ಶಾಸಕ ಎಚ್ಕೆಗೆ ಕೈ ತಪ್ಪಿದ ಸಚಿವ ಸ್ಥಾನ : ಕಾಂಗ್ರೆಸ್ ಸಂಘಟನೆಗಳಿಂದ ಪ್ರತಿಭಟನೆ

0
9
loading...

ಗದಗ: ಇತ್ತಿಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಚುನಾಯಿತಗೊಂಡ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡದಿರುವ ಕೈ ಕಮಾಂಡ ನಿಲುವನ್ನು ಪ್ರತಿಭಟಿಸಿ ಗದಗ ಜಿಲ್ಲೆಯ ಕಾಂಗ್ರೇಸ್‍ನ ವಿವಿಧ ಘಟಕಗಳು ನಗರದ ಮಹಾತ್ಮಾ ಗಾಂಧಿ ಸರ್ಕಲ್‍ದಲ್ಲಿ ಶನಿವಾರ ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ಕೈಗೊಂಡರಲ್ಲದೆ ಕೆಲವು ಚುನಾಯಿತ ಪ್ರತಿನಿಧಿಗಳು ಕೈ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಕೈಕೊಟ್ಟರು.

ಮುಂಜಾನೆ ಇಲ್ಲಿನ ಮಹಾತ್ಮಾ ಗಾಂಧಿ ಸರ್ಕಲ್‍ದಲ್ಲಿ ಜಮಾವಣೆಗೊಂಡ ಕಾಂಗ್ರೇಸ್‍ನ ವಿವಿದ ಘಟಕಗಳಾದ ಜಿಲ್ಲಾ, ತಾಲೂಕ, ಶಹರ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಜಿಲ್ಲಾ ಮಹಿಳಾ, ಯುವ, ಎಸ್ಸಿ-ಎಸ್ಟಿ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಗದಗ-ಬೆಟಗೇರಿ ನಗರಸಭೆಯ ಕಾಂಗ್ರೇಸ್‍ನ ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರು ಪ್ರತಿಭಟನೆ ನಡೆಸಿದರು. ಶಾಸಕ ಎಚ್.ಕೆ.ಪಾಟೀಲರು ಆರಂಭದಿಂದಲೂ ಇಂದಿನವರೆಗೂ ಕಾಂಗ್ರೇಸ್ ಪಕ್ಷದ ಕಟ್ಟಾಳು ಆಗಿ ಗದಗ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಪ್ರಬಲಗೊಳಿಸುವ ಮೂಲಕ ಕಾಂಗ್ರೇಸ್‍ನ ಭದ್ರಕೋಟೆಯನ್ನಾಗಿಸಿದವರು. ಹಲವು ಬಾರಿ ಸಚಿವರಾಗಿ ಗದಗ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಪ್ರಗತಿಪರ ಕಾರ್ಯಗಳನ್ನು ಮಾಡಿದ ಶ್ರೇಯಸ್ಸಿಗೆ ಪಾತ್ರರಾದವರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಉತ್ತಮ ಕಾರ್ಯ ಮಾಡಿದ್ದಕ್ಕೆ ಪ್ರಧಾನಮಂತ್ರಿಯವರಿಂದ ರಾಜ್ಯಕ್ಕೆ ಪ್ರಶಸ್ತಿಯ ಗರಿಯನ್ನು ತಂದುಕೊಟ್ಟವರಿಗೆ ಕಾಂಗ್ರೇಸ್ ಹೈಕಮಾಂಡ ಸಚಿವ ಸ್ಥಾನ ನೀಡದಿರುವದು ಖಂಡನೀಯ ಎಂದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಳೆ ಸುರಿಯಲು ಆರಂಭಿಸುತ್ತಿದ್ದಂತೆಯೇ ಪ್ರತಿಭಟನೆಯನ್ನು ತೀವ್ರಗೊಳಿಸಿದ ಪ್ರತಿಭಟನಾಕಾರರು ಕಾಂಗ್ರೇಸ್ ಪಕ್ಷದ ವರಿಷ್ಠರ ವಿರುದ್ಧ ಘೋಷಣೆ ಹಾಕಿದರು. ಟೈರ್‍ಗೆ ಬೆಂಕಿ ಹಚ್ಚಿದ್ದರಿಂದಾಗಿ ಕೆಲ ಕಾಲ ವಾಹನ-ಜನ ಸಂಚಾರಕ್ಕೆ ಅಡ್ಡಿ ಉಂಟಾಯಿತು ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಸಂಚಾರವನ್ನು ಸುಗಮಗೊಳಿಸಿದರು.

