ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ ಪ್ರಕರಣ ಬೇಧಿಸಿದ ಪೂಲೀಸರು

0
23
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಭತ್ತದ ಕಣಜ ಎಂದು ಖ್ಯಾತಿ ಪಡೆದ ಜಿಲ್ಲೆಯ ಗಂಗಾವತಿ ನಗರ, ಮತ್ತು ತಾಲೂಕು ಸದಾ ರಾಜಕೀಯ, ಸಾಮಾಜಿಕ ಸಂಘರ್ಷ, ಇತ್ಯಾದಿಗಳಿಂದ ಸುದ್ದಿಯಲ್ಲಿದ್ದು, ಇತ್ತಿಚಿಗೆ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ ಹಾಗೂ ಹಣದ ಬೇಡಿಕೆ ಇಟ್ಟಿದ್ದ ಪ್ರಕರಣ ಭಾರಿ ಸುದ್ದಿಯನ್ನೇ ಮಾಡಿತ್ತು, ಈ ಪ್ರಕರಣವನ್ನು ಭೆಧಿಸುವಲ್ಲಿ ಪೂಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ 10 ಜನ ಆರೋಪಿತರನ್ನು ಬಂಧಿಸಿ ಅವರಿಂದ 500 ರೂ. ಮುಖಬೆಲೆಯ 1.32 ಲಕ್ಷ ಕೋಟಾ ನೋಟು ವಶ ಪಡಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.

ಗಂಗಾವತಿ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿಗೆ ಜೂ.6ರಂದು ಕೊಲೆ ಬೆದರಿಕೆ ಕರೆ ಮತ್ತು ಪತ್ರ ಬಂದಿದ್ದು, ಇದರಿಂದ ನಗರದಲ್ಲಿ ಆತಂಕ ಸೃಷ್ಟಿಯಾಗಿತ್ತು, ಈ ಬಗ್ಗೆ ಶಾಸಕರು ನಗರ ಠಾಣೆಗೆ ಹೋಗಿ ದೂರು ನೀಡಿದ್ದು, ಈ ಸಂಬಂಧ ಪೂಲೀಸರು ತನಿಖೆ ಕೈಗೊಂಡಿದ್ದರು, ನಾಲ್ಕು ದಿನದಲ್ಲಿ ಆರೋಪಿತರನ್ನು ಬಂಧಿಸಿ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಂಗಳವಾರ ಜಿಲ್ಲಾ ಪೂಲೀಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಎಸ್.ಪಿ. ಡಾ.ಅನೂಪ್ ಶೆಟ್ಟಿಯವರು ಪ್ರಕರಣ ಕುರಿತು ವಿವರಿಸಿದರು. ಹತ್ತು ಹಲವು ಅನುಮಾನ ಮತ್ತು ಬೇರೆ ತಿರುವು ಪಡೆಯುತ್ತಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಅನಾಮೀಕ್ ಪತ್ರದಲ್ಲಿ 50 ಲಕ್ಷ ಹಣವನ್ನು ನೀಡದೇ ವಂಚಿಸಿದ್ದರಿ.
ಹಣ ವಾಪಸ್ ಮಾಡದಿದ್ದರೆ ಈ ವಿಷಯವನ್ನು ಪೊಲೀಸ್ ಮತ್ತು ಮಾಧ್ಯಮದವರಿಗೆ ತಿಳಿಸಲಾಗುವುದು ಎಂದು ಅನಾಮಿಕ ಬೆದರಿಕೆ ಪತ್ರ ಕಳಿಸಿದ್ದ 10 ಜನ ಆರೋಪಿಗಳನ್ನು ಬಂದಿಸಿ 1.32 ಲಕ್ಷ ಕೋಟಾ ನೋಟು ಹಾಗೂ 6 ಮೋಬೈಲ್‍ಗಳನ್ನು ವಶ ಪಡಿಸಿಕೊಳ್ಳುವಲ್ಲಿ ಕೊಪ್ಪಳ ಪೊಲೀಸ್‍ರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ. ಎ ಅನೂಪ ಶೆಟ್ಟಿ ಹೇಳಿದರು. ಪತ್ರದಲ್ಲಿ ಕೋಬ್ರಾ ಎಂದು ಬರೆದು 2014ರಿಂದ 2018ರವರೆಗೆ ನಾವು ಕೊಟ್ಟ ಕೋಟಾ ನೋಟುಗಳನ್ನು ಬಳಸುತ್ತಿದ್ದರಿ ಇನ್ನೂ 3-4 ದಿನಗಳಲ್ಲಿ 10 ಲಕ್ಷ ರೂ. ಹಣ ನೀಡದಿದ್ದರೆ ಕೋಟಾ ನೋಟು ಹಣವನ್ನು ನಿಮ್ಮ ಹೆಸರಿನಲ್ಲಿ ಕೋರಿಯರ್ ಕಳಿಸಿ ಪೊಲೀಸ್‍ರಿಗೆ ಮಾಹಿತಿ ನೀಡಿ ನಿಮ್ಮ ಬಗ್ಗೆ ಪತ್ರಿಕೆಯಲ್ಲಿ ಅಪಪ್ರಚಾರ ಮಾಡಿ ಜನರಲ್ಲಿ ನಿಮ್ಮ ಬಗ್ಗೆ ಅಸಹ್ಯ ಭಾವನೆ ಬರುವ ಹಾಗೆ ಮಾಡುತ್ತೇವೆ ಅಂತಾ ಜೀವ ಬೇದರಿಕೆ ಹಾಕಿ ಕವರಲ್ಲಿ 500 ರೂ. ಮುಖಬೆಲೆಯ 4 ನೋಟುಗಳನ್ನು ಇಟ್ಟು ಪರಣ್ಣರಿಗೆ ಮುಟ್ಟಿಸುವಂತೆ ಕೊಟ್ಟಿದ್ದರು.

