ಶಾಲಾ ಪ್ರಾರಂಭೋತ್ಸವ, ಪಠ್ಯಪುಸ್ತಕ ವಿತರಣೆ

0
20
loading...

ಬಸವನಬಾಗೇವಾಡಿ: ಶಾಲೆಯ ರಜೆ ಮುಗಿದು ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶಾಲೆಗಳು ಶೃಂಗಾರಗೊಂಡು ಮಕ್ಕಳನ್ನು ಆಕರ್ಷಿಸುವ ಜೊತೆಗೆ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಪಟ್ಟಣದ ಶಾಸಕರ ಮಾದರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಿಬ್ಬಂದಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರು ಶಾಲೆಗೆ ತಳಿರು ತೋರಣ ಕಟ್ಟಿ, ಇಡೀ ಶಾಲಾ ಆವರಣ ಸ್ವಚ್ಚಗೊಳಿಸುವ ಜೊತೆಗೆ ರಂಗೋಲಿ ಹಾಕಿ ನಂತರ ಶಾಲಾ ಮಕ್ಕಳಿಗೆ ಸಿಹಿ ತಿನ್ನಿಸಿ ಶಾಲೆಗೆ ಸ್ವಾಗತಿಸಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಎಂ.ವೈ.ಬೆಳ್ಳುಬ್ಬಿ, ದೈಹಿಕ ಶಿಕ್ಷಕ ಎ.ಐ.ಮಠಪತಿ, ಯು.ವೈ.ಬಶೆಟ್ಟಿ, ಆರ್.ಎಲ್.ಇಟಗಿ, ಕೆ.ಬಿ.ಪದರಾ, ಎ.ಎಲ್.ಕನ್ನೋಳ್ಳಿ, ಸಿ.ಎಸ್.ಹಿರೇಮಠ, ಪಿ.ಜಿ.ಕುಲಕರ್ಣಿ, ಎಲ್.ಎಸ್.ಹಳ್ಳಿ, ಎಂ.ಎಚ್.ಸವನೂರ, ಎಲ್.ಎ.ಬಾಗವಾನ, ಎಸ್.ಎಚ್.ತಿಗಡಿ ಸೇರಿದಂತೆ ಮುಂತಾದವರು ಇದ್ದರು.
ಸರ್ಕಾರಿ ಬಸವೇಶ್ವರ ಪ್ರೌಢ ಶಾಲೆ: ಪಟ್ಟಣದ ಸರ್ಕಾರಿ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆಯೊಂದಿಗೆ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತ್ತು. ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಶೇಖರ ಗೊಳಸಂಗಿ, ಸಂಗಮೇಶ ಪಟ್ಟಣಶೆಟ್ಟಿ, ಮುಖ್ಯೋಪಾಧ್ಯಯ ಎಸ್.ಬಿ.ಕುಶಾಳಕರ, ಸಿ.ಪಿ.ಓಲೇಕಾರ, ವ್ಹಿ.ಪಿ.ಕಿರಗಿ, ಎಸ್.ಎಸ್.ಕಡಿವಾಳ, ಪಿ.ಎಸ್.ಮನಹಳ್ಳಿ, ಜೆ.ಎನ್. ಪರ್ವತಿಕರ, ಎ.ಬಿ.ಇಬ್ರಾಹಿಂಪುರ, ಜೆ.ಎಂ. ಕರ್ಜಗಿ, ಎಸ್.ಜೆ.ಬಗಲಿ, ಎ.ಎಂ.ಮಾಳೂರ, ಎಸ್.ಬಿ.ದಿಡ್ಡಿಮನಿ ಸೇರಿದಂತೆ ಇತರರು ಇದ್ದರು.

loading...