ಶಾಂತಿ ಸೌಹಾರ್ದತೆಯಿಂದ ರಂಜಾನ್‌ ಆಚರಿಸಿ: ಪಿಎಸ್‌ಐ

0
2
loading...

ಗುಳೇದಗುಡ್ಡ: ನಗರದಲ್ಲಿ ಮುಸ್ಲಿಂರ ಪವಿತ್ರ ಹಬ್ಬ ರಮಜಾನ್‌ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸೋಣ. ಕಾನೂನು ಸುವ್ಯವಸ್ಥೆಗೆ ಯಾವುದೇ ದಕ್ಕೆ ಬಾರದಂತೆ, ಗೊಂದಲ ಗಲಾಟೆಗಳಿಲ್ಲದೆ ಹಬ್ಬವನ್ನು ಆಚರಿಸಿ, ಹಬ್ಬಕ್ಕೆ ಕಳೆತರೋಣ. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಪಿ.ಎಸ್‌.ಐ. ಗಣಪತಿ ಕೊಂಗನೊಳ್ಳಿ ಹೇಳಿದರು.
ಅವರು ಸ್ಥಳೀಯ ಪೋಲಿಸ್‌ ಠಾಣೆಯಲ್ಲಿ ರಮಜಾನ್‌ ಹಬ್ಬದ ನಿಮಿತ್ತವಾಗಿ ಕರೆದಿದ್ದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಇಲ್ಲಿಯವರೆಗೂ ಯಾವುದೇ ಅಶಾಂತಿ, ಗಲಾಟೆಗಳು ನಡೆದಿಲ್ಲ., ಹಿಂದೂ ಮುಸ್ಲಿಂ ಸೌಹಾರ್ದಯುತವಾಗಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಈ ಪರಂಪರೆ ನಡೆದುಕೊಂಡು ಬರಲಿ. ರಂಜಾನ ಹಬ್ಬಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ಅವುಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಿವು ಹಾದಿಮನಿ, ಅಂಜುಮನ್‌ ಸಮಿತಿ ಅಧ್ಯಕ್ಷ ಎಂ.ಎಂ. ಜಮಖಾನೆ ಮಾತನಾಡಿದರು. ಎಎಸ್‌ಐ ವೈ.ಎನ್‌. ಕುಂಬಾರ, ಪ್ರಭುದೇವ ಪವಾರ, ಶಿವಾನಂದ ಕಟ್ಟಿಮನಿ, ಮಂಜುನಾಥ ಸಣ್ಣಕ್ಕಿ, ಎಚ್‌.ಎ. ಹವಾಲದಾರ, ಬಿ.ಎಸ್‌. ಹಿರೇಮಠ, ಈರಣ್ಣ ಬಂಡಿವಡ್ಡರ, ರೆಹಮಾನ ಯಳ್ಳಿಗುತ್ತಿ, ಎ.ಐ. ಅಫಘಾನ, ಎಸ್‌.ಎ. ಮೊಮಿನ, ಲಾಲಸಾಬ ಅತ್ತಾರ, ಸಂಗಪ್ಪ ಆಲೂರ, ಬಾಳು ನಿರಂಜನ, ರಫಿಕ್‌ ಕಲಬುರ್ಗಿ, ನಜೀರ ಕೊತ್ತಲ, ರಫೀಕ್‌ ಸೂಳಿಭಾವಿ ಮತ್ತಿತರರು ಇದ್ದರು.

loading...