ಶಾಸಕ ಮುನವಳ್ಳಿ ದೂರಿನ ಆದಾರದ ಮೇಲೆ ಕಲಂ 120(ಬಿ) 489(ಎ) 506, 507 ಸಹಿತ 34 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಎಸ್ಪಿ ಡಾ. ಅನೂಪ ಶೆಟ್ಟಿ ಹಾಗೂ ಗಂಗಾವತಿ ಡಿವೈಎಸ್ಪಿ ಎಸ್.ಎಸ್.ಹೂಲ್ಲೂರು ಮಾರ್ಗದರ್ಶನದಲ್ಲಿ ಇರ್ವ ಡಿಎಸ್‍ಪಿ ನಾಲ್ಕು ಜನ ಇನ್ಸ್‍ಪೇಕ್ಟರ್, 4 ಪಿಎಸ್‍ಐಗಳು ಹಾಗೂ 10ಕ್ಕೂ ಹೆಚ್ಚು ಪೆದೆಗಳು ಸೇರಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮಾಡಿಸಲಾಗಿತ್ತು. ತನಿಖೆ ನಡೆಸಿದ ತಂಡವು ಬಳ್ಳಾರಿಯಲ್ಲಿ ಆರೋಪಿಗಳಾದ ಐಶಾಕ ಎಂ, ಕಾರಟಗಿಯ ಎರ್ರಿಸ್ವಾಮಿ ಬಿಲ್ಗಾರ್, ಗಂಗಾವತಿಯ ಮಹ್ಮದ್ ನಾತೀಕ್ ಆಲಂ, ಸಿದ್ದಾಪೂರದ ಮಹ್ಮದ್ ಫಾರೂಕ, ಮೇನ್ ಆರೋಪಿಗಳಾಗಿದ್ದಾರೆ. ಅದರಂತೆ ಇವರಿಗೆ ಸಹಾಯ ಮಾಡಿದ ಮಧು, ಮತ್ತು ನಾಗರಾಜ, ಹಾಗೂ ಕೋಟಾ ನೋಟ್ ಬಳಕೆ ಮಾಡಿದ ಬಳ್ಳಾರಿಯ ವಿಜಯಲಕ್ಷ್ಮಿ ಗಂಡ ರಾಘವೇಂದ್ರ, ಇವಳ ಪತಿ ರಾಘವೇಂದ್ರ, ಇವರ ಮಕ್ಕಳಾದ ಆಕಾಶ, ನಿರಂಜನ್ ಮತ್ತು ನಕಲಿ ಸಿಮ್ ನೀಡಿ ಸಹಾಯ ಮಾಡಿದ ಆನಂದ, ಹನಮಂತ, ರಾಮಣ್ಣ, ಸೇರಿದಂತೆ 13 ಜನರ ಮೇಲೆ ದೂರು ದಾಖಲಿಸಿ ಬಂಧಿಸಲಾಗಿದೆ. ಆರೋಪಿತರಿಂದ 500 ರೂ. ಮುಖ ಬೆಲೆಯ 264 ಅಂದರೆ 1.32ಲಕ್ಷ ಕೋಟಾ ನೋಟುಗಳು ಹಾಗೂ 6 ಮೋಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಗೋಷ್ಠಿಯಲ್ಲಿ ಡಿಎಸ್‍ಪಿ ಎಸ್.ಎಸ್.ಹುಲ್ಲೂರು, ಪಿಐಗಳಾದ ರಾಜಕುಮಾರ ವಾಜಂತ್ರಿ, ಜಿ.ಎಸ್.ಹೆಬ್ಬಾಳ, ದೀಪಕ್ ಬೂಸರಡ್ಡಿ, ರವಿ ಉಕ್ಕುಂದ, ವಿನಯಕುಮಾರ್, ಪ್ರಕಾಶ ಮಾಳಿ ಸೆರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆರೋಪಿತರು ರಾಜಕೀಯ ಕಾರ್ಯಕರ್ತರು : ಹಣ ವಸೂಲಿ ಮಾಡಲು ಶಾಸಕರಿಗೆ ಖೋಟಾ ನೋಟಿನ ಬೆದರಿಕೆ ಹಾಕಿರುವ ಐಶಾಕ ಜಯರಾಜ, ಎರ್ರಿಸ್ವಾಮಿ ಬಿಲಗಾರ್ ಸೇರಿದಂತೆ ಇತರರು ಪ್ರಮುಖ ರಾಜಕೀಯ ಪಕ್ಷಗಳ ಸಕ್ರಿಯ ಕಾರ್ಯಕರ್ತರಾಗಿದ್ದು, ಇವರಲ್ಲಿ ಎರ್ರಿಸ್ವಾಮಿ ಬಿಲಗಾರ್ ಶಾಸಕರಿಗೆ ಪರಿಚಿತನಿದ್ದು, ಐಶಾಕ ಜಯರಾಜನ ಮೂಲಕ ಸುಮಾರು ವರ್ಷಗಳಿಂದ ಜನಪ್ರತಿನಿಧಿಗಳು, ವಾಣಿಜ್ಯೋಧ್ಯಮಿಗಳಿಗೆ ಈ ರೀತಿಯ ಬೆದರಿಕೆಗಳನ್ನು ಹಾಕುವುದು ಹಾಗೂ ಇದಕ್ಕೆ ಎರ್ರಿಸ್ವಾಮಿಬಿಲಗಾರ್ ಮಧ್ಯೆಸ್ಥಿಕೆಯಲ್ಲಿ ಹಣ ವಸೂಲಿ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಬಳ್ಳಾರಿಯಿಂದ ಖೋಟಾ ನೋಟು : ಗಂಗಾವತಿಗೆ ಚುನಾವಣೆ ಸಂದರ್ಭದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಆರೋಪಿತರಾಗಿರುವ ವಿಜಯಲಕ್ಷ್ಮಿ ಗಂಡ ರಾಘವೇಂದ್ರ, ಇವಳ ಪತಿ ರಾಘವೇಂದ್ರ, ಇವರ ಮಕ್ಕಳಾದ ಆಕಾಶ, ನಿರಂಜನ್ ಇವರ ಮೂಲಕ ಗಂಗಾವತಿಗೆ ಖೋಟಾ ನೋಟು ಹರಿದು ಬಂದಿರುವ ಅನುಮಾನಗಳು ಮೂಡುತ್ತಿವೆ. ಗಂಗಾವತಿಯಲ್ಲಿ ಈಗಾಗಲೇ ಖೋಟಾ ನೋಟು ಪತ್ತೆಯಾಗಿರುವ ಹಲವಾರು ಪ್ರಕರಣಗಳ ಉದಾಹರಣೆಗಳು ಇವೆ. ಎರ್ರಿಸ್ವಾಮಿ ಮೂಲಕ ರಾಜಕೀಯ ಪಕ್ಷಗಳ ನಾಯಕರು ಖೋಟಾ ನೋಟು ಚಲಾವಣೆ ಮಾಡಿರಬಹುದೆಂಬ ಶಂಕೆಗೆ ಈ ಪ್ರಕರಣ ಸಾಕಷ್ಟು ಪುಷ್ಠಿನೀಡಿದೆ.
ಪೂಲೀಸರ್ ಯಶಸ್ವಿ ಕಾರ್ಯಾಚರಣೆ : ರಾಜಕೀಯ, ಹಾಗೂ ಕೋಮು ಸಂಘರ್ಷಗಳಂತಹ ಘಟನೆಗಳಿಂದ ನಲುಗಿ ಹೋಗಿರುವ ಗಂಗಾವತಿಯಲ್ಲಿ ನಡೆದಿದ್ದ ಈ ಪ್ರಕರಣವನ್ನು ರಾಜಕೀಯಕ್ಕೆ ತಳುಕು ಹಾಕಿ, ಮೊತ್ತೊಂದು ಸಂಘರ್ಷಕ್ಕೆ ಎಳೆದುತರುವ ಹುನ್ನಾರವನ್ನು ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿಯವರು ಹುಸಿಗೊಳಿಸಿ, ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವ ಮೂಲಕ ನಡೆಯಬಹುದಾಗಿದ್ದ ಅನಾಹುತಗಳನ್ನು ತಪ್ಪಿಸುವಲ್ಲಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಜಿಲ್ಲಾ ಪೂಲೀಸರ ನಡೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಬಹುದು.

loading...