ಪೊಲೀಸಗೆ ತಗಲಿದ ಬೆಂಕಿ :ಪ್ರತಿಭಟನಾಕಾರರು ಪ್ರತಿಭಟನೆಯ ಸಂದರ್ಭದಲ್ಲಿ ಟೈರ್ ಹಚ್ಚಿದ ಬೆಂಕಿ ಆಕಸ್ಮಿಕವಾಗಿ ಬಂದೂಬಸ್ತಗೆ ಬಂದಿದ್ದ ಪೊಲೀಸ್‍ನ ಶರ್ಟ್‍ಗೆ ಆಕಸ್ಮಿಕವಾಗಿ ಹತ್ತಿಕೊಂಡಾಗ ಕೆಲಹೊತ್ತು ಪ್ರತಿಭಟನಾಕಾರರು ತಬ್ಬಿಬ್ಬಾದರು. ಪ್ರತಿಭಟನಾಕಾರರ ನೆರವಿಗೆ ಬಂದಿದ್ದ ಪೊಲೀಸನಿಗೆ ಬೆಂಕಿ ತಗುಲಿದಾಗ ಆತನ ನೆರವಿಗೆ ಯಾರೂ ಬರದಿರುವದು ವಿಪರ್ಯಾಸವೆನಿಸಿದ ಘಟನೆ ಜರುಗಿತು.
ರಾಜೀನಾಮೆ ನೀಡಿದವರು :1. ವಾಸಪ್ಪ ಕುಬೇರಪ್ಪ ಕುರಡಗಿ, ಅಧ್ಯಕ್ಷರು, ಜಿ.ಪಂ.ಗದಗ 2. ಕೃಷ್ಣಗೌಡ ಕೆ.ಪಾಟೀಲ, ಅಧ್ಯಕ್ಷರು, ತಾ.ಪಂ, ಗದಗ. 3. ಜಿ.ಎಸ್.ಗಡ್ಡದೇವರಮಠ, ಅಧ್ಯಕ್ಷರು, ಜಿಲ್ಲಾ ಕಾಂಗ್ರೇಸ್ ಸಮಿತಿ. 4. ಶ್ರೀಮತಿ ನೀಲಮ್ಮ ಸಿ.ಬೋಳನವರ, ಅಧ್ಯಕ್ಷರು, ಜಿಲ್ಲಾ ಮಹಿಳಾ ಕಾಂಗ್ರೇಸ್ ಸಮಿತಿ. 5. ಅಶೋಕ ಕೆ. ಮಂದಾಲಿ, ಅಧ್ಯಕ್ಷರು, ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ. 6. ಬಸವರಾಜ ಎಂ. ಕಡೇಮನಿ, ಅಧ್ಯಕ್ಷರು, ಪರಿಶಿಷ್ಠ ಜಾತಿ ವಿಭಾಗ, ಜಿಲ್ಲಾ ಕಾಂಗ್ರೇಸ್ ಸಮಿತಿ. 7. ಜಿ.ವ್ಹಿ.ಬಳಗಾನೂರ, ಅಧ್ಯಕ್ಷರು, ಗದಗ-ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿ. 8. ಬಿ.ಬಿ.ಅಸೂಟಿ, ಅಧ್ಯಕ್ಷರು ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಪ್ರಕಾಶ ಬೊಮ್ಮನಹಳ್ಳಿ ಸೇರಿದಂತೆ ಕಾಂಗ್ರೇಸ್ ಪಕ್ಷದಿಂದ ಚುನಾಯಿತಗೊಂಡ 23 ನಗರಸಭಾ ಸದಸ್ಯರು ಹಾಗೂ 5 ನಾಮನಿರ್ದೆಶನ ಸದಸ್ಯರೂ ಸಹ ಗದಗ ಜಿಲ್ಲಾ ಕಾಂಗ್ರೇಸ್ ಸಮಿತಿಯ ಮೂಲಕ ಕೆಪಿಸಿಸಿ ಅಧ್ಯಕ್ಷರೂ ಉಪ ಮುಖ್ಯಮಂತ್ರಿಗಳೂ ಆದ ಡಾ.ಜಿ.ಪರಮೇಶ್ವರ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಂಜುಮನ್‍ದಿಂದ ಪ್ರತಿಭಟನೆ : ಹಿರಿಯ ರಾಜಕಾರಣಿಯಾಗಿರುವ ಗದಗ ಜಿಲ್ಲೆಯ ಸಮಗ್ರ ಅಭಿವೃಧ್ದಿಗಾಗಿ ಶ್ರಮಿಸಿದ ಗದಗ ಮತ ಕ್ಷೇತ್ರದ ಶಾಸಕರಾದ ಎಚ್.ಕೆ.ಪಾಟೀಲರಿಗೆ ಈ ಬಾರಿಯ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಗದಗ-ಬೆಟಗೇರಿ ಅಂಜುಮನ-ಎ-ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ನಗರದ ಗಾಂಧಿ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸುವ ಮೂಲಕ ಕಾಂಗ್ರೇಸ್ ಹೈಕಮಾಂಡ್ ವಿರುದ್ಧ ಪ್ರತಿಟನೆ ನಡೆಸಿದರು.
ಅಂಜುಮನ್ ಅಧ್ಯಕ್ಷ ಸಂಸ್ಥೆಯ ಅಧ್ಯಕ್ಷ ಮಹ್ಮದಯುಸುಫ ನಮಾಜಿ ಮಾತನಾಡಿ ಗದಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಎಚ್.ಕೆ.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು, ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ಸಂಸ್ಥೆಯ ಕಾರ್ಯದರ್ಶಿ ಐ.ಆರ್.ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರದ ಬಡವರ ಸಮಸ್ಯಗಳಿಗೆ ಸ್ಪಂದಿಸಿ ವಸತಿ ಮೂಲಭೂತ ಸೌಲಭ್ಯ ಮುಂತಾದವಗಳನ್ನು ಒದಗಿಸಿರುವ ಪಾಟೀಲರಿಗೆ ಸಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕಿತ್ತು ಎಂದಿದ್ದಾರೆ.

