ಸಂಕೇಶ್ವರದಲ್ಲಿ  ಗೂಬೆ ಬೇಟೆಗಾರರ ಬೇಟೆಯಾಡಿದ ಅಧಿಕಾರಿಗಳು.

0
55
loading...

ಸಂಕೇಶ್ವರದಲ್ಲಿ  ಗೂಬೆ ಬೇಟೆಗಾರರ ಬೇಟೆಯಾಡಿದ ಅಧಿಕಾರಿಗಳು.

ಕನ್ನಡಮ್ಮ ಸುದ್ದಿ-ಬೆಳಗಾವಿ ಜಿಲ್ಲೆಯ ಸಂಕೇಶ್ವರ ನಗರದ ರಾಷ್ಟ್ರೀಯ ಹೆದ್ದಾರಿ 4 – ರಲ್ಲಿ ಜೀವಂತ ಗೂಬೆ ಸಾಗಿಸುತ್ತಿದ್ದಾಗ ಬೇಟೆಗಾರರನ್ನ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಮಂಗಳವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಬೆ ಬೇಟೆಗಾರರನ್ನು ಬಂಧಿಸಲಾಗಿದೆ,ಈ ಹಂತಕರು ಮಹಾರಾಷ್ಟ್ರ ಮೂಲದವರಾದ ಹಿಟ್ನಿ
ಗ್ರಾಮದ ಬಾಹುಸಾಹೇಬ ಅಣ್ಣಪ್ಪಾ ಸಕರೆ ( ಕಾಂಬಳೆ ) ಹಾಗೂ ಪ್ರಮೋದ ಅಪ್ಪಾಸಾಹೇಬ ಮೋಕಾಶಿ ಎಂಬುವರು ಬಂಧಿಸಲಾಗಿದೆ .

ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಪ್ರಶಾಂತ ಶಂಕೆನ್ ಅವರ ಮಾರ್ಗದರ್ಶನದಲ್ಲಿ ಸಂಗಮೇಶ್ ಪ್ರಭಾಕರ್ , ಜಿ ಆರ್ ಸರಿಕರ್ , ಪಿ.ಬಿ.ತಂಗಡಿ , ಅರೀಪ್ ಮುಲ್ಲಾ , ಎಸ್.ಎಸ್. ಮುಲ್ಲಾ ,ಎಸ್ ಎಸ್ ಮಂಡ್ರೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿಗಳನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

loading...