ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ

0
33
loading...

ಮುಂಡರಗಿ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ಶಾಲೆ ಬಿಡಬಾರದು ಎಂದು ಶಿಕ್ಷಣ ಇಲಾಖೆಯು ಎಲ್ಲ ವಿದ್ಯಾರ್ಥಿಳಿಗೆ ಉಚಿತವಾಗಿ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು, ಬೈಸಿಕಲ್ ಮೊದಲಾದ ಸಾಮಗ್ರಿಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಪಡೆದುಕೊಂಡ ಪ್ರತಿನಿತ್ಯ ಶಾಲೆಗೆ ಹಾಜರಾಗಬೇಕು ಎಂದು ಬಿಆರ್‍ಪಿ ಬಿ.ವಿ.ನಂದಗಾವಿ ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದ ಎಸ್.ಎಂ.ಭೂಮರಡ್ಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಂ.ಆರ್.ಗುಗ್ಗರಿ ಮಾತನಾಡಿ, ಜೀವನದಲ್ಲಿ ಮುಂದೆ ಬರಲು ಶಿಕ್ಷಣ ಅಗತ್ಯವಾಗಿದೆ. ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು ಎನ್ನುವ ಕಾರಣದಿಂದ ಸರಕಾರ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಮಕ್ಕಳು ಸರಕಾರದ ಸೌಲಭ್ಯ ಪಡೆದುಕೊಂಡು ಉತ್ತಮ ನಾಗರೀಕರಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಸ್.ವಿ.ಅರಿಷಣದ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಿದೆ. ವಿದ್ಯಾರ್ಥಿಗಳು ಅದರ ನೆರವಿನಿಂದ ಜೀವನದಲ್ಲಿ ಮುಂದೆ ಬರಬೇಕು. ಶಾಲೆ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಮಲಾರ್ಜಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸದಸ್ಯರಾದ ನಿರ್ಮಲಾ ಉಮಚಗಿ, ರೇಖಾ ಡಂಬಳ, ಲಕ್ಷ್ಮವ್ವ ಹಡಪದ, ಮುಖಂಡರಾದ ಕೃಷ್ಣಪ್ಪ ಕಲಕೇರಿ, ಮುಖ್ಯಶಿಕ್ಷಕ ಎಂ.ಬಿ.ಕನ್ಯಾಳ, ಬಿ.ಕೆ.ಮಾದರ, ಎಂ.ಕೆ.ಮಠದ, ಸುಜಾತಾ ಬೆಟಗೇರಿ, ಶಾಂತಾ ಹಿರೇಮಠ, ಕುಸುಮಾ ರತ್ನಕಟ್ಟಿ, ಎಲ್.ಜಿ.ಹೊಸೂರ, ಆರ್.ಎಸ್.ಚವಡಿ, ತಟ್ಟಿ ಹಾಜರಿದ್ದರು.

loading...