ಬಾಷಾಸಾಬ ಮಲ್ಲಸಮುದ್ರ, ಸಂಸ್ಥೆಯ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಇಲಿಯಾಸ ಖೈರಾತಿ, ಉಮರಫಾರುಖ ಹುಬ್ಬಳ್ಳಿ, ಅಬ್ದುಲತೀಫ (ಮುನ್ನಾ) ಶೇಖ, ರಫೀಕ ಜಮಾಲಖಾನವರ, ಅನ್ವರ ಶಿರಹಟ್ಟಿ, ಶಫಿಅಹ್ಮದ ನವಲಗುಂದ, ಜಹಾಂಗೀರ ಮುಳಗುಂದ, ಮಹ್ಮದ ಶಾಲಗಾರ, ರಾಜೇಸಾಬ ಕಲ್ಮನಿ, ಮುಸ್ತಾಕ ಕೌತಾಳ, ಅಲ್ಲಾವುದ್ದಿನ, ರಜಾಕ ಕುಕನೂರ, ಮುಜಫರ ಮುಲ್ಲಾ, ಶಾರುಖ ಹುಯಿಲಗೋಳ, ನಿಜಾಮುದ್ದಿನ ಕಾತರಕಿ ಮುಂತಾದವರಿದ್ದರು.

loading...