಪಾP್ಷÀಪ್ಪ ಕಟಗೇರಿ ಸ್ವಾಗತಿಸಿದರು. ಬಸವರಾಜ ಕುಬಕಡ್ಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಕಗೊÂ್ಗೀಡ ವಂದಿಸಿದರು.

loading...