ಸಂಕೇಶ್ವರ ಕಾರ್ಪೊರೇಷನ್ ಬ್ಯಾಂಕ್ ಸ್ಥಳಾಂತರಕ್ಕೆ ಗ್ರಾಹಕರ ವಿರೋಧ

0
24
loading...

ಸಂಕೇಶ್ವರ ಕಾರ್ಪೊರೇಷನ್ ಬ್ಯಾಂಕ್ ಸ್ಥಳಾಂತರಕ್ಕೆ ಗ್ರಾಹಕರ ವಿರೋಧ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿರುವ ಕಾರ್ಪೊರೇಷನ್ ಬ್ಯಾಂಕ ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವುದನ್ನು ಗ್ರಾಹಕರು ವಿರೋಧಿಸಿ ಇಂದು ವಿಭಾಗೀಯ ಕಚೇರಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು .
ಶನಿವಾರ ಬೆಳಗಾವಿ ವಿಭಾಗೀಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಪಟ್ಟಣದಲ್ಲಿ ಈಗಿರುವ ಸ್ಥಳದಲ್ಲಿ ಬ್ಯಾಂಕ್ ಜನರಿಗೆ ಬಹಳ ಸಹಾಯಕವಾಗಿದೆ.ಆದರೆ ಬೇರೆ ಕಡೆ ಬ್ಯಾಂಕ್ ಸ್ಥಳಾಂತರ ಮಾಡಿದರೆ ಗ್ರಾಹಕರಿಗೆ ಬಹಳ ತೊಂದರೆಯಾಗುತ್ತದೆ.ಆದ್ದರಿಂದ ಯಾವುದೇ ಕಾರಣಕ್ಕೂ ಬ್ಯಾಂಕ್ ಸ್ಥಳಾಂತರಿಸಬಾರದು ಸ್ಥಳಾಂತರಿಸಿದರೆ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಕೇಶ್ವರ ಪುರಸಭೆ ಸದಸ್ಯರಾದ ದಿಲೀಪ ಹೋಸಮನಿ,ಜಿತೇಂದ್ರ ಮರಡಿ,ಕನಪಾ ಜಿಲ್ಲಾ ಉಪಾಧ್ಯಕ್ಷರಾದ ಮಹೇಶ ಹಟ್ಟಿಹೊಳಿ,ಕರವೆ ಅಧ್ಯಕ್ಷ ಪ್ರಮೋದ ಹೊಸಮನಿ ,ಬಾಬು ಭೂಸಗೋಳ,ಅನಿಲ ಖಾತೆದಾರ ಸೇರಿದಂತೆ ಇತರರು ಇದ್ದರು.

loading...