ಶಾಲೆ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಿ:ಕರವೇ ಆಗ್ರಹ

0
5
loading...

ಬಾಗಲಕೋಟ : ಜಿಲ್ಲಾ ಶಾಲಾ ಮಕ್ಕಳ ಸುರಕ್ಷಾ ಸಮಿತಿ ರಚನೆ ಹಾಗೂ ಅಪಘಾತಕ್ಕೆ ಕಾರಣರಾದ ಶಾಲೆ ಆಡಳಿತ ಮಂಡಳಿ ಒಳಗೊಂಡು ಇತರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಯಿತು.
ಜಿಲ್ಲೆಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮ ಉಲ್ಲಂಘಿಸಿ ಶುಲ್ಕ, ಡೋನೆಷನ್ ಹಾವಳಿಯಿಂದ ಶಿಕ್ಷಣದ ವ್ಯಾಪಾರೀಕರಣದಲ್ಲಿ ತೊಡಗಿವೆ. ಶಾಲೆಗೆ ಆಗಮಿಸುವ ಮಕ್ಕಳ ಸುರಕ್ಷತೆಯೆಡೆಗೆ ಗಮನ ಹರಿಸದೆ ಪೆÇೀಷಕರಿಂದ ಹಣ ವಸೂಲು ಮಾಡುತ್ತಿವೆ. ಗರಿಷ್ಠ ಹಣ ವಸೂಲು ಮಾಡಿಯೂ ಸಹ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವತ್ತ ಗಮನ ಹರಿಸುತ್ತಿಲ್ಲ. ಕೂಡಲೆ ಇಂಥ ಶಿಕ್ಷಣ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಜಿಲ್ಲಾ ಕರವೇ ಘಟಕ ಸೋಮವಾರ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿತಲ್ಲದೆ ಜಿಪಂ ಸಿಇಒ ಅವರಿಗೆ ಮನವಿ ಅರ್ಪಿಸಿತು.

ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಇಂದಿನ ಮಕ್ಕಳು ಭವಿಷ್ಯಭಾರತದ ಸಂಪತ್ತು. ಅವರ ರಕ್ಷಣೆ, ಪೋಷಣೆ ನಾಗರೀಕ ಸರಕಾರದ ಆದ್ಯ ಕರ್ತವ್ಯ. ಸರಕಾರದಲ್ಲಿ ನಾಗರೀಕ ಸೇವೆಗಾಗಿ ನಾನಾ ಇಲಾಖೆಗಳನ್ನು ನಮ್ಮ ಸಂವಿಧಾನ ಸೃಷ್ಠಿಸಿದೆ. ಆಂಥ ಪ್ರಮುಖ ವಿಭಾಗದಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್, ಸಾರಿಗೆ ಇಲಾಖೆ ಇವು ಮಕ್ಕಳ ಮತ್ತು ಸಾರ್ವಜನಿಕ ರಕ್ಷಣೆ ಹಾಗೂ ನಿರ್ವಹಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅತ್ಯಂತ ಜವಾಬ್ದಾರಿಯುತ ಇಲಾಖೆಯ ಮುಖ್ಯಸ್ಥರ ನಿರ್ಲಕ್ಷದಿಂದ ಕಳೆದ ವಾರ ನಗರದಲ್ಲಿ ಖಾಸಗಿ ಶಾಲೆಗಳ ಮಕ್ಕಳನ್ನು ಹೊತ್ತೊಯುತ್ತಿದ್ದ ಆಟೋ ಮತ್ತು ಬೊಲೆರೋ ವಾಹನದ ಮಧ್ಯೆ ಅಪಘಾತಕ್ಕೀಡಾಗಿ ಇಬ್ಬರು ಅಮಾಯಕ ಮಕ್ಕಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಹಲವು ಮಕ್ಕಳು ಗಾಯಗೊಂಡು ನೋವಿನಲ್ಲಿ ನರಳುತ್ತಿವೆ. ಹಲವು ಘಟನೆಗಳು ಈ ಹಿಂದೆ ನಡೆದ ನಿದರ್ಶನಗಳಿದ್ದರೂ ಸೂಕ್ತ ಮುನ್ನೆಚರಿಕೆ ವಹಿಸದಿರುವುದರಿಂದ ಮತ್ತೆ ಮತ್ತೆ ಮರುಕಳಿಸುತ್ತಿವೆ.
ಇಂತಹ ಘಟನೆಗೆ ಯಾರು ಕಾರಣೀಕರ್ತರು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಪ್ರಮುಖ ಇಲಾಖೆಗಳ ಮುಖ್ಯಸ್ಥರ ನಿರ್ಲಕ್ಷ ಎದ್ದು ಕಾಣುತ್ತದೆ ಎಂದು ದೂರಿದರು. ಮೊನ್ನೆ ನಡೆದ ಕಹಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಅಪಘಾತಕ್ಕೆ ಕಾರಣರಾದ ಬೊಲೇರೋ ಹಾಗೂ ಟಂಟಂ ವಾಹನದ ಚಾಲಕನ ಮೇಲೆ ಪ್ರಕರಣ ದಾಖಲಿಸಿರುವುದು ನಿಯಾಮಾನುಸಾರ ನಡೆದ ಪ್ರಕ್ರಿಯೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದರೆ ಘಟನೆಗೆ ಶಾಲೆ ಆಡಳಿತ ಮಂಡಳಿ, ಸಾರಿಗೆ, ಶಿಕ್ಷಣ, ಸಂಚಾರಿ ಪೆÇಲೀಸ್, ಮಕ್ಕಳ ಕಲ್ಯಾಣ ಹೀಗೆ ಪ್ರಮುಖ ಇಲಾಖೆಯವರು ಪರೋಕ್ಷ ಕಾರಣರಾಗಿದ್ದಾರೆ. ಈ ಎಲ್ಲ ಇಲಾಖೆ ಮುಖಸ್ಥರ ಮೇಲೆ ನಿರ್ಲಕ್ಷತೆಯ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು.ಶಾಲೆ ಆಡಳಿತ ಮಂಡಳಿಯ ಹಣದಾಸೆಯ ಉದ್ದೇಶದಿಂದ ಈ ಘಟನೆ ಸಂಭವಿಸಿದ್ದು ಶಾಲೆ ಪರವಾಣಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಇಂತಹ ಕಹಿ ಘಟನೆ ಮರುಕಳಿಸದಂತೆ ನಾನಾ ಇಲಾಖೆಗಳ ಮುಖ್ಯಸ್ಥರ, ಜನಪ್ರತಿನಿಗಳ, ಸಮಾಜ ಚಿಂತಕರನ್ನು ಒಳಗೊಂಡ ಜಿಲ್ಲಾ ಮಕ್ಕಳ ಸುರಕ್ಷಾ ಸಮಿತಿ ರಚಿಸಿ ಮಕ್ಕಳ ಸುರಕ್ಷತೆ ಮತ್ತು ಏಳಿಗೆಗೆ ಮುಂದಾಗಬೇಕು. ಜಿಲ್ಲಾಡಳಿತ ಹಣದಾಹಿ ಶಿಕ್ಷಣ ಸಂಸ್ಥೆಗಳ ಮೆಲೆ ಸರಿಯಾದ ನಿಯಂತ್ರಣ ಹೊಂದದೆ ಇರುವುದು ಜಿಲ್ಲಾಡಳಿತದ ನಿರ್ಲಕ್ಷತನ ತೋರಿಸುತ್ತದೆ. ಇಂತಹ ಕಹಿ ಘಟನೆ ಜಿಲ್ಲೆಯಲ್ಲಿ ಮತ್ತೊಮ್ಮೆ ನಡೆದಿದ್ದೆ ಆದರೆ ಕರವೇ ಉಗ್ರವಾಗಿ ಪ್ರತಿಭಟಿಸುತ್ತದೆ ಎಂದು ಎಚ್ಚರಿಸಿದರು. ಗಿಡ್ಡಪ್ಪ ವಡ್ಡರ, ಬಸವರಾಜ ಹಳ್ಳಪ್ಪನವರ, ಭಾಗ್ಯಾ ಬೆಟಗೇರಿ, ಲಕ್ಷ್ಮೀ ಹುಲ್ಲಳ್ಳಿ, ಆತ್ಮಾರಾಮ ನೀಲನಾಯಕ, ಬಸವರಾಜ ಅಂಬಿಗೇರ, ರಂಜಾನ ನದಾಫ್, ಡೋಂಗ್ರಿಸಾಬ ನದಾಫ್, ರವಿ ಅಂಗಡಿ, ರಮೇಶ ಬೀಳಗಿ, ಗಣಪತಿ ಭೊವಿ, ಉಮರ್ ಶೇಖ, ಸಂಗು ಅಂಬಿಗೇರ, ಮಲ್ಲು ಕಟ್ಟಿಮನಿ, ಅಶೋಕ ಶಿಳ್ಳಿಕೇತರ ಇತರರು ಇದ್ದರು.

loading...